Breaking News
recent

ಯಾರೀ ಹುಚ್ಚ ವೆಂಕಟ್? ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿ

ಹುಚ್ಚ ವೆಂಕಟ್ ಯಾರು ಅಂದ್ರೆ, ''ನನ್ ಮಗಂದ್'' ಅನ್ನುವ ಡೈಲಾಗ್ ನ ಪುಟ್ಟ ಹುಡುಗ ಕೂಡ ಹೇಳ್ತಾನೆ. ಅಷ್ಟರಮಟ್ಟಿಗೆ ಯೂಟ್ಯೂಬ್ ಸ್ಟಾರ್ ಹುಚ್ಚ ವೆಂಕಟ್ ಈಗ 'ಸ್ಯಾಂಡಲ್ ವುಡ್ ಸೆನ್ಸೇಷನ್'.

ಕೆಲವೇ ವರ್ಷಗಳ ಹಿಂದೆ ಈ ಹುಚ್ಚ ವೆಂಕಟ್ ಯಾರು ಅನ್ನೋದೇ ಜನರಿಗೆ ಗೊತ್ತಿರ್ಲಿಲ್ಲ.! ಯಾವಾಗ 'ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ನನ್ನ ಹೆಂಡತಿ' ಅಂತ್ಹೇಳಿ ಬ್ರೇಕಿಂಗ್ ನ್ಯೂಸ್ ಮಾಡಿದ್ರೋ, ಹುಚ್ಚ ವೆಂಕಟ್ ಏಕ್ದಂ ಫೇಮಸ್ ಆಗ್ಬಿಟ್ರು.

ಹುಚ್ಚ ವೆಂಕಟ್ ಮಾತುಗಳನ್ನ ಕೇಳಿದ್ರೆ, 'ಹುಚ್ಚ ವೆಂಕಟ್' ಅನ್ನೋದು ಸಿನಿಮಾನಾ ಇಲ್ಲಾ ಅವರ ನಿಜವಾದ ಹೆಸರಾ' ಅನ್ನೋ ಕನ್ಫ್ಯೂಷನ್ ಈಗಲೂ ಅನೇಕರಲ್ಲಿ ಕಾಡ್ತಿದೆ.

ಅಷ್ಟಕ್ಕೂ ಈ ಹುಚ್ಚ ವೆಂಕಟ್ ಯಾರು? ಅವರ ಹಿನ್ನಲೆ ಏನು? ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು ಹೇಗೆ ಅನ್ನೋದರ ಕುರಿತ ಕಂಪ್ಲೀಟ್ ಡೀಟೇಲ್ಸ್ ಹೇಳ್ತೀವಿ. ಕೆಳಗಿರುವ ಫ್ರೆಶ್ ಕನ್ನಡ  ಅಪ್ಡೇಟ್ ಓದಿ 
ಯಾರೀ ಹುಚ್ಚ ವೆಂಕಟ್? ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿ


1. ಯಾರೀ ಹುಚ್ಚ ವೆಂಕಟ್? 
ಕಳೆದ ವರ್ಷ ರಿಲೀಸ್ ಆಗಿದ್ದ 'ಹುಚ್ಚ ವೆಂಕಟ್' ಚಿತ್ರದ ನಾಯಕ, ನಿರ್ದೇಶಕ, ನಿರ್ಮಾಪಕ, ಗೀತ ರಚನೆಕಾರ ಸೇರಿದಂತೆ ಸಕಲವೂ ಆಗಿದ್ದವರು ಹುಚ್ಚ ವೆಂಕಟ್. ಇದಕ್ಕೂ ಮುನ್ನ ಕೆಲ ವರ್ಷಗಳ ಹಿಂದೆ 'ಸ್ವತಂತ್ರಪಾಳ್ಯ' ಅನ್ನುವ ಸಿನಿಮಾ ನಿರ್ದೇಶಿಸಿದ್ದರು ಹುಚ್ಚ ವೆಂಕಟ್. 

