Breaking News
recent

ಸೂಪರ್ ಸ್ಟಾರ್ ರಜನಿಕಾಂತ್ 10 ಕೋಟಿ ಕೊಟ್ಟಿದ್ದು ನಿಜಾನಾ?

ಸಹಾಯ ಹಸ್ತ ಚಾಚುವುದರಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ನಂಬರ್ 1. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಅದೆಷ್ಟೋ ನಿರ್ಮಾಪಕರ ಪಾಲಿಗೆ ಆಪತ್ಬಂಧವರಾಗಿರುವ ರಜನಿ, ಚೆನ್ನೈನಲ್ಲಿನ ಪ್ರವಾಹ ಸಂತ್ರಸ್ತರಿಗೆ ದೇಣಿಗೆ ನೀಡುವುದರಲ್ಲಿ ಹಿಂದು ಮುಂದು ನೋಡ್ತಾರಾ?

ಶ್ರೀ ರಾಘವೇಂದ್ರ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಮೂಲಕ ಸಿ.ಎಂ ಪರಿಹಾರ ನಿಧಿಗೆ ರಜನಿಕಾಂತ್ ಈ ಹಿಂದೆ 10 ಲಕ್ಷ ರೂಪಾಯಿ ನೀಡಿ ಅಭಿಮಾನಿಗಳಿಂದ ವ್ಯಾಪಕ ಟೀಕೆಗೆ ಗುರಿಯಾಗಿದ್ದರು.

ಇದರಿಂದ ಎಚ್ಚೆತ್ತ ರಜನಿಕಾಂತ್ ಇದೀಗ ಬರೋಬ್ಬರಿ 10 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ ಅಂತ ಸುದ್ದಿ ಹರಿದಾಡುತ್ತಿದೆ. ನಿಜಕ್ಕೂ ರಜನಿಕಾಂತ್ 10 ಕೋಟಿ ರೂಪಾಯಿ ನೀಡಿದ್ದಾರಾ ಅಂತ ಕನ್ಫರ್ಮ್ ಮಾಡಿಕೊಳ್ಳೋಕೆ ಹೊರಟರೆ, ಮೂಲಗಳಿಂದ ಸಿಗುವ ಉತ್ತರ 'ಇಲ್ಲ'.!

ಹೌದು, ಫ್ರೆಶ್ ಕನ್ನಡ  ಸಿಬ್ಬಂದಿ ರಜನಿಕಾಂತ್ ಆಪ್ತ ವಲಯವನ್ನ ಸಂಪರ್ಕ ಮಾಡಿದಾಗ 10 ಕೋಟಿ ರೂಪಾಯಿ ದೇಣಿಗೆ ವಿಷಯ 'ಸುಳ್ಳು ಸುದ್ದಿ' ಅಂತ ತಿಳಿದುಬಂದಿದೆ. ಹಾಗಂತ ರಜನಿಕಾಂತ್ ಸುಮ್ಮನೆ ಕೂತಿದ್ದಾರೆ ಅಂತಲ್ಲ. ಬಲಗೈ ಮಾಡಿದ್ದು ಎಡಗೈಗೆ ಗೊತ್ತಾಗದಂತೆ ಚೆನ್ನೈ ನಾಗರೀಕರಿಗೆ ನೆರವು ನೀಡಿದ್ದಾರೆ ರಜನಿ.

ತಮ್ಮ ಇಬ್ಬರು ಸುಪುತ್ರಿಯರ ಉಸ್ತುವಾರಿಯಲ್ಲಿ ಚೆನ್ನೈ ಪ್ರವಾಹ ಸಂತ್ರಸ್ತರಿಗೆ ನೆರವು ನೀಡುತ್ತಿದ್ದಾರೆ ರಜನಿಕಾಂತ್. ತಮ್ಮ ಒಡೆತನದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಪ್ರವಾಹ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಿದ್ದಾರೆ 'ತಲೈವಾ' ರಜನಿ.

ಕರ್ನಾಟಕ ಸೇರಿದಂತೆ ಇತರೆ ರಾಜ್ಯಗಳಿಂದ ಬರುತ್ತಿರುವ ಪರಿಹಾರ ಸಮಾಗ್ರಿಗಳನ್ನ ಒಟ್ಟುಗೂಡಿಸಿ ಅದನ್ನ ಸಂತ್ರಸ್ತರಿಗೆ ರವಾನೆ ಮಾಡುವ ಕೆಲಸದಲ್ಲೂ ರಜನಿ ಪುತ್ರಿಯರು ತೊಡಗಿದ್ದಾರೆ.

ಯಾವುದೇ ಪಬ್ಲಿಸಿಟಿ ಇಲ್ಲದೆ ಇಷ್ಟೆಲ್ಲಾ ಕೆಲಸವನ್ನ ರಜನಿ ಮತ್ತು ಕುಟುಂಬ ಮಾಡುತ್ತಿದೆ. ಸುಮ್ಮನ್ನೆ 10 ಕೋಟಿ ಕೊಟ್ಟು ಕೈತೊಳೆದುಕೊಳ್ಳುವ ಬದಲು ಇಡೀ ರಜನಿ ಕುಟುಂಬ ಚೆನ್ನೈ ಪ್ರವಾಹ ಸಂತ್ರಸ್ತರಿಗೆ ಸಹಾಯ ಮಾಡುತ್ತಿರುವುದು ಕಣ್ಣರಳಿಸುವ ವಿಷಯ ಅಲ್ಲವೇ?
Fresh Kannada

Fresh Kannada

No comments:

Post a Comment

Google+ Followers

Powered by Blogger.