Breaking News
recent

ಬಿಗ್‍ಬಾಸ್ ಮನೆಯ ಭಲೇ ಜೋಡಿ ಯಾರು ಗೊತ್ತಾ..?

ಪ್ರಸಿದ್ಧ ರಿಯಾಲಿಟಿ ಶೋ ಬಿಗ್‍ಬಾಸ್‍ನಲ್ಲಿ ಮನೋರಂಜನೆಗೇನೂ ಕೊರತೆಯಿಲ್ಲ. ಇಷ್ಟು ದಿನ ಮನೆಯಲ್ಲಿ ಡ್ರಾಮಾ, ರೊಮ್ಯಾನ್ಸ್, ಸೆಂಟಿಮೆಂಟ್, ದೊಂಬರಾಟ ಎಲ್ಲವೂ ನಡೆಯುತ್ತಿತ್ತು. ಆದರೆ ನಿನ್ನೆ ಮಾತ್ರ ಸ್ಪರ್ಧಿಗಳೆಲ್ಲಾ ವಿಶೇಷವಾದ ಉಡುಗೆ ತೊಟ್ಟು ಉಲ್ಟಾಪಲ್ಟಾ ಆಗಿದ್ದರು.
ಬಿಗ್‍ಬಾಸ್ ಮನೆಯ ಭಲೇ ಜೋಡಿ ಯಾರು ಗೊತ್ತಾ..?

ಹೌದು, ಬಿಗ್‍ಬಾಸ್ ಮನೆಯಲ್ಲಿ ನಿನ್ನೆ ನಡೆದ ಭಲೇ ಜೋಡಿ ಟಾಸ್ಕ್‍ನಲ್ಲಿ ಕೆಲವು ಗಂಡಸರು ಹೆಂಗಸರಾದರೆ, ಇನ್ನು ಕೆಲವು ಹುಡುಗಿಯರು ಗಂಡಿನ ವೇಷ ಧರಿಸಿ ಗಮ್ಮತ್ತು ತೋರಿಸಿದರು. ಒಬ್ಬರು ಕಣ್ಣಿಗೆ ಪಟ್ಟಿ ಕಟ್ಟಿಕೊಂಡೇ ಮೇಕಪ್ ಮಾಡಿದರೆ, ಮತ್ತೊಬ್ಬರು ಏನೂ ಮಾತಾಡದೇ ಖುಷಿಯಿಂದ ಅಲಂಕಾರ ಮಾಡಿಸಿಕೊಂಡರು.
ರೆಹಮಾನ್, ಅಯ್ಯಪ್ಪ ಮತ್ತು ಚಂದನ್ ಹುಡುಗಿಯರಂತೆ ಲಂಗ ತೊಟ್ಟರೆ ಕೃತಿಕಾ ಮತ್ತು ಭಾವನಾ ಬೆಳಗೆರೆ ಹುಡುಗರಂತೆ ಮೀಸೆ ತಿರುವಿದರು. ಉಲ್ಟಾ ಪಲ್ಟಾ ಅಲಂಕಾರ ಮಾಡಿಕೊಂಡ ಜೋಡಿಗಳು ಮತ್ತೇರಿಸುವ ಹಾಡುಗಳಿಗೆ ಸ್ಟೆಪ್ ಹಾಕಿದ್ದು ಎಲ್ಲರನ್ನೂ ಹೊಟ್ಟೆ ಹುಣ್ಣಾಗಿಸುವಂತೆ ನಗಿಸಿತು. ಚಂದನ್ ಮತ್ತು ರೆಹಮಾನ್ ಹುಡುಗಿಯರೂ ಮಾಡದಷ್ಟು ಒನಪು ವೈಯ್ಯಾರ ತೋರುತ್ತಿದ್ದರೆ, ಅಯ್ಯಪ್ಪ ಮಾತ್ರ ತಮ್ಮ ಅಲಂಕಾರವನ್ನು ನೋಡಿಕೊಂಡು ಪೇಚಾಡುತ್ತಿದ್ದರು.
ಇವರನ್ನೆಲ್ಲಾ ನೋಡುತ್ತಿದ್ದ ಕ್ಯಾಪ್ಟನ್ ಶೃತಿ ಅಕ್ಕ ಅವರ ನಗುವಿಗೆ ಪಾರವೇ ಇರಲಿಲ್ಲ. ಕೊನೆಗೆ ಶೃತಿ ಅವರ ಆಯ್ಕೆಯಂತೆ ಚಂದನ್ ಮತ್ತು ಆರ್‍ಜೆ ನೇತ್ರಾ ಭಲೇ ಜೋಡಿಯಾಗಿ ಮಿಂಚಿದರು.
Fresh Kannada

Fresh Kannada

No comments:

Post a Comment

Google+ Followers

Powered by Blogger.