2. ಹುಚ್ಚ ವೆಂಕಟ್ ಅನ್ನೋದು ಅವರ ಹೆಸರಾ? 
ಇಂದು 'ಹುಚ್ಚ ವೆಂಕಟ್' ಅಂತ ವರ್ಲ್ಡ್ ಫೇಮಸ್ ಆಗಿರುವ ಇವರ ನಿಜನಾಮ ವೆಂಕಟರಾಮನ್. ಮನೆಯಲ್ಲಿ ಪ್ರೀತಿಯಿಂದ ಎಲ್ಲರೂ ಇವರನ್ನ ವೆಂಕಟ್ ಅಂತ ಕರೀತಾರೆ. ತಾಯಿ ಗೌರಮ್ಮ ಇವರನ್ನ ವೆಂಕಲ್ ಅಂತ ಮುದ್ದು ಮಾಡುತ್ತಿದ್ದರು.

3.ತುಂಬು ಕುಟುಂಬದಲ್ಲಿ ಹುಟ್ಟಿದ ಹುಚ್ಚ ವೆಂಕಟ್ 
PWD ಕಾಂಟ್ರ್ಯಾಕ್ಟರ್ ಲಕ್ಷ್ಮಣ್ ಮತ್ತು ಗೌರಮ್ಮ ದಂಪತಿಯ ಏಳು ಮಕ್ಕಳಲ್ಲಿ ವೆಂಕಟರಾಮನ್ ಕೊನೆಯ ಮಗ. ಹೀಗಾಗಿ ವೆಂಕಟರಾಮನ್ ತಂದೆ-ತಾಯಿಗೆ ಮುದ್ದಿನ ಮಗ. 

4. ಶ್ರೀಮಂತ ಕುಟುಂಬದ ಹುಡುಗ ಹುಚ್ಚ ವೆಂಕಟ್ 
ಖುದ್ದು ಹುಚ್ಚ ವೆಂಕಟ್ ಆಗಾಗ ಬೊಬ್ಬೆ ಹೊಡೆದುಕೊಳ್ಳುವಂತೆ ಅವರ ಬ್ಯಾಕ್ ಗ್ರೌಂಡ್ ಚೆನ್ನಾಗಿದೆ. ಅವರ ತಂದೆ ಶ್ರೀಮಂತರು. ಆಗಿನ ಕಾಲಕ್ಕೆ PWD ಕಾಂಟ್ರ್ಯಾಕ್ಟರ್ ಆಗಿದ್ದ ಲಕ್ಷಣ್ ಆರ್ಥಿಕವಾಗಿ ಚೆನ್ನಾಗಿದ್ದಾರೆ. ಇಂದಿರಾನಗರ, ಕನಕಪುರ ರಸ್ತೆಯಲ್ಲಿ ಸ್ವಂತ ಮನೆ, ದೇವನಹಳ್ಳಿಯಲ್ಲಿ ಅವರ ಎಸ್ಟೇಟ್ ಇದೆ. 

5. ಸಿವಿಲ್ ಎಂಜಿನಿಯರ್ ಈ ಹುಚ್ಚ ವೆಂಕಟ್ 
ಇಂದು ಪಟಪಟ ಅಂತ ಇಂಗ್ಲೀಷ್ ನಲ್ಲಿ ಮಾತನಾಡುವ ಹುಚ್ಚ ವೆಂಕಟ್ ಬುದ್ಧಿವಂತ. ಶಾಲಾ-ಕಾಲೇಜಿನಲ್ಲಿ ರ್ಯಾಂಕ್ ಸ್ಟೂಡೆಂಟ್ ಅಂದ್ರೆ ನೀವು ನಂಬಲೇಬೇಕು. ಇಂದಿರಾನಗರದ ಶ್ರೀ ಕಾವೇರಿ ಶಾಲೆ ಮತ್ತು ಜೆ.ಪಿ.ನಗರದ ಆಕ್ಸ್ ಫರ್ಡ್ ಕಾಲೇಜ್ ನಲ್ಲಿ ವ್ಯಾಸಂಗ ಮಾಡಿರುವ ಹುಚ್ಚ ವೆಂಕಟ್ ಸಿವಿಲ್ ಎಂಜಿನಿಯರಿಂಗ್ ಪದವೀಧರ. 

6. ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿ ಓನರ್.! 
ಸಿವಿಲ್ ಎಂಜಿನಿಯರಿಂಗ್ ಮುಗಿಸಿದ ತಕ್ಷಣ ಲೈಫ್ ಸ್ಟೈಲ್ ಶೋ ರೂಮ್ ನಲ್ಲಿ ಮ್ಯಾನೇಜರ್ ಆದ ಹುಚ್ಚ ವೆಂಕಟ್, ಕೆಲವೇ ತಿಂಗಳುಗಳಲ್ಲಿ ಕೆಲಸ ಬಿಡ್ತಾರೆ. ನಂತರ ತಮ್ಮದೇ ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿ ಓಪನ್ ಮಾಡ್ತಾರೆ. ಆದ್ರೆ, ಬಣ್ಣ ಬದುಕಿನ ಸೆಳೆತದಿಂದ ಅದಕ್ಕೆಲ್ಲಾ ಎಳ್ಳು-ನೀರು ಬಿಟ್ಟು ಗಾಂಧಿನಗರದ ಕದ ತಟ್ಟಿದರು ಹುಚ್ಚ ವೆಂಕಟ್. 

7. ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದು ಹೇಗೆ? 
ಹುಚ್ಚ ವೆಂಕಟ್ ಕನ್ನಡ ಚಿತ್ರರಂಗಕ್ಕೆ ಕಾಲಿಡುವುಕ್ಕೆ ಕಾರಣ ಅವರ ಸಹೋದರ ಕುಶಾಲ್ ಬಾಬು. 'ಆಸೆಗಳು ನೂರಾರು' ಸೇರಿದಂತೆ ಕೆಲವು ಧಾರಾವಾಹಿಗಳು ಮತ್ತು 'ಸಮುದ್ರ' ಸೇರಿದಂತೆ ಹಲವು ಚಿತ್ರಗಳಲ್ಲಿ ಹುಚ್ಚ ವೆಂಕಟ್ ಸಹೋದರ ಕುಶಾಲ್ ಬಾಬು ನಟಿಸಿದ್ದಾರೆ.

8. ಅಣ್ಣನಿಂದ ಚಿಗುರಿದ ಕನಸು 
ಅಣ್ಣ ಕುಶಾಲ್ ಬಾಬು ನಟಸುತ್ತಿದ್ದನ್ನ ನೋಡಿ, ಹುಚ್ಚ ವೆಂಕಟ್ ಗೂ ನಟಿಸುವ ಆಸೆ ಆಗಿದೆ. ಹುಚ್ಚ ವೆಂಕಟ್ ಹೀರೋ ಆಗುವ ಆಸೆಗೆ ಅವರ ಸಹೋದರ ಕುಶಾಲ್ ಬಾಬು ಸ್ಪೂರ್ಥಿ. ನಿಜ ಹೇಳ್ಬೇಕಂದ್ರೆ, ಎಂಜಿನಿಯರ್ ಆಗಿದ್ದ ಕುಶಾಲ್ ಬಾಬು ಬಣ್ಣ ಹಚ್ಚುವುದು ಅವರ ತಂದೆ ಲಕ್ಷ್ಮಣ್ ಗೆ ಇಷ್ಟವಿರಲಿಲ್ಲ. ಅಪ್ಪನಿಂದ ತಪ್ಪಿಸಿಕೊಂಡು ಕದ್ದು-ಮುಚ್ಚಿ ನಟಿಸುತ್ತಿದ್ದ ಕುಶಾಲ್ ಬಾಬು, ತಮ್ಮ ಸಹೋದರನಿಗೂ ಸ್ಪೂರ್ಥಿಯಾಗುತ್ತೇನೆ ಅಂತ ಅಂದುಕೊಂಡಿರಲಿಲ್ಲವಂತೆ. 

