Breaking News
recent

'ಇದೊಳ್ಳೆ ರಾಮಾಯಣ' ಆಯ್ತಲ್ಲ ಅಂದ್ರಂತೆ..! ಪ್ರಕಾಶ್ ರೈ

ಬಹು‍ಭಾಷಾ ನಟ ಪ್ರಕಾಶ್ ರಾಜ್ ಅವರು 'ಇದೊಳ್ಳೆ ರಾಮಾಯಣ' ಅಂತ ಮತ್ತೆ ಕನ್ನಡ ಚಿತ್ರರಂಗಕ್ಕೆ ವಾಪಸಾಗುತ್ತಿದ್ದಾರೆ. ಈ ಮೊದಲು ಮಲಯಾಳಂ 'ಶಟರ್' ರಿಮೇಕ್ ಮೂಲಕ ಗಾಂಧಿನಗರಕ್ಕೆ ಬರ್ತಾ ಇದ್ದಾರೆ ಅಂತ ನಾವು ನಿಮಗೆ ಇದೇ ಫ್ರೆಶ್ ಕನ್ನಡ ಹೇಳಿದ್ವಿ ಅಲ್ವಾ.
'ಇದೊಳ್ಳೆ ರಾಮಾಯಣ' ಆಯ್ತಲ್ಲ ಅಂದ್ರಂತೆ..! ಪ್ರಕಾಶ್ ರೈ

ಇದೀಗ ಮತ್ತೆ ತಮ್ಮ ಸ್ವಂತ ಪ್ರೊಡಕ್ಷನ್ಸ್ ನಲ್ಲಿ 'ಇದೊಳ್ಳೆ ರಾಮಾಯಣ' ಅನ್ನೋ ಹೊಸ ಚಿತ್ರದ ಮೂಲಕ ಹಿಂತಿರುಗಿದ್ದಾರೆ. ಅಂದಹಾಗೆ ಈ ಚಿತ್ರ ಕನ್ನಡ ಹಾಗು ತೆಲುಗು ಭಾಷೆಗಳಲ್ಲಿ ಬರಲಿದೆ. ಕನ್ನಡದಲ್ಲಿ 'ಇದೊಳ್ಳೆ ರಾಮಾಯಣ' ಹಾಗೂ ತೆಲುಗು ವರ್ಷನ್ ನಲ್ಲಿ 'ಮನವೂರಿ ರಾಮಾಯಣ' ಅನ್ನೋ ವಿಭಿನ್ನ ಟೈಟಲ್ ನಲ್ಲಿ ಮೂಡಿಬರಲಿದೆ.

ಎಲ್ಲಾ ಹೊಸಬರನ್ನೇ ಹಾಕಿಕೊಂಡು ಈ ವಿಭಿನ್ನ ಪ್ರಯತ್ನಕ್ಕೆ ಬಹುಮುಖ ಪ್ರತಿಭೆ ಪ್ರಕಾಶ್ ರಾಜ್ ಅವರು ಕೈ ಹಾಕಿದ್ದಾರೆ. ಇನ್ನು ಈ ಚಿತ್ರಕ್ಕೆ ಸಂಗೀತ ಮಾಂತ್ರಿಕ ಇಳೆಯರಾಜ ಅವರು ಮ್ಯೂಸಿಕ್ ಕಂಪೋಸ್ ಮಾಡಲಿದ್ದಾರೆ.

ಜೊತೆಗೆ ಈ ವಿಭಿನ್ನ ಚಿತ್ರ ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ. ಇನ್ನು ಹೆಚ್ಚಾಗಿ ಕನ್ನಡಿಗರದ್ದೇ ಗುಂಪು ಈ ಚಿತ್ರತಂಡದಲ್ಲಿರೋದು ವಿಶೇಷ ಆಕರ್ಷಣೆ.

ಡೈಲಾಗ್ ಗಳ ಸಂಪೂರ್ಣ ಜವಾಬ್ದಾರಿಯನ್ನು ಖ್ಯಾತ ಬರಹಗಾರ ಜೋಗಿ ಅವರು ವಹಿಸಿಕೊಂಡಿದ್ದು, ಒಟ್ನಲ್ಲಿ ಈ ಇಡೀ ತಂಡವನ್ನು ನೋಡುತ್ತಿದ್ದರೆ, 'ಒಗ್ಗರಣೆ'ಯಂತೆ ಇದು ಕೂಡ ಒಂದು ಸದಭಿರುಚಿಯ ಚಿತ್ರ ಅನ್ನೋದು ಪೋಸ್ಟರ್ ನೋಡುತ್ತಿದ್ದಂತೆ ಮನದಟ್ಟಾಗುತ್ತದೆ.

ಸದ್ಯಕ್ಕೆ ನಟ-ನಿರ್ಮಾಪಕ-ನಿರ್ದೇಶಕ ಪ್ರಕಾಶ್ ರಾಜ್ ಅವರು ತಾವು ದತ್ತು ತೆಗೆದುಕೊಂಡ ಹಳ್ಳಿಯ ಕೆಲಸಗಳಲ್ಲಿ ಬ್ಯುಸಿಯಾಗಿದ್ದು, ಇನ್ನೇನು ಸದ್ಯದಲ್ಲೇ ಈ ಚಿತ್ರದ ಶೂಟಿಂಗ್ ಕೂಡ ಆರಂಭಿಸುವುದಾಗಿ ತಿಳಿಸಿದ್ದಾರೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.