Breaking News
recent

ವರುಣನ ಆರ್ಭಟಕ್ಕೆ, ಹೆದರಿದ ಗೋಲ್ಡನ್ ಸ್ಟಾರ್ ಏನ್ ಮಾಡಿದ್ರು, ಗೊತ್ತಾ?

ಸೈಕ್ಲೋನ್ ಎಫೆಕ್ಟ್ ನಿಂದಾಗಿ ರಾಜಧಾನಿ ಬೆಂಗಳೂರಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಇಡೀ ದಿನ ಜಿಟಿ ಜಿಟಿ ಸುರಿಯುವ ಮಳೆಗೆ, ಮನೆಯೊಳಗೆ ಬೆಚ್ಚಗೆ ಕುಳಿತು ಏನಾದ್ರೂ ಕುರುಕಲು ತಿಂಡಿ ಮೆಲ್ಲುತ್ತಾ ಸಮಯ ಕಳೆಯಲು ಎಲ್ಲರೂ ಬಯಸುತ್ತಾರೆ.
ವರುಣನ ಆರ್ಭಟಕ್ಕೆ, ಹೆದರಿದ ಗೋಲ್ಡನ್ ಸ್ಟಾರ್ ಏನ್ ಮಾಡಿದ್ರು, ಗೊತ್ತಾ?

ಅಂದಹಾಗೆ ನಾವು ಮಳೆಯ ಬಗ್ಗೆ ಇಷ್ಟು ಉದ್ದ ಪೀಠಿಕೆ ಹಾಕಲು ಮುಖ್ಯ ಕಾರಣ ಏನಪ್ಪಾ ಅಂದ್ರೆ ಈ ಮಳೆಗೆ ಹೆದರಿ ನಮ್ಮ ಸ್ಯಾಂಡಲ್ ವುಡ್ ತಾರೆಯರು ಬೆಚ್ಚಗೆ ಮನೆಯೊಳಗೆ ಕುಳಿತು ಬೆಂಕಿ ಕಾಯಿಸುತ್ತಾ ಕುಳಿತಿದ್ದಾರೆ.

ಬಿಟ್ಟು ಬಿಡದೆ ಸುರಿಯುತ್ತಿರುವ ವರುಣನ ಆರ್ಭಟಕ್ಕೆ, ನಮ್ಮ ಗೋಲ್ಡನ್ ಸ್ಟಾರ್ ಗಣೇಶ್ ಏನು ಮಾಡಿದ್ರೂ ಗೊತ್ತಾ?, ದೀಪಾವಳಿ ಹಬ್ಬದ ಪ್ರಯುಕ್ತ ಶೂಟಿಂಗ್ ಬ್ರೇಕ್ ಇದ್ದ ಕಾರಣ ಗಣೇಶ್ ಅವರು ಮಳೆಯ ಕಾರಣ ಎಲ್ಲಿಗೂ ಹೋಗದೆ, ತಮ್ಮ ಮನೆಯಲ್ಲಿಯೇ ಟೆಂಟ್ ಹಾಕಿದ್ದರು.

ಮಾತ್ರವಲ್ಲದೇ ತಮ್ಮ ಮನೆ ಒಳಗೆ ಇರುವ ಫೈರ್ ಪ್ಲೇಸ್ ಮುಂದೆ ಬೆಚ್ಚಗೆ ಕುಳಿತು ಭಾರಿ ಕುತೂಹಲದಿಂದ ವಿಡಿಯೋ ಗೇಮ್ ಆಡುತ್ತಾ, ಟೈಮ್ ಪಾಸ್ ಮಾಡಿದ್ದಾರೆ.

ಇನ್ನು ಯಾವಾಗಲೂ ಕೆಲಸ, ಶೂಟಿಂಗ್ ಅಂತ ಬ್ಯುಸಿಯಾಗಿ ಹೆಚ್ಚಾಗಿ ಹೊರಗಡೆ ಇರುವ ಪತಿ ಮನೆಯಲ್ಲಿಯೇ ಕುಳಿತು ಹೀಗೆ ಆರಾಮವಾಗಿ ವಿಡಿಯೋ ಗೇಮ್ ಆಡುತ್ತಾ ಕುಳಿತರೆ, ಹೆಂಡ್ತಿ ಸುಮ್ನೆ ಇರ್ತಾರಾ?, ಹಾಗೆ ಗೋಲ್ಡನ್ ಸ್ಟಾರ್ ಅವರ ಪತ್ನಿ ಶಿಲ್ಪಾ ಗಣೇಶ್ ಅವರು ಪತಿಗೆ ತಿಳಿಯದಂತೆ, ಪಿಕ್ ತೆಗೆದು ಟ್ವಿಟ್ಟರ್ ಮೂಲಕ ಇಡೀ ಪ್ರಪಂಚಕ್ಕೆ ಸಾರಿ ಬಿಟ್ಟಿದ್ದಾರೆ ನೋಡಿ.
Fresh Kannada

Fresh Kannada

No comments:

Post a Comment

Google+ Followers

Powered by Blogger.