9. 'ಸ್ವತಂತ್ರಪಾಳ್ಯ' ಸಿನಿಮಾ ಮಾಡಿ ಕೈಸುಟ್ಟುಕೊಂಡ ಹುಚ್ಚ ವೆಂಕಟ್.! 
ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿಗೆ ಬೀಗ ಜಡಿದು ವೆಂಕಟರಾಮನ್ 'ಸ್ವತಂತ್ರಪಾಳ್ಯ' ಅನ್ನುವ ಸಿನಿಮಾ ಮಾಡಿದ್ರು. ಅದಕ್ಕೆ ಅವರೇ ಸೂತ್ರಧಾರಿ ಮತ್ತು ಪಾತ್ರಧಾರಿ. ವೆಂಕಟ್ ನಿರೀಕ್ಷಿಸಿದಂತೆ 'ಸ್ವತಂತ್ರಪಾಳ್ಯ' ಯಶಸ್ಸು ಕಾಣ್ಲಿಲ್ಲ. ಹಾಕಿದ ದುಡ್ಡೆಲ್ಲಾ ನೀರಲ್ಲಿ ಹೋಮ ಮಾಡಿದಂತಾಯ್ತು. 

10. ಅಂದೇ ಡಿಪ್ರೆಸ್ ಆಗಿದ್ದ ಹುಚ್ಚ ವೆಂಕಟ್ 
ಮೊದಲ ಪ್ರಯತ್ನದಲ್ಲೇ ಕೈಸುಟ್ಟುಕೊಂಡ ಹುಚ್ಚ ವೆಂಕಟ್ ಅಂದೇ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು.

11. ಹುಚ್ಚ ವೆಂಕಟ್ ಆಗಿದ್ದು ಹೇಗೆ? 
'ಸ್ವತಂತ್ರಪಾಳ್ಯ' ಸಿನಿಮಾ ನಂತ್ರ ಚಿತ್ರ ನಿರ್ಮಾಣಕ್ಕೆ ವೆಂಕಟರಾಮನ್ ಕೈಹಾಕಲಿಲ್ಲ. ಅಲ್ಲೊಂದು ಇಲ್ಲೊಂದು ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಕೆಲವು ವರ್ಷಗಳ ನಂತರ ಅವರ ಸ್ನೇಹಿತರೆಲ್ಲಾ ಸೇರಿ 'ಮೆಂಟಲ್ ಮಂಜ' ಅಂತ ಸಿನಿಮಾ ಮಾಡಿದರು. ಗಾಂಧಿನಗರದಲ್ಲಿ 'ಮೆಂಟಲ್ ಮಂಜ' ತಕ್ಕಮಟ್ಟಿಗೆ ಹೆಸರು ಮಾಡ್ತು. ಆ ಚಿತ್ರದಲ್ಲಿ ವೆಂಕಟರಾಮನ್ ಕೂಡ ಒಂದು ಸಣ್ಣ ಪಾತ್ರ ಮಾಡಿದ್ದಾರೆ.

12. ಹುಚ್ಚ ವೆಂಕಟ್ ಗೆ ಇದೇ ಸ್ಪೂರ್ಥಿ.! 
'ಮೆಂಟಲ್ ಮಂಜ' ಸೌಂಡ್ ಮಾಡ್ತಿದ್ದ ಹಾಗೆ, ಇದೇ ತರಹ ಸಿನಿಮಾ ಮಾಡ್ಬೇಕು ಅನ್ನೋ ಆಸೆಯಿಂದ ವೆಂಕಟರಾಮನ್ 'ಹುಚ್ಚ ವೆಂಕಟ್' ಅನ್ನೋ ಪ್ರಾಜೆಕ್ಟ್ ಗೆ ಕೈಹಾಕಿದರು. (ಮೆಂಟಲ್ ಬದಲು ಹುಚ್ಚ)

