Breaking News
recent

'ಶಿವಲಿಂಗ'ಕ್ಕೆ ಪೂಜೆ ಸಲ್ಲಿಸಿದ ನಂತರ 'ವೀರಪ್ಪನ್' ಬೇಟೆ ಶುರು.!

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 'ಶಿವಲಿಂಗ' ಚಿತ್ರದ ಟ್ರೈಲರ್ ಸೋರಿಕೆಯಾಗಿರುವ ಹಿನ್ನಲೆಯಲ್ಲಿ ನಿರ್ಮಾಪಕ ಕೆ.ಎ ಸುರೇಶ್ ಅವರು ಅಸಮಧಾನ ವ್ಯಕ್ತಪಡಿಸಿದ್ದಾರೆ.
'ಶಿವಲಿಂಗ'ಕ್ಕೆ ಪೂಜೆ ಸಲ್ಲಿಸಿದ ನಂತರ 'ವೀರಪ್ಪನ್' ಬೇಟೆ ಶುರು.!

ಪಿ ವಾಸು ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಶಿವಲಿಂಗ' ಚಿತ್ರದ ಟ್ರೈಲರ್ ಸೋರಿಕೆಯಾಗಿದ್ದು, ಇದರ ಬಗ್ಗೆ ಪ್ರತಿಕ್ರಿಯಿಸಿದ ನಿರ್ಮಾಪಕ ಕೆ.ಎ.ಸುರೇಶ್ ಅವರು 'ಇದು ಐದು ದಿನದ ಹಿಂದೆಯೇ ಆಗಿದೆ. ಆದರೆ ನಮ್ಮ ಗಮನಕ್ಕೆ ಬಂದಿದ್ದು ಎರಡು ದಿನಗಳ ಹಿಂದೆ ಅಷ್ಟೆ. ಈ ಅನೈತಿಕ ಕೆಲಸ ಯಾರು ಮಾಡಿರಬಹುದು ಎಂದು ತಿಳಿಯಲು ವಿಚಾರಣೆ ನಡೆಸಲಾಗುತ್ತದೆ' ಎಂದು ಗುಡುಗುತ್ತಾರೆ ನಿರ್ಮಾಪಕರು.

'ಮುಂದಿನ ವಾರ ಅಧಿಕೃತವಾಗಿ ಟ್ರೈಲರ್ ಬಿಡುಗಡೆಯಾಗಲಿದ್ದು, ಶುಕ್ರವಾರ (ನವೆಂಬರ್ 27) ರಂದು ಚಿತ್ರದ ಆಡಿಯೋ ಬಿಡುಗಡೆಯಾಗಲಿದೆ. ಇನ್ನು ಸಿನಿಮಾದ ಮೊದಲ ಪ್ರತಿ ಸಿದ್ಧವಾಗಿದ್ದು, ಅತೀ ಶೀಘ್ರದಲ್ಲೇ ಸೆನ್ಸಾರ್ ಅಂಗಳಕ್ಕೆ ಹೋಗಲಿದ್ದೇವೆ' ಎಂದು ನಿರ್ಮಾಪಕ ಸುರೇಶ್ ನುಡಿಯುತ್ತಾರೆ.

ಮೊದಲಿನ ಯೋಜನೆಯಂತೆ ರಾಮ್ ಗೋಪಾಲ್ ವರ್ಮಾ ನಿರ್ದೇಶನದ 'ಕಿಲ್ಲಿಂಗ್ ವಿರಪ್ಪನ್' ನವೆಂಬರ್ ನಲ್ಲಿ ಮತ್ತು 'ಶಿವಲಿಂಗ' ಡಿಸೆಂಬರ್ ತಿಂಗಳಿನಲ್ಲಿ ಬಿಡುಗಡೆ ಕಾಣಬೇಕಿತ್ತು.

ಆದರೆ ಈಗ 'ಕಿಲ್ಲಿಂಗ್ ವೀರಪ್ಪನ್' ತಡವಾಗುತ್ತಿದ್ದು, ಮೊದಲು 'ಶಿವಲಿಂಗ' ಬಿಡುಗಡೆಯಾಗಲಿದೆ. ನಾವು 'ಕಿಲ್ಲಿಂಗ್ ವೀರಪ್ಪನ್' ಚಿತ್ರದ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ಆದರೆ ನಾವು ಮೊದಲೇ ನಿರ್ಧಾರ ತೆಗೆದುಕೊಂಡಂತೆ, ನಾವಂತೂ ಡಿಸೆಂಬರ್ ತಿಂಗಳಿನಲ್ಲಿ 'ಶಿವಲಿಂಗ' ಚಿತ್ರ ಬಿಡುಗಡೆ ಮಾಡಲು ನಿರ್ಧರಿಸಿದ್ದೇವೆ ಎನ್ನುತ್ತಾರೆ ನಿರ್ಮಾಪಕರು.

ಒಟ್ನಲ್ಲಿ 'ವೀರಪ್ಪನ್' ಇಲ್ಲದಿದ್ದರೇನಂತೆ, 'ಶಿವಲಿಂಗ' ಇದ್ಯಲ್ಲ, ಅಂತ ಶಿವಣ್ಣ ಅಭಿಮಾನಿಗಳು ಸಮಾಧಾನ ಪಟ್ಟುಕೊಂಡಿದ್ದಾರೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.