Breaking News
recent

ಶಿವಣ್ಣ ನಟನಾಗುವ ಬದಲು, ಕ್ರಿಕೆಟರ್ ಆಗ್ತಾರೆ ಅಂದುಕೊಂಡಿದ್ದೆ ಎಂದವರು ಯಾರು?

ಚಂದನವನದಲ್ಲಿ ಹ್ಯಾಟ್ರಿಕ್ ಹೀರೋ ಅಂತಾನೇ ಖ್ಯಾತಿ ಗಳಿಸಿರುವ ನಟ ಶಿವರಾಜ್ ಕುಮಾರ್ ಅವರು ನಟರಾಗುತ್ತಾರೆ ಅಂತ ನಾನು ಅಂದುಕೊಂಡಿರಲಿಲ್ಲ ಬದಲಾಗಿ ಅವರೊಬ್ಬ ಕ್ರಿಕೆಟರ್ ಆಗಬಹುದು ಅಂದುಕೊಂಡಿದ್ದೆ. ಎಂದು ನಿರ್ಮಾಪಕ-ಚಲನಚಿತ್ರ ಮಂಡಳಿ ಅಧ್ಯಕ್ಷ ಸಾರಾ ಗೋವಿಂದು ಅವರು ನುಡಿದಿದ್ದಾರೆ.
ಶಿವಣ್ಣ ನಟನಾಗುವ ಬದಲು, ಕ್ರಿಕೆಟರ್ ಆಗ್ತಾರೆ ಅಂದುಕೊಂಡಿದ್ದೆ ಎಂದವರು ಯಾರು?

ನವೆಂಬರ್ 2 ರಂದು ಬೆಂಗಳೂರಿನ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನಡೆದ ಕಿಲ್ಲಿಂಗ್ ವೀರಪ್ಪನ್ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಸಾರಾ ಗೋವಿಂದು ಅವರನ್ನು 'ಕಿಲ್ಲಿಂಗ್ ವೀರಪ್ಪನ್' ಚಿತ್ರತಂಡ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು "ಶಿವಣ್ಣ ಅವರು ನಟರಾಗುವ ಬದಲು, ಕ್ರಿಕೆಟ್ ಆಟಗಾರರಾಗುತ್ತಾರೆ ಎಂದು ನಾನು ತಿಳಿದಿದ್ದೆ, ಅವರು ಸಣ್ಣ ಹುಡುಗನಾಗಿದ್ದಾಗ ಇಲ್ಲಿ ಕ್ರಿಕೆಟ್ ಆಡಲು ಚೆನ್ನೈನಿಂದ ಬೆಂಗಳೂರಿಗೆ ಬರುತ್ತಿದ್ದದ್ದು, ಇನ್ನೂ ನನಗೆ ನೆನಪಿದೆ'.

'ಬ್ಯಾಟ್ ಮತ್ತು ಬಾಲ್ ನ ಆಟ ಎಂದರೆ ಅವರಿಗೆ ಹುಚ್ಚು. ಅವರು ವಾಪಸ್ ಚೆನ್ನೈಗೆ ಹೋಗುವಾಗ ಮರೆಯದೆ ತೆಗೆದುಕೊಂಡು ಹೋಗುತ್ತಿದ್ದ ಒಂದೇ ಒಂದು ವಸ್ತು ಎಂದರೆ ಅದು ಕ್ರಿಕೆಟ್ ಸೆಟ್'. ಎಂದು ಸಾರಾ ಗೋವಿಂದು ಅವರು ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

ನಿರ್ಮಾಪಕ-ಚಲನಚಿತ್ರ ಮಂಡಳಿ ಅಧ್ಯಕ್ಷ ಸಾರಾ ಗೋವಿಂದು ಅವರನ್ನು ಅಭಿನಂದಿಸಿದ ಶಿವಣ್ಣ ಅವರು, 'ಕನ್ನಡ ಸಿನಿಮಾಗಳನ್ನು ಚಲನಚಿತ್ರ ಮಂಡಳಿ ಉತ್ತೇಜಿಸಬೇಕು ಎಂಬುದಷ್ಟೇ ನನ್ನ ಅಭಿಲಾಷೆ' ಎಂದು ಹೇಳಿದ್ದಾರೆ.

ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಆಕ್ಷನ್-ಕಟ್ ಹೇಳಿರುವ 'ಕಿಲ್ಲಿಂಗ್ ವೀರಪ್ಪನ್' ಚಿತ್ರದ ಆಡಿಯೋ ಬಿಡುಗಡೆಯ ಅದ್ದೂರಿ ಕಾರ್ಯಕ್ರಮದಲ್ಲಿ ರಾಕಿಂಗ್ ಸ್ಟಾರ್ ಯಶ್, ನಟ-ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಸಂಚಾರಿ ವಿಜಯ್, ರಾಮ್ ಗೋಪಾಲ್ ವರ್ಮಾ, ಪುನೀತ್ ರಾಜ್ ಕುಮಾರ್, ಮತ್ತು ಲಹರಿವೇಲು ಮುಂತಾದ ಚಿತ್ರರಂಗದ ಖ್ಯಾತ ಗಣ್ಯರು ಪಾಲ್ಗೊಂಡಿದ್ದರು.
Fresh Kannada

Fresh Kannada

No comments:

Post a Comment

Google+ Followers

Powered by Blogger.