13. ಸಿನಿಮಾದಿಂದ ಅದೇ ಹೆಸರು ಫಿಕ್ಸ್.! 
'ಹುಚ್ಚ ವೆಂಕಟ್' ಸಿನಿಮಾ ಯಶಸ್ಸು ಆಗ್ಲಿಲ್ಲ. ಆದ್ರೆ, ಅದೇ ಶೀರ್ಷಿಕೆಯನ್ನ ತಮ್ಮ ಹೆಸರು ಅಂತ ವೆಂಕಟರಾಮನ್ ಜಗಜಾಹೀರು ಮಾಡಿದರು. ಅಂದಿನಿಂದ ವೆಂಕಟರಾಮನ್ 'ಹುಚ್ಚ ವೆಂಕಟ್' ಆದರು.

14. 'ರಮ್ಯಾ ನನ್ನ ಪತ್ನಿ' ಎಂದಿದ್ದ ಹುಚ್ಚ ವೆಂಕಟ್.! 
ಇದರ ನಡುವೆ 'ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ನನ್ನ ಹೆಂಡತಿ' ಅಂತ್ಹೇಳಿ ಹುಚ್ಚ ವೆಂಕಟ್ ಬ್ರೇಕಿಂಗ್ ನ್ಯೂಸ್ ಮಾಡಿ ಕಬ್ಬನ್ ಪಾರ್ಕ್ ಪೊಲೀಸರ ಅತಿಥಿಯಾದರು. ಅಂದಿನಿಂದ ಕರುನಾಡ ವೀಕ್ಷಕರು ವೆಂಕರಾಮನ್ ಗೆ 'ಹುಚ್ಚ ವೆಂಕಟ್' ಅನ್ನುವ ಹೆಸರನ್ನೇ ಫಿಕ್ಸ್ ಮಾಡಿಬಿಟ್ಟರು.

15. ಬನಶಂಕರಿ ಆರಾಧಕ ಹುಚ್ಚ ವೆಂಕಟ್ 
''ಅಪ್ಪ-ಅಮ್ಮ ಬಿಟ್ಟರೆ ಯಾವ ದೇವರೂ ಇಲ್ಲ'' ಅಂತ ಈಗ ಅಬ್ಬರಿಸುವ ಹುಚ್ಚ ವೆಂಕಟ್ ಬನಶಂಕರಿ ದೇವಿಯ ಆರಾಧಕ ಅನ್ನುವುದು ಸತ್ಯ ಸಂಗತಿ. ಪ್ರತಿ ವಾರ ಬನಶಂಕರಿ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸುತ್ತಾರೆ ಹುಚ್ಚ ವೆಂಕಟ್.

16. ಯಾವುದು ಇಷ್ಟ; ಯಾವುದು ಕಷ್ಟ? 
ಹುಚ್ಚ ವೆಂಕಟ್ ಗೆ ಟೀ ಅಂದ್ರೆ ಪಂಚಪ್ರಾಣ. ನಾನ್ ವೆಜ್ ಅಡುಗೆ ಮಾಡೋದು ಅಂದ್ರೆ ಇಷ್ಟ. ಮನೆಯಲ್ಲಿ ಮಾತ್ರ ಊಟ ಮಾಡುವ ಹುಚ್ಚ ವೆಂಕಟ್, ಹೋಟೆಲ್ ನಲ್ಲಿ ತಿನ್ನಲ್ಲ.

