Breaking News
recent

ಒಂದೇ ದಿನದಲ್ಲಿ ಮೂರು ಚಿತ್ರಗಳ ಹಾಡಿಗೆ ವಾಯ್ಸ್ ನೀಡಿದ ಉಪ್ಪಿ..!

ರಿಯಲ್ ಸ್ಟಾರ್ ಉಪೇಂದ್ರ ಅವರು 'ಉಪ್ಪಿ 2' ಚಿತ್ರದ ನಂತರ ಏನ್ ಮಾಡ್ತಾ ಇದ್ದಾರೆ. ಮಾಹಿತಿಗಳು ಹೇಳೋ ಪ್ರಕಾರ ಉಪ್ಪಿ ಅವರು ತಮ್ಮ ಮುಂದಿನ ಹೊಸ ಪ್ರಾಜೆಕ್ಟ್ 'ಕಲ್ಪನಾ 2' ಚಿತ್ರದ ಶೂಟಿಂಗ್ ಗೆ ತಯಾರಿ ನಡೆಸುತ್ತಿದ್ದಾರೆ ಅಂತಾರೆ. ಆದರೆ 'ಕಲ್ಪನಾ 2' ಚಿತ್ರದ ಶೂಟಿಂಗ್ ತಯಾರಿ ಅಲ್ಲ ಬದ್ಲಾಗಿ ಅದರ ಸ್ಕ್ರಿಪ್ಟ್ ನ ತಯಾರಿಯಲ್ಲಿ ಉಪ್ಪಿ ತೊಡಗಿದ್ದಾರೆ.
ಒಂದೇ ದಿನದಲ್ಲಿ ಮೂರು ಚಿತ್ರಗಳ ಹಾಡಿಗೆ ವಾಯ್ಸ್ ನೀಡಿದ ಉಪ್ಪಿ..!

ಇನ್ನು ರಿಯಲ್ ಸ್ಟಾರ್ ಉಪೇಂದ್ರ ಅವರು ಬರೀ ನಟ-ನಿರ್ದೇಶಕ ಮಾತ್ರವಲ್ಲದೇ ಸಿಂಗರ್ ಜೊತೆಗೆ ಬರಹಗಾರ ಕೂಡ ಅನ್ನೋದು ಈಗಾಗಲೇ ಎಲ್ಲರಿಗೂ ತಿಳಿದಿರೋ ವಿಷಯ. ಸದ್ಯಕ್ಕೆ ಇದೀಗ ಫ್ರೀ ಟೈಮ್ ನಲ್ಲಿ ಹಾಡುವುದನ್ನು ತಮ್ಮ ಹವ್ಯಾಸವನ್ನಾಗಿ ಮಾಡಿಕೊಂಡಿದ್ದಾರೆ ನಮ್ಮ ಉಪ್ಪಿ ಅವರು.

ಇದೀಗ ಲೇಟೇಸ್ಟ್ ಮಾಹಿತಿ ಏನಪ್ಪಾ ಅಂದ್ರೆ ರಿಯಲ್ ಸ್ಟಾರ್ ಉಪೇಂದ್ರ ಅವರು ಒಂದೇ ದಿನ ಮೂರು ವಿಭಿನ್ನ ಚಿತ್ರಗಳ ಹಾಡಿಗೆ ತಮ್ಮ ಧ್ವನಿ ನೀಡಿದ್ದಾರೆ. ನಟ-ನಿರೂಪಕ ಅಕುಲ್ ಬಾಲಾಜಿ ಅವರ 'ದೇವರಾಣೆ ಬಿಡು ಗುರು', 'ತಲೆ ಬಾಚ್ಕೊಳ್ಳಿ ಪೌಡರ್ ಹಾಕ್ಕೊಳ್ಳಿ', ಮತ್ತು 'ವಾಚ್ ಮ್ಯಾನ್' ಎಂಬ ಮೂರು ಚಿತ್ರಗಳ ಹಾಡಿಗೆ ಬಾಲಾಜಿ ಡಿಜಿಟಲ್ ಸ್ಟುಡಿಯೋದಲ್ಲಿ ಉಪ್ಪಿ ಅವರು ತಮ್ಮ ವಾಯ್ಸ್ ನೀಡಿದ್ದಾರೆ.

ಈಗಾಗಲೇ ತಮ್ಮ ಹಾಡಿನ ಮೂಲಕ ಅಭಿಮಾನಿಗಳು ಹಾಗೂ ಕನ್ನಡ ಪ್ರೇಕ್ಷಕರ ಮನಗೆದ್ದಿರುವ ರಿಯಲ್ ಸ್ಟಾರ್ ಈ ಮೊದಲು ಕಾಮಿಡಿ ನಟ ಶರಣ್ ಅವರ 'ಜೈ ಲಲಿತ' ಮತ್ತು ಅಜೇಯ್ ರಾವ್-ಮಯೂರಿ ಕಾಣಿಸಿಕೊಂಡಿದ್ದ 'ಕೃಷ್ಣಲೀಲಾ' ಸಿನಿಮಾಕ್ಕೆ ಉಪ್ಪಿ ಅವರು ತಮ್ಮ ಧ್ವನಿ ನೀಡಿದ್ದರು. ಅಲ್ಲದೇ ಉಪ್ಪಿ ಹಾಡಿದ ಹಾಡುಗಳು ಫೇಮಸ್ ಆಗಿದ್ದವು.

ಬ್ಲಾಕ್ ಬಸ್ಟರ್ ಹಿಟ್ 'ಉಪ್ಪಿ 2' ಚಿತ್ರದ ನಂತರ ರಿಯಲ್ ಸ್ಟಾರ್ ಉಪೇಂದ್ರ ಅವರು 'ಕಲ್ಪನಾ 2' ಚಿತ್ರದಲ್ಲಿ ಬ್ಯುಸಿಯಾಗಿದ್ದು, ನಟಿ ಪ್ರಿಯಾಮಣಿ ಮತ್ತು 'ರಂಗಿತರಂಗ' ಬೆಡಗಿ ಅವಂತಿಕಾ ಶೆಟ್ಟಿ ಅವರು ಮುಖ್ಯ ಪಾತ್ರಧಾರಿಗಳಾಗಿ ಕಾಣಿಸಿಕೊಳ್ಳಲಿದ್ದಾರೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.