Breaking News
recent

ಸ್ನಾಪ್‍ಡೀಲ್ ನೆರವಿಗೆ ಬಂದ ಫ್ಲಿಪ್‍ಕಾರ್ಟ್!

ಆನ್‍ಲೈನ್ ಶಾಪಿಂಗ್ ವಿಚಾರದಲ್ಲಿ ಬದ್ಧವೈರಿಗಳಾಗಿರುವ ಸ್ನಾಪ್‍ಡೀಲ್ ಸಂಸ್ಥೆಗೆ ಫ್ಲಿಪ್‍ಕಾರ್ಟ್ ತನ್ನ ಬೆಂಬಲ ಸೂಚಿಸಿದೆ.
ಸ್ನಾಪ್‍ಡೀಲ್ ರಾಯಭಾರಿಯಾಗಿರುವ ಅಮೀರ್ ಖಾನ್ ಅಸಹಿಷ್ಣುತೆ ವಿಚಾರದಲ್ಲಿ ನೀಡಿದ್ದ ಹೇಳಿಕೆ ಹಿನ್ನೆಲೆಯಲ್ಲಿ ಒಂದೇ ದಿನದಲ್ಲಿ ಸ್ನಾಪ್‍ಡೀಲ್‍ನ 1 ಲಕ್ಷಕ್ಕೂ ಹೆಚ್ಚು ಆಪ್‍ಗಳನ್ನು ಗ್ರಾಹಕರು ಅನ್ ಇನ್‍ಸ್ಟಾಲ್ ಮಾಡಿದ್ದರು. ಅಲ್ಲದೇ ಗೂಗಲ್ ಪ್ಲೇ ಸ್ಟೋರ್ ರೇಟಿಂಗ್‍ನಲ್ಲಿ ಡೌನ್‍ವೋಟ್ ಮಾಡಿದ್ದರು.
ಸ್ನಾಪ್‍ಡೀಲ್ ನೆರವಿಗೆ ಬಂದ ಫ್ಲಿಪ್‍ಕಾರ್ಟ್!

ಹೀಗಾಗಬಾರದಿತ್ತು: ಈ ಹಿನ್ನೆಲೆಯಲ್ಲಿ ಇಂದು ಸಾಮಾಜಿಕ ಜಾಲ ತಾಣ ಟ್ವಿಟ್ಟರ್‍ನಲ್ಲಿ ಫ್ಲಿಪ್‍ಕಾರ್ಟ್ ಸಹಸಂಸ್ಥಾಪಕ ಹಾಗೂ ಸಿಇಒ ಸಚಿನ್ ಬನ್ಸಾಲ್, `ಈ ರೀತಿಯ ತರ್ಕಗಳನ್ನು ಒಪ್ಪಲು ಸಾಧ್ಯವಿಲ್ಲ. ಬ್ರ್ಯಾಂಡ್‍ಗಳು ಯಾವುದೇ ಬ್ರ್ಯಾಂಡ್ ಅಂಬಾಸಿಡರ್‍ಗಳ ವೈಯಕ್ತಿಕ ಅಭಿಪ್ರಾಯವನ್ನು ಖರೀದಿಸುವುದಿಲ್ಲ. ಸ್ನಾಪ್‍ಡೀಲ್ ಇಂತಹ ಪರಿಸ್ಥಿತಿ ಬರಬಾರದಿತ್ತು ಎಂದು ಟ್ವೀಟ್ ಮಾಡಿದ್ದಾರೆ.
ಇದೇ ವೇಳೆ ಗ್ರಾಹಕರಿಂದ ವಿರೋಧ ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ಸ್ನಾಪ್‍ಡೀಲ್ ಕಂಪನಿ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದೆ. ಅಮೀರ್ ಖಾನ್ ಅವರು ವೈಯಕ್ತಿಕವಾಗಿ ನೀಡಿರುವ ಹೇಳಿಕೆಗೂ ಸ್ನಾಪ್‍ಡೀಲ್‍ಗೂ ಯಾವುದೇ ಸಂಬಂಧವಿಲ್ಲ. ಸ್ನಾಪ್‍ಡೀಲ್ ಭಾರತದ ಹೆಮ್ಮೆಯ ಕಂಪೆನಿ. ಡಿಜಿಟಲ್ ಇಂಡಿಯಾವೇ ನಮ್ಮ ಗುರಿ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಸ್ನಾಪ್‍ಡೀಲ್

Fresh Kannada

Fresh Kannada

No comments:

Post a Comment

Google+ Followers

Powered by Blogger.