17. ಕೋಪಿಷ್ಠ ಆದರೂ ಹೃದಯ ಶ್ರೀಮಂತ 
ಹುಚ್ಚ ವೆಂಕಟ್ ಕೋಪಿಷ್ಠ ಆದರೂ ಹೃದಯ ಶ್ರೀಮಂತ, ಪ್ರಾಣಿ ಪ್ರಿಯ ಅನ್ನೋದಕ್ಕೆ ಒಂದು ಸಣ್ಣ ಘಟನೆ ಹೇಳ್ತೀವಿ ಕೇಳಿ, ಇಂದಿರಾನಗರದ ಅವರ ಮನೆ ಮುಂದೆ ನಾಯಿ ಬೊಗಳುತ್ತಿತ್ತು. ಆಗ ಸಮಯ ಮಧ್ಯರಾತ್ರಿ 12.30. ನಾಯಿಗೆ ಹಸಿವು ತಾಳಲಾರದೆ ಕಿರುಚುತ್ತಿತ್ತು. ತಕ್ಷಣ ಎಚ್ಚೆತ್ತ ಹುಚ್ಚ ವೆಂಕಟ್ ಅವರ ಅಕ್ಕನಿಗೆ ಬಿಸಿ ಅಡುಗೆ ಮಾಡುವಂತೆ ಹೇಳಿದರು. ಅಡುಗೆ ಆದ ನಂತರ ಅವರೇ ಖುದ್ದಾಗಿ ಹೋಗಿ ನಾಯಿಗೆ ಊಟ ಹಾಕಿದರಂತೆ. ಅವತ್ತು ಅವರು ನಾಯಿಗೆ ಮನೆಯಲ್ಲಿ ಉಳಿದಿದ್ದ ತಂಗಳು ಅನ್ನವನ್ನೇ ಹಾಕಬಹುದಿತ್ತು. ಆದ್ರೆ ಹಾಗೆ ಮಾಡಲಿಲ್ಲ ಅಂತ ಹುಚ್ಚ ವೆಂಕಟ್ ಭಾವ ಸುರೇಂದ್ರ ರಾಜ್ ಹೇಳ್ತಾರೆ.

18. ಬಡವರ ಕಂಡ್ರೆ ಸಿಕ್ಕಾಪಟ್ಟೆ ಕಾಳಜಿ 
ಬಡವರು ಹಾಗೂ ಭಿಕ್ಷುಕರನ್ನ ಕಂಡ್ರೆ ಹುಚ್ಚ ವೆಂಕಟ್ ಗೆ ಸಿಕ್ಕಾಪಟ್ಟೆ ಕಾಳಜಿ. ಮನೆಯಿಂದ ಹೊರಟರೆ, ಜೇಬಲ್ಲಿ 50-100 ರೂಪಾಯಿಯನ್ನ ಕಂಪಲ್ಸರಿಯಾಗಿ ಭಿಕ್ಷುಕರಿಗೆ ಕೊಡೋದಕ್ಕಂತ ಹುಚ್ಚ ವೆಂಕಟ್ ಇಟ್ಕೊಂಡು ತೆರೆಳ್ತಾರೆ ಅಂತ ಹುಚ್ಚ ವೆಂಕಟ್ ಸಹೋದರಿ ಸುನೀತಾ ಹೇಳ್ತಾರೆ.

19. ಮನೆಯಲ್ಲಿ ತುಂಬಾ ಸೈಲೆಂಟ್.! 
ಇಂದು ಅಬ್ಬರಕ್ಕೆ ವರ್ಲ್ಡ್ ಫೇಮಸ್ ಆಗಿರುವ ಹುಚ್ಚ ವೆಂಕಟ್ ಮನೆಯಲ್ಲಿ ಮಾತ್ರ ತುಂಬಾ ಸೈಲೆಂಟ್. ಮನೆಯಲ್ಲಿದ್ದರೂ ಗೊತ್ತಾಗದ ಸೌಮ್ಯ ಸ್ವಭಾವದ ವ್ಯಕ್ತಿ ಅನ್ನೋದು ನಿಮಗೆ ಗೊತ್ತಿಲ್ಲದೇ ಇರುವ ಸತ್ಯ ಸಂಗತಿ. 

Fresh Kannada

Fresh Kannada

No comments:

Post a Comment

Google+ Followers

Powered by Blogger.