Breaking News
recent

ಬಿಗ್ ಬಾಸ್ ಸುದೀಪ್ ತಾಕತ್ತಿನ ಬಗ್ಗೆ ಹುಚ್ಚ ವೆಂಕಟ್ ಸವಾಲು

“ನಾನು ಯಾರ ಕಾಲಿಗೂ ಬೀಳಲ್ಲ, ಬಕೆಟ್ ಆಗಿ ಇರಲ್ಲ. ದುಡ್ಡು ಇಲ್ದೇ ಇರಬಹುದು, ಆದರೆ ನಾನು ಎಂದು ಭಿಕ್ಷೆ ಬೇಡಲ್ಲ ಇದು ನನ್ನ ಸ್ಟೈಲ್”
ಬಿಗ್ ಬಾಸ್ ಸುದೀಪ್ ತಾಕತ್ತಿನ ಬಗ್ಗೆ ಹುಚ್ಚ ವೆಂಕಟ್ ಸವಾಲು

ಇದು ಬಿಗ್ ಬಾಸ್ ಮನೆಯಿಂದ ನಿನ್ನೆ ಔಟಾಗಿ ಹೊರ ಬಂದಿದ್ದ ಹುಚ್ಚ ವೆಂಕಟ್ ಅವರ ಆಕ್ರೋಶದ ನುಡಿಗಳು
ಮಾಧ್ಯಮಗಳ ಜೊತೆ ಮಾತನಾಡಿದ ಹುಚ್ಚವೆಂಕಟ್,”ಬೇರೆಯವರು ತಪ್ಪು ಮಾಡುತ್ತಿದ್ದರೂ ಅವರ ಬಗ್ಗೆ ಮಾತನಾಡದ ಸುದೀಪ್ ನನಗೆ ಡೈಲಾಗ್ ಹೊಡೆದಿದ್ದಾನೆ. ಅವರಿಗೆ ಸಪೋರ್ಟ್ ಮಾಡುವ ನೀನು ನನ್ನ ಮುಂದೆ ಕೆಂಪೇಗೌಡ ಸಿನಿಮಾದ ಡೈಲಾಗ್ ಹೊಡೆದೆ. ನೀನು ರೀಲ್‍ನಲ್ಲಿ ಹೀರೋ ಆಗಿರಬಹುದು ನಾನು ರಿಯಲ್ ಹೀರೋ. ಎಕ್ಕಡ ಎಂದು ನನಗೆ ಬೈದಿಯಲ್ಲ ಹೊರಗಡೆ ಬಾ ಯಾರು ಶಕ್ತಿಶಾಲಿ ನೋಡೋಣ” ಎಂದು ಅವರು ಸವಾಲು ಹಾಕಿದ್ದಾರೆ.
“ನಾನು ಬಿಗ್ ಬಸ್ ಮನೆಯಲ್ಲಿ ಮಗು ಥರ ಇದ್ದೆ. ಆದರೆ ಅಲ್ಲಿರುವವರು ಯಾರು ನನಗೆ ಸಹಕಾರ ನೀಡಲಿಲ್ಲ. ನಾನೇ ಚಿತ್ರಾನ್ನ ಮಾಡಿದ್ದೇನೆ, ಆಡುಗೆ ಮಾಡಿದ್ದೇನೆ. ಮನೆಯಲ್ಲಿದ್ದ ಕೆಲವರು ಪಾತ್ರ ತೊಳೆಯುತ್ತಿರಲಿಲ್ಲ. ಇದೆಲ್ಲ ಕ್ಯಾಮೆರಾದಲ್ಲಿ ಸೆರೆಯಾಗುತ್ತಿದ್ದರೂ ಅವರನ್ನು ಯಾರು ಪ್ರಶ್ನೆ ಮಾಡುತ್ತಿರಲಿಲ್ಲ” ಎಂದು ಹುಚ್ಚ ವೆಂಕಟ್ ಗರಂ ಆಗಿ ಪ್ರತಿಕ್ರಿಯೆ ನೀಡಿದ್ದಾರೆ.
“ನಾನು ಸಿನಿಮಾದಿಂದ ಹೀರೋ ಆಗಿಲ್ಲ. ನಾನು ಹೆಣ್ಣು ಮಕ್ಕಳಿಗೆ ಪ್ರಾಣ ಕೊಡಲು ಸಿದ್ಧ, ಅದಕ್ಕಾಗಿಯೇ ನಾನು ಬಿಗ್ ಬಸ್ ಮನೆಯಲ್ಲಿ ಹೆಣ್ಣಿನ ಕಾಲಿಗೆ ಬಿದ್ದಿದ್ದೇನೆ. ನಾನು ನನ್ನ ಮನಸ್ಸಿನಿಂದ ಬಿಗ್ ಬಾಸ್‍ಗೆ ಎಂಟ್ರಿಯಾಗಿದ್ದೇನೆ ಹೊರತು ಯಾರ ಬಕೆಟ್ ಹಿಡಿದು ಎಂಟ್ರಿಯಾಗಿಲ್ಲ. ಮನೆಯ ಹಿಂದುಗಡೆ ತುಂಬಾ ಮಾತನಾಡುತ್ತಾರೆ. ಆದರೆ ಕ್ಯಾಮೆರಾದ ಮುಂದೆ ಯಾರು ಮಾತನಾಡಲ್ಲ” ಎನ್ನುವ ಮೂಲಕ ಬಿಗ್‍ಬಾಸ್ ಮನೆಯವರ ವಿರುದ್ಧ ಹುಚ್ಚ ವೆಂಕಟ್ ಅಸಮಾಧಾನ ಹೊರಹಾಕಿದರು.
Fresh Kannada

Fresh Kannada

No comments:

Post a Comment

Google+ Followers

Powered by Blogger.