Breaking News
recent

ಅತ್ಯುತ್ತಮ ಭಾರತೀಯ ಮಕ್ಕಳ ಚಲನಚಿತ್ರ ಪ್ರಶಸ್ತಿ ಸಿನಿಮಾ 'ಬಾನಾಡಿ'

ಭಾರತೀಯ ಮಕ್ಕಳ ಚಲನಚಿತ್ರ ಅಡಿಯಲ್ಲಿ 'ನಾಗರಾಜ ಕೋಟೆ' ನಿರ್ದೇಶನದ, ಗೂಡಿನಿಂದ ಗಗನದೆಡೆಗೆ ಎಂಬ ಅಡಿ ಬರಹ ಹೊಂದಿದ 'ಬಾನಾಡಿ' (ಕನ್ನಡ) ಈ ವರ್ಷದ (2015) 'ಅತ್ಯುತ್ತಮ ಮಕ್ಕಳ ಚಲನಚಿತ್ರ' ಪ್ರಶಸ್ತಿ ಗಳಿಸಿದೆ. 'ಸಂತೋಷ್ ಕಟೀಲ್' ನಿರ್ದೇಶನದಲ್ಲಿ ಮೂಡಿ ಬಂದಿರುವ 'ಕನಸು' (ಕನ್ನಡ) ಚಿತ್ರದ ಜಗದೀಶ್. ಟಿ ಅವರು 'ಅತ್ಯುತ್ತಮ ನಟ' ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಅತ್ಯುತ್ತಮ ಭಾರತೀಯ ಮಕ್ಕಳ ಚಲನಚಿತ್ರ ಪ್ರಶಸ್ತಿ ಸಿನಿಮಾ 'ಬಾನಾಡಿ'

ಮಂಗಳೂರಿನಲ್ಲಿ ನವೆಂಬರ್ 22ರಿಂದ ಗೋಲ್ಡ್ ಫಿನ್ಚ್ ಹೋಟೆಲ್ ನಲ್ಲಿ ಚಿಲ್ಡ್ರನ್ ಇಂಡಿಯಾ ಸಂಸ್ಥೆ ಐದು ದಿನಗಳ ಕಾಲ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವ- 2015 ಸಮಾರಂಭದಲ್ಲಿ ಅತ್ಯುತ್ತಮ ಮಕ್ಕಳ ಚಲನಚಿತ್ರಗಳನ್ನು ಆಯ್ಕೆ ಮಾಡಲಾಯಿತು.

'ಅಮೇಜಿಂಗ್ ವಿಪ್ಲಲ್' ಎಂಬ ಬ್ರೆಜಿಲ್ ಚಿತ್ರ 'ಅತ್ಯುತ್ತಮ ಅಂತಾರಾಷ್ಟ್ರೀಯ ಮಕ್ಕಳ ಚಿತ್ರ' ಪ್ರಶಸ್ತಿಗೆ ಪಾತ್ರವಾಗಿದ್ದು, ಚಿತ್ರದ ನಿರ್ದೇಶಕ ಟಿಮ್ ಒಲೀಕ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಅತ್ಯುತ್ತಮ ಮಕ್ಕಳ ಚಲನಚಿತ್ರ ಪ್ರಶಸ್ತಿ ಪಡೆದ ಸಿನಿಮಾಗಳು:

ಮ್ಯಾಂಟೋ ಪಶುಪತಿನಾಥ್ ನಿರ್ದೇಶನದ, ಜಯಶ್ರೀ ಭಾರ್ಗವ ಹಾಗೂ ಮ್ಯಾಂಟೋ ಪಶುಪತಿನಾಥ್ ಅವರ ಕಥೆ ಆಧರಿಸಿದ 'ಎ ಡಾಟರ್ಸ್ ಡ್ರೀಮ್' (ಹಿಂದಿ) ಚಿತ್ರದ ನಟಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ.

ಇರಾನಿನ ದಿ ಅದರ್ಸ್ ಫಾದರ್' ನಟನೆ ಹಾಗೂ ಸಾಹಿತ್ಯ ರಚನೆಗಾಗಿ ಪ್ರಶಸ್ತಿ ಪಡೆದುಕೊಂಡರೆ, ಬಾಂಗ್ಲಾದೇಶದ ಮನನ್ ಹೀರ ನಿರ್ದೇಶನದ ಎಕೊ ಟೋರ್ ಖುಡಿರಾಮ್' ಚಿತ್ರ ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗಿದೆ.

ಪ್ಯಾಕೊ ಗಿಸ್ ಬರ್ಟ್ ನಿರ್ದೇಶನದ ಸ್ಪೇನ್ ದೇಶದ ಕಿಕೋಸ್ ಪ್ಯಾರಡೈಸ್, ದಕ್ಷಿಣ ಕೊರಿಯಾದ 'ಎ ಬಾಯ್ ಹೂ ಕಮ್ಸ್ ಲೇಟ್ ಎವ್ರಿಡೆ' ಅತ್ಯುತ್ತಮ ಮಕ್ಕಳ ಕಿರುಚಿತ್ರ ಪ್ರಶಸ್ತಿ ಪಡೆದುಕೊಂಡು ಮಕ್ಕಳ ಚಲನಚಿತ್ರ ಕ್ಷೇತ್ರದಲ್ಲಿ ಸಾಧನೆಯ ಛಾಪನ್ನು ಮೂಡಿಸಿದೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.