Breaking News
recent

ಪ್ರಿಯಕರನ ಸಾವಿನಿಂದ ನೊಂದು 11 ಮಹಡಿಯಿಂದ ಜಿಗಿದು ಆತ್ಮಹತ್ಯೆ

ಅಪಘಾತದಲ್ಲಿ ಪ್ರಿಯಕರ ಸಾವನ್ನಪ್ಪಿದ ದುಃಖ ತಡೆದುಕೊಳ್ಳಲಾಗದೇ ಯುವತಿಯೊಬ್ಬಳು ಕಸ್ತೂರ್ಬಾ ರಸ್ತೆಯಲ್ಲಿರುವ ಬಹುಮಹಡಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಪ್ರಿಯಕರನ ಸಾವಿನಿಂದ ನೊಂದು 11 ಮಹಡಿಯಿಂದ ಜಿಗಿದು ಆತ್ಮಹತ್ಯೆ

ಬ್ಯಾಟಾರಾಯನಪುರ ನಿವಾಸಿ ಪೂಜಾ(21) ಆತ್ಮಹತ್ಯೆಗೆ ಶರಣಾಗಿರುವ ಯುವತಿ. ಬಾಬಾ ಜಾಬ್ಸ್ ಕಂಪನಿಯ ಉದ್ಯೋಗಿಯಾಗಿದ್ದ ಪೂಜಾ ಇಂದು ಪ್ರೆಸ್ಟೀಜ್ ಕಂಪನಿಗೆ ಸೇರಿದ ಕಟ್ಟಡದಲ್ಲಿರುವ ಕಂಪೆನಿಯ 11 ಮಹಡಿಯಿಂದ ಜಿಗಿದು  ಮೃತಪಟ್ಟಿದ್ದಾಳೆ.
ಪೂಜಾ , ಅದೇ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಜೆಸಿ ನಗರದ ನಿವಾಸಿ ಚರಣ್ ಪರಸ್ಪರ ಪ್ರೀತಿಸುತ್ತಿದ್ದರು.  ಅಷ್ಟೇ ಅಲ್ಲದೇ ಕೈ ಮೇಲೆ ಹಾರ್ಟ್ ಸಿಂಬಲ್ ಹಚ್ಚೆಯನ್ನು ಪೂಜಾ ಬರೆಸಿಕೊಂಡಿದ್ದಳು. ಆದರೆ ಡಿ.6  ಭಾನುವಾರ ಸ್ನೇಹಿತರ ಜೊತೆ ಚರಣ್ ಬೈಕಿನಲ್ಲಿ ಹೋಗುತ್ತಿದ್ದಾಗ ಟಾಟಾ ಏಸ್‍ಗೆ ಬೈಕ್ ಡಿಕ್ಕಿ ಹೊಡೆದಿತ್ತು. ಈ ಅಪಘಾತದಲ್ಲಿ ಚರಣ್ ಸಾವನ್ನಪ್ಪಿದ್ದ. ಈ ವಿಚಾರ ತಿಳಿದು ಮನನೊಂದಿದ್ದ ಪೂಜಾ ಈಂದು ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಡೆತ್‍ನೋಟ್‍ನಲ್ಲಿ ಏನಿದೆ?
ಐ ಯಾಮ್ ಸಾರಿ. ನಾನು ಆತ್ಮಹತ್ಯೆ ಮಾಡಿಕೊಳ್ಳಬಾರದು. ಆದರೆ ನನಗೆ ತುಂಬಾ ಸಮಸ್ಯೆ ಇದೆ. ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಆಗುತ್ತಿಲ್ಲ. ನನ್ನನ್ನು ನಂಬಿದವರಿಗೆ ಮೋಸ ಮಾಡುತ್ತಿದ್ದೇನೆ. ಐ ಯಾಮ್ ಸಾರಿ. ನನ್ನನ್ನು ಕ್ಷಮಿಸಿ ಎಂದು ಬರೆದುಕೊಂಡಿದ್ದಾಳೆ.
ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೂಜಾ ಅವರ ಮೊಬೈಲ್‍ನ್ನು ಪೊಲೀಸರು ವಶ ಪಡೆದಿದ್ದಾರೆ. Source: Public Tv
Fresh Kannada

Fresh Kannada

No comments:

Post a Comment

Google+ Followers

Powered by Blogger.