Breaking News
recent

ರಾಕಿಂಗ್ ಸ್ಟಾರ್ ಯಶ್ ಜೊತೆ ನಟಿಸುವ ಆಸೆನಾ?

ರಾಕಿಂಗ್ ಸ್ಟಾರ್ ಯಶ್ ಅಂದ್ರೆ ನಿಮಗೆ ಇಷ್ಟನಾ? ಅವರೊಂದಿಗೆ ಆಕ್ಟ್ ಮಾಡುವ ಆಸೆ ನಿಮಗೆ ಇದ್ಯಾ? ಒಂದ್ ಚಾನ್ಸ್ ಸಿಕ್ಕಿದ್ರೆ ಸಾಕು, ಯಶ್ ಜೊತೆ ನಟಿಸ್ಬೇಕು ಅಂತ ಕನಸು ಕಾಣ್ತಿದ್ದೀರಾ?
ರಾಕಿಂಗ್ ಸ್ಟಾರ್ ಯಶ್ ಜೊತೆ ನಟಿಸುವ ಆಸೆನಾ?

ಹಾಗೇನಾದ್ರೂ ಇದ್ರೆ..ಇದೋ ಇಲ್ಲಿದೆ ಸುವರ್ಣಾವಕಾಶ. ಯಶ್ ಅಭಿನಯಿಸಲಿರುವ, 'ಉಗ್ರಂ' ಖ್ಯಾತಿ ಪ್ರಶಾಂತ್ ನೀಲ್ ನಿರ್ದೇಶಿಸಲಿರುವ ಹೊಸ ಸಿನಿಮಾ 'ಕೆ.ಜಿ.ಎಫ್' ಗೆ ಸಹ ನಟರು ಬೇಕಾಗಿದ್ದಾರೆ.

27 ವರ್ಷದಿಂದ 65 ವರ್ಷ ವಯಸ್ಸಿನ ಪ್ರತಿಭಾವಂತ ಕಲಾವಿದರ ಹುಡುಕಾಟದಲ್ಲಿ ಚಿತ್ರತಂಡವಿದೆ. ಇದೇ ತಿಂಗಳ 8ನೇ ತಾರೀಖು ಭಾನುವಾರ ಬೆಳಗ್ಗೆ 7 ಗಂಟೆಯಿಂದ 9 ಗಂಟೆ ವರೆಗೂ ಆಡಿಷನ್ ನಡೆಯಲಿದೆ. ಎಲ್ಲಿ ಅಂದ್ರೆ, ಬೆಂಗಳೂರಿನ ಗಾಂಧಿನಗರದ ಜೈನ್ ಟೆಂಪಲ್ ಬಳಿ ಇರುವ ಚೇತನ್ ಇಂಟರ್ ನ್ಯಾಷನಲ್ ಹೋಟೆಲ್ ನಲ್ಲಿ.

ನಿಮ್ಮಲ್ಲಿ ಟ್ಯಾಲೆಂಟ್ ಇದ್ರೆ, ನಿಮ್ಮದೇ ಡೈಲಾಗ್ ಮತ್ತು ಮ್ಯಾನರಿಸಂ ಮೂಲಕ ಆಡಿಷನ್ ನಲ್ಲಿ ಧೂಳೆಬ್ಬಿಸಿ. ಚಿತ್ರತಂಡವನ್ನ ಇಂಪ್ರೆಸ್ ಮಾಡಿ. ಯಾರಿಗ್ ಗೊತ್ತು, ಮುಂದೆ ಯಶ್ ಹೆಸರಿನ ನಂತ್ರ ಟೈಟಲ್ ಕಾರ್ಡ್ ನಲ್ಲಿ ನಿಮ್ಮ ನಾಮಧ್ಯೇಯ ಬರಬಹುದಲ್ಲಾ.!?


Masterpiece 2015 Kannada Movie First Look Teaser
http://www.freshkannada.com/2015/01/masterpiece-2015-kannada-movie-first.html

Yash (actor) Biography
http://www.freshkannada.com/2014/12/yash-actor-biography.html

Master Piece 2014 Kannada Movie
http://www.freshkannada.com/2014/11/master-piece-2014-kannada-movie.html
Fresh Kannada

Fresh Kannada

No comments:

Post a Comment

Google+ Followers

Powered by Blogger.