Breaking News
recent

12 ವರ್ಷದ ಬಳಿಕ ತೆರೆಮೇಲೆ ಕರೀನಾ, ಹೃತಿಕ್!

ಬಾಲಿವುಡ್‍ನಲ್ಲಿ ಮೂಡಿಬಂದ ಕಭಿ ಕುಷಿ ಕಭಿ ಗಮ್ ಸಿನಿಮಾ ಯಾರಿಗೆ ಗೊತ್ತಿಲ್ಲ ಹೇಳಿ. ಶಾರೂಖ್ ಕಜೋಲ್ ಜೋಡಿಯಷ್ಟೇ ಮೋಡಿ ಮಾಡಿದ ಹೃತಿಕ್ ರೋಷನ್ ಹಾಗೂ ಕರೀನಾ ಕಪೂರ್ ಜೋಡಿಯನ್ನು ಮರೆಯುವ ಹಾಗಿಲ್ಲ. ಇದೀಗ ಮತ್ತೆ ಈ ಜೋಡಿ ತೆರೆಮೇಲೆ ಒಟ್ಟಾಗಿ ಕಾಣಿಸಿಕೊಳ್ಳುತ್ತಿದೆ.
12 ವರ್ಷದ ಬಳಿಕ ತೆರೆಮೇಲೆ ಕರೀನಾ, ಹೃತಿಕ್!

ಕರಣ್ ಜೋಹಾರ್ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರದಲ್ಲಿ ಹೃತಿಕ್, ಕರೀನಾ ತುಂಬಾನೇ ಹಾಟ್ ಆಗಿ ಮಿಂಚಿದ್ದರು. ಇದೀಗ ಬರೋಬ್ಬರಿ 12 ವರ್ಷದ ಬಳಿಕ ಈ ಜೋಡಿ ತೆರೆಮೇಲೆ ಬರಲಿದೆ. ಸಂಜಯ್ ಗುಪ್ತ ನಿರ್ದೇಶನದ ಚಿತ್ರವೊಂದರಲ್ಲಿ ಈ ಇಬ್ಬರು ಒಟ್ಟಾಗಿ ಕಾಣಿಸಿಕೊಳ್ಳಲಿದ್ದಾರೆ.
ಸದ್ಯ ಮಹೇಂಜೋದಾರೋ ಚಿತ್ರದಲ್ಲಿ ಬ್ಯುಸಿಯಾಗಿರುವ ಹೃತಿಕ್, ಇದಾದ ನಂತರ ತಮ್ಮ ತಂದೆ ರಾಕೇಶ್ ರೋಷನ್ ನಿರ್ಮಾಣದ ಚಿತ್ರದಲ್ಲಿ ನಟಿಸಲಿದ್ದಾರೆ. ಇದೇ ಚಿತ್ರದಲ್ಲಿ ಕರೀನಾ ಹೃತಿಕ್ ಸಾಥ್ ನೀಡಲಿದ್ದಾರೆ. ಇದೊಂದು ಲವ್ ಸ್ಟೋರಿ ಜೊತೆಗೆ ಸೇಡಿನ ಕತೆಯ ಅಂಶವನ್ನು ಹೊಂದಿದೆ ಎನ್ನಲಾಗಿದೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.