Breaking News
recent

ಈ ವಾರ ಐದು ಚಿತ್ರಗಳು ರಿಲೀಸ್.! ನಿಮ್ಮ ಆಯ್ಕೆ ಯಾವುದು?

ಮುಹೂರ್ತದ ದಿನವೇ ಟ್ರೈಲರ್ ಬಿಡುಗಡೆ ಮಾಡಿ ಎಲ್ಲರ ಗಮನ ಸೆಳೆದ 'ಫಸ್ಟ್ ರ್ಯಾಂಕ್ ರಾಜು' ಸಿನಿಮಾ ಈ ವಾರ ಬಿಡುಗಡೆ ಆಗುತ್ತಿದೆ. 'ವಿದ್ಯೆ 100% ಬುದ್ದಿ ೦%' ಎನ್ನುವ ಅಡಿಬರಹದೊಂದಿಗೆ ನಿರ್ಮಾಣವಾಗಿರುವ ಚಿತ್ರ 'ಫಸ್ಟ್ ರ್ಯಾಂಕ್ ರಾಜು'.
ಈ ವಾರ ಐದು ಚಿತ್ರಗಳು ರಿಲೀಸ್.! ನಿಮ್ಮ ಆಯ್ಕೆ ಯಾವುದು?

ಎಂತಹ ವಿದ್ಯಾವಂತರೇ ಆದರೂ ಬದುಕಲು ಕಾಮನ್ ಸೆನ್ಸ್ ಹೊಂದಿರಬೇಕು ಎನ್ನುವ ವಿಚಾರವನ್ನ ಹಾಸ್ಯ ಮಿಶ್ರಿತವಾಗಿ ನಿರೂಪಿಸಿದ್ದಾರೆ ನಿರ್ದೇಶಕ ನರೇಶ್ ಕುಮಾರ್.

ಗುರುನಂದನ್, ಅಪೂರ್ವ, ತನಿಷಾ ಕಪೂರ್, ಅನಂತ್ ನಾಗ್, ಅಚ್ಯುತ್ ಕುಮಾರ್, ಸಾಧು ಕೋಕಿಲ ಮತ್ತಿತರರು ತಾರಾಗಣದಲ್ಲಿದ್ದಾರೆ. ಇನ್ನು ಹಾರರ್ ಚಿತ್ರ ಪ್ರಿಯರ ಎದೆ ನಡುಗಿಸುವ 'ಅಲೋನ್' ಚಿತ್ರ ಕೂಡ ಇದೇ ವಾರ ನಿಮ್ಮ ಮುಂದೆ ಬರುತ್ತಿದೆ.

ನಿರ್ದೇಶಕ ಜೆ.ಕೆ.ಎಸ್ ರವರ ಮೊದಲ ತ್ರಿಭಾಷಾ ಸಿನಿಮಾ ಈ 'ಅಲೋನ್'. ನಿಕಿಶಾ ಪಟೇಲ್, ವಸಿಷ್ಠ ಪ್ರಮುಖ ಪಾತ್ರದಲ್ಲಿದ್ದು, ಕಾಲಿವುಡ್ ನ ಖ್ಯಾತ ನಟಿ ಸಿಮ್ರಾನ್ ಈ ಸಿನಿಮಾದಲ್ಲಿ ಸೂಪರ್ ಕಾಪ್ ಆಗಿ ಕಾಣಿಸಿಕೊಂಡಿದ್ದಾರೆ.

ಇನ್ನು ಅನಂತ್ ನಾಗ್ ಜೈಲರ್ ಪಾತ್ರದಲ್ಲಿ ಮಿಂಚಿರುವ 'ದಿ ಪ್ಲಾನ್' ಸಿನಿಮಾ ಇದೇ ವಾರ ರಿಲೀಸ್ ಆಗುತ್ತಿದೆ. ಕಥೆ-ಚಿತ್ರಕಥೆ-ನಿರ್ದೇಶನ ಕೀರ್ತಿ ನಿರ್ವಹಿಸಿದ್ದಾರೆ. ಉಳಿದ ತಾರಾಗಣದಲ್ಲಿ ಗೌತಮ್, ಕೌಸ್ತುಬ, ಜಯಕುಮಾರ್ ಇದ್ದಾರೆ.

ಹಾಗೇ, ಕೆ.ಎಸ್.ಆರ್ ನಿರ್ದೇಶನದ ಯುವರಾಜ್ ಕಲ್ಯಾಣ್ ಕುಮಾರ್ ಅಭಿನಯದ 'ಪಟ್ಟಾಭಿಷೇಕ' ಈ ವಾರ ತೆರೆ ಕಾಣುತ್ತಿದೆ. ರಕ್ಷಿತ್ ನಗರಾಲೆ ಅವರ ಸಂಗೀತ ಈ ಚಿತ್ರಕ್ಕಿದೆ. ಗೌರಿ ನಾಯರ್ ಈ ಚಿತ್ರದ ನಾಯಕಿ.

ಸತೀಶ್ ಪಿಕ್ಚರ್ ಹೌಸ್ ಲಾಂಛನದಲ್ಲಿ ನೀನಾಸಂ ಸತೀಶ್ ನಿರ್ಮಾಣದ 'ರಾಕೆಟ್' ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಶಿವಶಶಿ ನಿರ್ದೇಶನದ ಈ ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನವಿದೆ.

ನೀನಾಸಂ ಸತೀಶ್, ಐಶಾನಿ ಶೆಟ್ಟಿ, ಅಚ್ಯುತ್ ಕುಮಾರ್, ನಾಗೇಂದ್ರ ಶಾ ಮುಂತಾದವರಿದ್ದಾರೆ. ಈ ಐದು ಸಿನಿಮಾಗಳಲ್ಲಿ ನಿಮ್ಮ ಆಯ್ಕೆ ಯಾವುದು? ವೀಕೆಂಡ್ ನಲ್ಲಿ ನೀವು ಮುಖ ಮಾಡುವುದು ಯಾವ ಸಿನಿಮಾ ಕಡೆಗೆ ಅಂತ ಕೆಳಗಿರುವ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ....
Fresh Kannada

Fresh Kannada

No comments:

Post a Comment

Google+ Followers

Powered by Blogger.