Breaking News
recent

ತೆಲುಗಿನ ಪವರ್ ಸ್ಟಾರ್ ಚಿತ್ರದಲ್ಲಿ ಸೀರೆಯಲ್ಲಿ ಸಂಜನಾ!

ಬೆಂಗಳೂರು ಬೆಡಗಿ ಸಂಜನಾ ಗಲ್ ರಾಣಿ ತೆಲುಗಿನಲ್ಲಿ ಮತ್ತೊಮ್ಮೆ ಬಂಪರ್ ಆಫರ್ ಗಿಟ್ಟಿಸಿಕೊಂಡಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಯಾಕೋ ಇತ್ತೀಚೆಗೆ ಸಂಜನಾ ಸುದ್ದಿ ಸೈಲಂಟ್ ಆಗಿದೆ ಎನ್ನುವಷ್ಟರಲ್ಲೇ ತೆಲುಗಿನ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ಬಹುನಿರೀಕ್ಷಿತ ಚಿತ್ರ 'ಸರ್ದಾರ್ ಗಬ್ಬರ್ ಸಿಂಗ್' ನಲ್ಲಿ ಮುಖ್ಯ ಪಾತ್ರವೊಂದು ಸಂಜನಾಗೆ ದಕ್ಕಿದೆಯಂತೆ.
ತೆಲುಗಿನ ಪವರ್ ಸ್ಟಾರ್ ಚಿತ್ರದಲ್ಲಿ ಸೀರೆಯಲ್ಲಿ ಸಂಜನಾ!

ತುಂಡುಡುಗೆ ತೊಟ್ಟು ಸೊಂಟ ಕುಣಿಸುವುದು ಸಂಜನಾಗೆ ಸಲೀಸಿನ ವಿಷಯ. ಅದರೆ, ಸರ್ದಾರ್ ಗಬ್ಬರ್ ಸಿಂಗ್ ಸಿನಿಮಾದಲ್ಲಿ ರಾಜಕುಮಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಸಂಜನಾ ರಾಜಪೋಷಕಿನಲ್ಲಿ ಕಂಗೊಳಿಸಬೇಕಾಗುತ್ತದೆ. ಇಂಚು ಲೆಕ್ಕದಲ್ಲಿ ಉಡುಗೆ ಬದಲಿಗೆ 9 ಯಾರ್ಡ್ ಸೀರೆ ತೊಟ್ಟು, ಕಣ್ಣು ಕುಕ್ಕುವ ಆಭರಣಗಳನ್ನು ತೊಟ್ಟು ಸಂಜನಾ ಕಾಣಿಸಿಕೊಳ್ಳಲಿದ್ದಾರೆ.

ಈ ಚಿತ್ರದಲ್ಲಿ ನನ್ನ ಪಾತ್ರಕ್ಕೆ ತುಂಬಾ ಮಹತ್ವವಿದೆ. ಚಿತ್ರದ ಆರಂಭದ ಸೀನ್ ನಿಂದ ಕೊನೆ ತನಕ ಕಾಣಿಸಿಕೊಳ್ಳುತ್ತೇನೆ. ಪವನ್ ಅವರೊಂದಿಗೆ ಉತ್ತಮ ದೃಶ್ಯಗಳಿವೆ. ಮೊದಲ ಬಾರಿಗೆ ಇಂಥ ಪಾತ್ರದಲ್ಲಿ ನಟಿಸುತ್ತಿರುವುದಕ್ಕೆ ಸಕತ್ ಥ್ರಿಲ್ ಆಗಿದ್ದೇನೆ ಎಂದು ತಮ್ಮ ಪಾತ್ರದ ಬಗ್ಗೆ ಹೆಮ್ಮೆಯಿಂದ ಸಂಜನಾ ಹೇಳಿದ್ದಾರೆ.

ವಡೋದರಾದ ಲಕ್ಷ್ಮೀ ಪ್ಯಾಲೇಸ್​ನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಕೆ. ಎಸ್. ರವೀಂದ್ರ ಈ ಚಿತ್ರದ ನಿರ್ದೇಶನದ ಹೊಣೆ ಹೊತ್ತಿದ್ದಾರೆ.. ಕಾಜಲ್ ಅಗರ್​ವಾಲ್ ಚಿತ್ರದ ನಾಯಕಿಯಾಗಿದ್ದರೆ, ಐಟಂ ಸಾಂಗ್ ನಲ್ಲಿ ಲಕ್ಷ್ಮೀ ರೈ ಮೈಕೈ ಕಾಲು ಕುಣಿಸಲಿದ್ದಾರೆ. ಮುಂದಿನ ಬೇಸಿಗೆಗೆ ಕುದುರೆ ಏರಿ ಬರುವ ಸರ್ದಾರ್ ಗಬ್ಬರ್ ಸಿಂಗ್ ನನ್ನು ಕಾಣಬಹುದಾಗಿದೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.