Breaking News
recent

ಈ ಸ್ಮಾರ್ಟ್‍ಫೋನ್ ಇದ್ದಲ್ಲಿ 10 ದಿನಗಳ ಕಾಲ ಬ್ಯಾಟರಿ ಚಿಂತೆ ಇಲ್ಲ!

ಪ್ರವಾಸ, ಟ್ರಕ್ಕಿಂಗ್ ಹೋದಾಗ ಸ್ಮಾರ್ಟ್‍ಫೋನ್ ಬ್ಯಾಟರಿಯದ್ದೇ ಚಿಂತೆ. ಆದರೆ ನಿಮ್ಮ ಈ ಎಲ್ಲ ಚಿಂತೆಗಳನ್ನು ದೂರ ಮಾಡಲು ಚೀನಾ ಕಂಪೆನಿಯಿಂದ 10000 mAh ಸಾಮರ್ಥ್ಯದ  ಬ್ಯಾಟರಿಯಿರುವ ಸ್ಮಾರ್ಟ್‍ಫೋನ್ ಬಿಡುಗಡೆ ಮಾಡಲಿದೆ.
Oukitel K10000

ಔಕ್‍ಟೆಲ್ ಕಂಪೆನಿಯೊಂದು ಕೆ10000 ಹೆಸರಿನ ಡ್ಯುಯಲ್ ಸಿಮ್ ಸ್ಮಾರ್ಟ್‍ಫೋನ್ ಬಿಡುಗಡೆ ಮಾಡಲಿದ್ದು ಇದಕ್ಕೆ ತೆಗೆಯಲು ಸಾಧ್ಯವಾಗದ 10000  mAh ಸಾಮರ್ಥ್ಯದ  ಬ್ಯಾಟರಿಯನ್ನು ನೀಡಿದೆ. ಈ ಸ್ಮಾರ್ಟ್‍ಫೋನ್ ಇದ್ದಲ್ಲಿ 10, 15 ದಿನಗಳ ಕಾಲ ಫೋನ್ ಚಾರ್ಜ್ ಮಾಡುವ ಅಗತ್ಯವಿಲ್ಲ ಎಂದು ಕಂಪೆನಿ ಹೇಳಿದೆ.

ಚೀನಾದ ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್‍ಫೋನ್ ಪ್ರೀ ಆರ್ಡರ್ ಮಾಡಬಹುದಾಗಿದ್ದು, ಜನವರಿ 2 ರಂದು ಸ್ಮಾರ್ಟ್‍ಫೋನ್ ಬಿಡುಗಡೆಯಾಗಲಿದ್ದು ಈ ಫೋನಿಗೆ 239.99 ಡಾಲರ್(ಅಂದಾಜು 16 ಸಾವಿರ ರೂ.) ನಿಗದಿ ಪಡಿಸಿದೆ. ಶಕ್ತಿಶಾಲಿ ಬ್ಯಾಟರಿ ನೀಡಿದ ಕಾರಣ ಸ್ಮಾರ್ಟ್‍ಫೋನ್ 184 ಗ್ರಾಂ ತೂಕ, 143.00 * 77.00 *9.00 ಮಿ.ಮೀ ಗಾತ್ರವನ್ನು ಹೊಂದಿದೆ.

5.5 ಇಂಚಿನ ಸ್ಕ್ರೀನ್(1280*720 ಪಿಕ್ಸೆಲ್) ಹೊಂದಿರುವ ಸ್ಕ್ರೀನ್, ಮಿಡಿಯಾಟೆಕ್ 1 ಕ್ವಾಡ್ ಕೋರ್ 1GHz ಪ್ರೊಸೆಸರ್, 2ಜಿಬಿ RAM, 32 ಜಿಬಿ ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ, ಆಂಡ್ರಾಯ್ಡ್ 5.1 ಲಾಲಿಪಪ್ ಆಪರೇಟಿಂಗ್ ಸಿಸ್ಟಂ ಹೊಂದಿದ್ದು 4ಜಿ, 3ಜಿ, ವೈಫೈ, ಕನೆಕ್ವಿಟಿ ವಿಶೇಷತೆಗಳನ್ನು ಒಳಗೊಂಡಿದೆ. ಮುಂದುಗಡೆ 2 ಎಂಪಿ ಕ್ಯಾಮೆರಾ ಇದ್ದರೆ, ಹಿಂದುಗಡೆ 8 ಎಂಪಿ ಕ್ಯಾಮೆರಾ ಇದೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.