Breaking News
recent

ಎಲ್ಲರ ನೆಚ್ಚಿನ ಕಣ್ಮಣಿ ಶೃತಿಯಕ್ಕ ವಿಲನ್ ಆದ್ರು

ಬಿಗ್‍ಬಾಸ್ ಸ್ಪರ್ಧಿಗಳ ಮಧ್ಯೆ ಮೊದಲ ಎರಡು ವಾರಗಳಲ್ಲಿ ಇದ್ದ ಆತ್ಮೀಯತೆ ಈಗ ಇಲ್ಲ. ದಿನ ಕಳೆದಂತೆಲ್ಲ ಬಾಂಧವ್ಯಗಳು ಅಭಿಪ್ರಾಯಗಳು ಎಲ್ಲವೂ ಬದಲಾಗುತ್ತಿದೆ. ಇದಕ್ಕೆ ಸಾಕ್ಷಿಯೆಂದರೆ ಇಷ್ಟು ದಿನ ಎಲ್ಲರ ಪ್ರೀತಿಯ ಅಮ್ಮನಾಗಿದ್ದ ನಟಿ ಶೃತಿ ಇದ್ದಕ್ಕಿದ್ದಂತೆ ಈಗ ಕೆಲವರಿಗೆ ವಿಲನ್ ಆಗಿದ್ದಾರೆ.
ಎಲ್ಲರ ನೆಚ್ಚಿನ ಕಣ್ಮಣಿ ಶೃತಿಯಕ್ಕ ವಿಲನ್ ಆದ್ರು

ಮಿಕ್ಕ ಸ್ಪರ್ಧಿಗಳಿಗಿಂತ ವಯಸ್ಸಿನಲ್ಲಿ ದೊಡ್ಡವರಾದ್ದರಿಂದ ಶೃತಿಯನ್ನು ಎಲ್ಲರೂ ಈವರೆಗೆ ಗೌರವದಿಂದ ನೋಡುತ್ತಿದ್ದರು. ಆದರೆ ಓಪನ್ ನಾಮಿನೇಷನ್ ಆಗಿದ್ದೇ ತಡ ಕೆಲವರಿಗೆ ಅವರ ಮೇಲಿದ್ದ ಭಾವನೆ ಬದಲಾಗತೊಡಗಿದೆ.
ಇಷ್ಟು ದಿನ ಶೃತಿಯವರನ್ನು ಅಕ್ಕ, ಅಮ್ಮ ಎಂದು ಕರೆಯುತ್ತಿದ್ದವರು ಈಗ ಶೃತಿ ಒಬ್ಬ ಗೇಮ್ ಪ್ಲೇಯರ್ ಎಂದು ಮಾತಾಡಿಕೊಳ್ಳುತ್ತಿದ್ದಾರೆ. ಇಷ್ಟೆಲ್ಲಾ ಬದಲಾವಣೆಗಳಿಗೆ ಕಾರಣ ಈ ಬಾರಿ ನಡೆದ ಓಪನ್ ನಾಮಿನೇಷನ್. ಅಲ್ಲದೆ ಅವರು ಸ್ಪೀಕರ್ ಎಂಬ ಕಾರಣಕ್ಕೆ ಸಿಕ್ಕಿದ್ದ ವಿಶೇಷ ಅಧಿಕಾರದ ಸಂದರ್ಭದಲ್ಲಿ ತಾರತಮ್ಯ ಮಾಡಿದ್ದಾರೆ ಎಂಬ ಆರೋಪ ಬಿಗ್ ಬಾಸ್ ಮನೆ ಸದಸ್ಯರದ್ದು.
ಎಲ್ಲರ ನೆಚ್ಚಿನ ಕಣ್ಮಣಿಯಾಗಿದ್ದ `ಶೃತಿ ಅಮ್ಮ’ ಈಗ ವಿಲನ್ ಆಗಿದ್ದಾಗಿದೆ. ಇನ್ನು ಮುಂದೆ ಅವರೊಡನೆ ಮನೆಯವರು ನಡೆದುಕೊಳ್ಳುವ ರೀತಿಯಲ್ಲೂ ಬದಲಾವಣೆ ಕಂಡುಬರಬಹುದು. ಸ್ಪರ್ಧಿಗಳ ನಾಟಕ, ತಂತ್ರ ಎಲ್ಲವೂ ಕೆಲವು ದಿನಗಳವರೆಗೆ ಮಾತ್ರ, ದಿನಕಳೆದಂತೆ ಎಲ್ಲರ ಮುಖವಾಡ ಕಳಚಿ ಬೀಳಲೇ ಬೇಕು ಎಂಬ ಬಿಗ್‍ಬಾಸ್ ಮಾತು ಈಗ ಸತ್ಯವಾಗಿದೆ. ನಾಯಕ ನಾಯಕಿಯರಾಗಿದ್ದವರು ವಿಲನ್ ಆಗಿದ್ದಾರೆ, ಹೊರಗೆ ವಿಲನ್‍ನಂತೆ ಕಂಡವರು ಕೆಲವರಿಗೆ ಹೀರೋ ಆಗಿದ್ದಾರೆ. ಆದರೆ ಇದು ಇಷ್ಟಕ್ಕೇ ಮುಗಿಯುವುದಿಲ್ಲ, ಪಿಕ್ಚರ್ ಅಭೀ ಬಿ ಬಾಕಿ ಹೇ ಎಂಬಂತೆ ನಿಜವಾದ ನಾಯಕ/ಕಿ ಯಾರು ಎಂಬುದನ್ನು ತಿಳಿಯಲು ಕ್ಲೈಮ್ಯಾಕ್ಸ್ ತನಕ ಕಾಯಲೇಬೇಕು.
Fresh Kannada

Fresh Kannada

No comments:

Post a Comment

Google+ Followers

Powered by Blogger.