Breaking News
recent

ಅಂಬೇಡ್ಕರ್ ಬಗ್ಗೆ ಅವಹೇಳನಕಾರಿ ಹೇಳಿಕೆ: ಹುಚ್ಚ ವೆಂಕಟ್ ಬಂಧನ

ಅಂಬೇಡ್ಕರ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದ ನಟ, ನಿರ್ದೇಶಕ ಹುಚ್ಚ ವೆಂಕಟ್‍ನನ್ನು ಬೆಂಗಳೂರಿನ ಜ್ಞಾನಭಾರತಿ ಪೊಲೀಸರು ಬಂಧಿಸಿದ್ದಾರೆ.
ಅಂಬೇಡ್ಕರ್ ಬಗ್ಗೆ ಅವಹೇಳನಕಾರಿ ಹೇಳಿಕೆ: ಹುಚ್ಚ ವೆಂಕಟ್ ಬಂಧನ

ಅಂಬೇಡ್ಕರ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದ ಹಿನ್ನೆಲೆಯಲ್ಲಿ ಹುಚ್ಚ ವೆಂಕಟ್ ವಿರುದ್ಧ ದಲಿತ ಸಂಘಟನೆ ಸದಸ್ಯರು ದೂರು ನೀಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಜ್ಞಾನಭಾರತಿ ಪೊಲೀಸರು ನಿನ್ನೆ ರಾತ್ರಿ ಹುಚ್ಚ ವೆಂಕಟ್ ಅವರನ್ನು ಹಲಸೂರಿನ ನಿವಾಸದಲ್ಲಿ ಬಂಧಿಸಿದ್ದಾರೆ.
ಬಳಿಕ ಬಸವೇಶ್ವರ ನಗರ ಠಾಣೆಗೆ ಕರೆತಂದ ಎಸಿಪಿ ಎಸ್.ಕೆ. ಉಮೇಶ್ ಕುಮಾರ್ ಹುಚ್ಚ ವೆಂಕಟ್‍ನನ್ನು ಸುಮಾರು ಮೂರು ಗಂಟೆಗೂ ಅಧಿಕ ಸಮಯ ವಿಚಾರಣೆ ನಡೆಸಿದ್ದಾರೆ. ವಿಷಯ ತಿಳಿದ ವೆಂಕಟ್ ಅಭಿಮಾನಿಗಳು ಪೊಲೀಸ್ ಠಾಣೆಯ ಮುಂದೆ ಜಮಾಯಿಸಿದ್ದರು. ತಡ ರಾತ್ರಿಯ ವರೆಗೂ ವಿಚಾರಣೆ ನಡೆಸಲಾಗಿದ್ದು, ಹುಚ್ಚ ವೆಂಕಟ್‍ನನ್ನು ಪೊಲೀಸರು ಇಂದು ಬೆಳಗ್ಗೆ ಸಿಟಿ ಸಿವಿಲ್ ಕೋರ್ಟ್‍ಗೆ ಹಾಜರುಪಡಿಸಲಿದ್ದಾರೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.