Breaking News
recent

ಪವರ್ ಸ್ಟಾರ್ 'ಚಕ್ರವ್ಯೂಹ' ದಲ್ಲಿ ಖಳನಟನಾಗಿ ಅಭಿಮನ್ಯು ಸಿಂಗ್!

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗೆ 2016ನೇ ವರ್ಷದಲ್ಲಿ ಫುಲ್ ಹಬ್ಬದ ವಾತಾವರಣ ಸೃಷ್ಟಿಯಾಗಲಿದೆ. 
ಪವರ್ ಸ್ಟಾರ್ 'ಚಕ್ರವ್ಯೂಹ' ದಲ್ಲಿ ಖಳನಟನಾಗಿ ಅಭಿಮನ್ಯು ಸಿಂಗ್!

ಅದೇನಪ್ಪಾ ಅಂದ್ರೆ ನಿರ್ದೇಶಕ ದುನಿಯಾ ಸೂರಿ ಆಕ್ಷನ್-ಕಟ್ ಹೇಳಿರುವ, ರಾಧಿಕಾ ಪಂಡಿತ್, ಅಂಬರೀಶ್, ಸುಮಲತಾ, ಭಾರತಿ ವಿಷ್ಣುವರ್ಧನ್ ಮುಂತಾದವರು ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿರುವ, ಬಹುನಿರೀಕ್ಷಿತ 'ದೊಡ್ಮನೆ ಹುಡುಗ' ಚಿತ್ರದ ಚಿತ್ರೀಕರಣ ಬಹಳ ಭರದಿಂದ ಸಾಗುತ್ತಿದ್ದು, 2016 ಪವರ್ ಸ್ಟಾರ್ ಹುಟ್ಟುಹಬ್ಬದಂದು ಈ ಸಿನಿಮಾವನ್ನು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

ಜೊತೆಗೆ ಪುನೀತ್ ಅವರ 25ನೇ ಚಿತ್ರ 'ಚಕ್ರವ್ಯೂಹ' ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಈ ಚಿತ್ರವನ್ನು 2016ರಲ್ಲಿ ತೆರೆಗೆ ತರಲು ತಮಿಳು ನಿರ್ದೇಶಕ ಎಮ್ ಸರವನನ್ ಅವರು ಪ್ಲಾನ್ ಮಾಡುತ್ತಿದ್ದಾರೆ. ಚಿತ್ರದಲ್ಲಿ ರಚಿತಾ ರಾಮ್ ಪುನೀತ್ ಅವರೊಂದಿಗೆ ಡ್ಯುಯೆಟ್ ಹಾಡಲಿದ್ದು, 'ಎನ್ನೈ ಅರಿಂದಾಲ್' ಖ್ಯಾತಿಯ ತಮಿಳು ನಟ ಅರುಣ್ ವಿಜಯ್ ಅವರು ನೆಗೆಟಿವ್ ಪಾತ್ರದಲ್ಲಿ ಮಿಂಚಿದ್ದಾರೆ.

ಇದೀಗ 'ಚಕ್ರವ್ಯೂಹ' ಚಿತ್ರದಿಂದ ಬಂದಿರುವ ಲೇಟೆಸ್ಟ್ ಮಾಹಿತಿ ಏನಪ್ಪಾ ಅಂದ್ರೆ, ಬಾಲಿವುಡ್, ಟಾಲಿವುಡ್, ಕಾಲಿವುಡ್, ನಲ್ಲಿ ಖಳನಟನಾಗಿ ಮಿಂಚಿರುವ ಬಹುಭಾಷಾ ನಟ ಅಭಿಮನ್ಯು ಸಿಂಗ್ ಅವರು ಕೂಡ ಈ ಚಿತ್ರದಲ್ಲಿ ವಿಲನ್ ಪಾತ್ರ ವಹಿಸಲಿದ್ದು, ನಟ ಅರುಣ್ ವಿಜಯ್ ಅವರಿಗೆ ಸಾಥ್ ನೀಡಲಿದ್ದಾರೆ.

ಅಂದಹಾಗೆ ಬೇರೆ ಭಾಷೆಗಳಲ್ಲಿ ವಿಲನ್ ಪಾತ್ರದ ಮೂಲಕ ತಮ್ಮ ಖದರ್ ತೋರಿರುವ ಈ ಇಬ್ಬರು ನಟರಿಗೂ ಸ್ಯಾಂಡಲ್ ವುಡ್ ಕ್ಷೇತ್ರ ಹೊಸದಾಗಿರುವುದರಿಂದ, ಕನ್ನಡದಲ್ಲಿ ಅವರ ನಟನೆ ಹೇಗಿರುತ್ತದೆ ಅನ್ನೋದು ಚಿತ್ರ ಬಿಡುಗಡೆಯಾದ ನಂತರ ತಿಳಿಯಬೇಕಿದೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.