Breaking News
recent

ಥ್ಯಾಂಕ್ಸ್ ಟು ಹುಚ್ಚ ವೆಂಕಟ್ ; ನೇಹಾ ಗೌಡ ಸೇಫ್.!

ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್-3' ಪ್ರಿಯರು ನಿರೀಕ್ಷಿಸಿದಂತೆ ಈ ವಾರ 'ಬಿಗ್ ಬಾಸ್' ಮನೆಯಿಂದ ಗಗನಸಖಿ ನೇಹಾ ಗೌಡ ಔಟ್ ಆಗ್ಬೇಕಿತ್ತು.
ಥ್ಯಾಂಕ್ಸ್ ಟು ಹುಚ್ಚ ವೆಂಕಟ್ ; ನೇಹಾ ಗೌಡ ಸೇಫ್.!

ಮೂಲಗಳ ಪ್ರಕಾರ, ಕಿರುತೆರೆ ಪ್ರೇಕ್ಷಕರಿಗೆ ಪರಿಚಯವಿಲ್ಲದ ನೇಹಾ ಗೌಡ ಈ ವಾರ ಎಲಿಮಿನೇಟ್ ಆಗುತ್ತಿದ್ದರು. 'ಬಿಗ್ ಬಾಸ್' ಮನೆಯಿಂದ ಹೊರಬರುವ ನೇಹಾ ಗೌಡರನ್ನ ರಿಸೀವ್ ಮಾಡಿಕೊಳ್ಳಲು ಅವರ ಕುಟುಂಬಸ್ಥರು ಬಿಡದಿ ಬಳಿಯ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಹಾಜರ್ ಆಗಿದ್ದರು.

ಪ್ರೇಕ್ಷಕರು ನೀಡಿರುವ ಎಸ್.ಎಂ.ಎಸ್ ವೋಟ್ ಆಧಾರದ ಮೇಲೆ ಸುದೀಪ್, ನೇಹಾ ಗೌಡರನ್ನ ಹೊರಗೆ ಕರೆಯುವ ಮುನ್ನವೇ ಹುಚ್ಚ ವೆಂಕಟ್ ರಾದ್ಧಾಂತ ಸೃಷ್ಟಿಸಿದರು. ಟಿ.ಆರ್.ಪಿ ಕಿಂಗ್ ಹುಚ್ಚ ವೆಂಕಟ್ ವಿರುದ್ಧ ಗುಡುಗಿದ ಕಿಚ್ಚ ಸುದೀಪ್.!

ಗಾಯಕ ರವಿ ಮುರೂರು ಮೇಲೆ ದೈಹಿಕ ಹಲ್ಲೆ ಮಾಡಿ, 'ಬಿಗ್ ಬಾಸ್' ಕಾರ್ಯಕ್ರಮದ ನಿಯಮ ಮುರಿದ ಪರಿಣಾಮ ಹುಚ್ಚ ವೆಂಕಟ್ ಗೆ ಗೇಟ್ ಪಾಸ್ ನೀಡಲಾಯ್ತು. ಇದರಿಂದ ನೇಹಾ ಗೌಡ ಸೇಫ್ ಆದರು. ಎರಡನೇ ಬಾರಿಗೆ ನಾಮಿನೇಟ್ ಆಗಿದ್ದ ರವಿ ಮುರೂರು ಮತ್ತು ಕೃತಿಕಾ ಕೂಡ ನಿಟ್ಟುಸಿರು ಬಿಡುವಂತಾಯ್ತು.
Fresh Kannada

Fresh Kannada

No comments:

Post a Comment

Google+ Followers

Powered by Blogger.