Breaking News
recent

16ನೇ ವರ್ಷದ ವೆಡ್ಡಿಂಗ್ ಆನಿವರ್ಸರಿ ಸಂಭ್ರಮದಲ್ಲಿ ಪವರ್ ಸ್ಟಾರ್.!

ನಟ ಸಾರ್ವಭೌಮ ಡಾ. ರಾಜ್ ಕುಮಾರ್ ಅವರ ಕಿರಿಯ ಪುತ್ರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಇಂದು ವಿವಾಹ ಮಹೋತ್ಸವದ ಸಂಭ್ರಮ.
power star marriage photos

ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ತಮ್ಮ 16ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಇಂದು ಭರ್ಜರಿಯಾಗಿ ಆಚರಿಸಿಕೊಳ್ಳುತ್ತಿದ್ದಾರೆ.

ಅಂದಹಾಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ದಂಪತಿಗಳು ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳಲು ಎರಡು ದಿನಗಳ ಹಿಂದೆಯೇ ಮಾಲ್ಡೀವ್ಸ್ ಗೆ ಹಾರಿದ್ದು, ವಿದೇಶದಲ್ಲಿ ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಲು ಪುನೀತ್ ದಂಪತಿಗಳು ಪ್ಲಾನ್ ಮಾಡಿದ್ದಾರೆ.[ನಿಮ್ಮ ಮನೆ ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ಪಣ ತೊಟ್ಟ ಅಪ್ಪು-ರಮ್ಯಾ]

ಸದ್ಯಕ್ಕೆ ಸ್ಯಾಂಡಲ್ ವುಡ್ ಕ್ಷೇತ್ರದಲ್ಲಿ ಬಹು ಬೇಡಿಕೆ ಇರುವ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ತಮ್ಮ ಬಿಸಿ ಶೆಡ್ಯೂಲ್ ನಲ್ಲಿಯೂ ತಮ್ಮ ಕುಟುಂಬದ ಕಡೆ ಗಮನ ಹರಿಸಿದ್ದು, ಇದೀಗ ಕುಟುಂಬ ಸಮೇತರಾಗಿ ವಿವಾಹ ಮಹೋತ್ಸವವನ್ನು ಆಚರಿಸಲು ಮಾಲ್ಡೀವ್ಸ್‌ ಗೆ ವಿಮಾನ ಏರಿದ್ದಾರೆ.

ಪವರ್ ಸ್ಟಾರ್ ಪುನೀತ್ ಅವರು ಅಶ್ವಿನಿ ಎಂಬವರನ್ನು 1999 ಡಿಸೆಂಬರ್ 1 ರಂದು ಕೈ ಹಿಡಿದಿದ್ದರು. ಇದೀಗ ಈ ದಂಪತಿಗಳಿಗೆ ದ್ರಿತಿ ಮತ್ತು ವಂದಿತಾ ಎಂಬ ಪುತ್ರಿಯರು ಇದ್ದಾರೆ. ಒಟ್ನಲ್ಲಿ ಪುನೀತ್ ಅವರದು ಸುಂದರ ಪರಿವಾರ.[ಪವರ್ ಸ್ಟಾರ್ 'ಚಕ್ರವ್ಯೂಹ'ದ ಜಬರ್ದಸ್ತ್ ಫಸ್ಟ್ ಲುಕ್ ಪೋಸ್ಟರ್ ಔಟ್]

ಅದೇನೇ ಇರಲಿ ಈ ದಿನ ಬಹಳ ಸಂಭ್ರಮದಿಂದ ತಮ್ಮ 16ನೇ ವರ್ಷದ ವೆಡ್ಡಿಂಗ್ ಆನಿವರ್ಸರಿ ಆಚರಿಸಿಕೊಳ್ಳುತ್ತಿರುವ ಪವರ್ ಸ್ಟಾರ್ ಪುನೀತ್ ಅವರಿಗೆ ನಮ್ಮ ಕಡೆಯಿಂದಲೂ ವಿಶ್ ಯೂ ಹ್ಯಾಪಿ ವೆಡ್ಡಿಂಗ್ ಆನಿವರ್ಸರಿ.
Fresh Kannada

Fresh Kannada

No comments:

Post a Comment

Google+ Followers

Powered by Blogger.