Breaking News
recent

ಸ್ಮಶಾನದಲ್ಲಿ ಹುಚ್ಚ ವೆಂಕಟ್ ಹೊಸ ಸಿನಿಮಾ ಮುಹೂರ್ತ.!

ಹುಚ್ಚ ವೆಂಕಟ್ ಅಂದ್ರೇನೆ ಹಾಗೆ...ಅವರೇ ಬೇರೆ, ಅವರ ಸ್ಟೈಲೇ ಬೇರೆ...ಸದಾ ನೀಲಿ ಬಟ್ಟೆ ತೊಡುವುದರಿಂದ 'ಬ್ಲೂ ಸ್ಟಾರ್' ಅಂತ ಫೇಮಸ್ ಆಗಿರುವ ಹುಚ್ಚ ವೆಂಕಟ್ ಹೊಸ ಸಿನಿಮಾ ಮಾಡೋಕೆ ಸಿದ್ಧತೆ ನಡೆಸುತ್ತಿದ್ದಾರೆ.
ಸ್ಮಶಾನದಲ್ಲಿ ಹುಚ್ಚ ವೆಂಕಟ್ ಹೊಸ ಸಿನಿಮಾ ಮುಹೂರ್ತ.!

'ಬಿಗ್ ಬಾಸ್-3' ಕಾರ್ಯಕ್ರಮದಿಂದ ಹೊರ ಬಂದ ಕೂಡಲೆ, ಅವರ ನೂತನ ಚಿತ್ರದ ಮುಹೂರ್ತ ಸಮಾರಂಭ ಅದ್ದೂರಿಯಾಗಿ ನೆರವೇರಲಿದೆ.

ಸಾಮಾನ್ಯವಾಗಿ ಚಿತ್ರದ ಮುಹೂರ್ತ ಸಮಾರಂಭ ಅಂದ್ರೆ, ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ, ಇಲ್ಲಾಂದ್ರೆ ಯಾವುದಾದರೂ ದೇವಸ್ಥಾನದಲ್ಲಿ ನಡೆಯುವುದು ವಾಡಿಕೆ. ಆದ್ರೆ, ಮುಹೂರ್ತ ಸಮಾರಂಭಕ್ಕೆ ಹುಚ್ಚ ವೆಂಕಟ್ ಫಿಕ್ಸ್ ಮಾಡಿರುವ ಜಾಗ ಯಾವ್ದು ಗೊತ್ತಾ? ಸ್ಮಶಾನ.!

ಅಚ್ಚರಿ ಆದರೂ ಇದೇ ಸತ್ಯ. ತಮ್ಮ ಹೊಸ ಸಿನಿಮಾ ಮುಹೂರ್ತವನ್ನ ಹುಚ್ಚ ವೆಂಕಟ್ ಸ್ಮಶಾನದಲ್ಲಿ ನೆರವೇರಿಸುತ್ತಾರಂತೆ. ಹಾಗಂತ ಸ್ವತಃ ಹುಚ್ಚ ವೆಂಕಟ್ 'ಬಿಗ್ ಬಾಸ್' ಮನೆಯಲ್ಲಿ ಹೇಳಿದ್ದಾರೆ.

''ನಾನು ಇಲ್ಲಿಂದ ಆಚೆ ಬಂದ ಕೂಡಲೆ, ಸ್ಮಶಾನದಲ್ಲಿ ಸಿನಿಮಾ ಮುಹೂರ್ತ ಮಾಡಿ, ಸಾಂಗ್ ಶೂಟ್ ಮಾಡ್ತೀನಿ'' ಅಂತ ಹುಚ್ಚ ವೆಂಕಟ್ ಹೇಳಿದ್ದಾರೆ.

ಸ್ಮಶಾನ ಅಂದಕೂಡಲೆ, ಹಾರರ್ ಸಿನಿಮಾ ಇರಬಹುದಾ ಅಂತ ಲೆಕ್ಕ ಹಾಕ್ಬೇಡಿ. ಇದು ರೌಡಿಸಂ ಸಿನಿಮಾ. ಚಿತ್ರದಲ್ಲಿ ಹೀರೋಯಿನ್ ಯಾರು ಅನ್ನೋದೇ 'ಸಸ್ಪೆನ್ಸ್' ಅಂತಾರೆ ಹುಚ್ಚ ವೆಂಕಟ್.
Fresh Kannada

Fresh Kannada

No comments:

Post a Comment

Google+ Followers

Powered by Blogger.