Breaking News
recent

ಕಿಚ್ಚನ ನೋಡಿ 'ಓ ಮೈ ಗಾಡ್' ಅಂದ ಉಪ್ಪಿ.!

ರಿಯಲ್ ಸ್ಟಾರ್ ಉಪೇಂದ್ರ ಅವರ 'ಕಲ್ಪನಾ 2' ಸೆಟ್ಟೇರಿದ ಬೆನ್ನಲ್ಲೇ ಇದೀಗ ಮತ್ತೊಂದು ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಹಿಂದಿ ಚಿತ್ರ 'ಓ ಮೈ ಗಾಡ್' ನ ಕನ್ನಡ ರಿಮೇಕ್ ನಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಕಾಣಿಸಿಕೊಳ್ಳಲಿದ್ದಾರೆ ಎಂದು ಸುದ್ದಿಯಾಗಿದೆ.
ಕಿಚ್ಚನ ನೋಡಿ 'ಓ ಮೈ ಗಾಡ್' ಅಂದ ಉಪ್ಪಿ.!

ಈ ಮೊದಲು 'ಓ ಮೈ ಗಾಡ್' ಕನ್ನಡ ವರ್ಷನ್ ನಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕಾಣಿಸಿಕೊಳ್ಳುತ್ತಾರೆ ಎಂದು ಇಡೀ ಗಾಂಧಿನಗರದಲ್ಲಿ ಸುದ್ದಿ ಹಬ್ಬಿತ್ತು.

ಆದರೆ ಲೇಟೇಸ್ಟ್ ಮಾಹಿತಿ ಏನಪ್ಪಾ ಅಂದ್ರೆ, ದರ್ಶನ್ ಹಾಗು ರವಿಚಂದ್ರನ್ ಅವರ ಬದಲು ಉಪೇಂದ್ರ ಮತ್ತು ಕಿಚ್ಚ ಸುದೀಪ್ ಅವರು ಕಾಣಿಸಿಕೊಳ್ಳಲಿದ್ದಾರೆ ಎಂದು ಮಾಹಿತಿ ಲಭಿಸಿದೆ.

ಹಿಂದಿ ಚಿತ್ರ 'ಓ ಮೈ ಗಾಡ್' ನ ಸುಮಾರು ಶೇ 50ರಷ್ಟು ಭಾಗವನ್ನು ಕನ್ನಡಕ್ಕೆ ಭಟ್ಟಿ ಇಳಿಸಲಾಗಿದೆ. ಹಿಂದಿ ಚಿತ್ರದಲ್ಲಿ ಪರೇಶ್ ರಾವಲ್ ಮಾಡಿದ ಪಾತ್ರವನ್ನು ರಿಯಲ್ ಸ್ಟಾರ್ ಉಪೇಂದ್ರ ಅವರು ಮಾಡಿದರೆ ನಟ ಅಕ್ಷಯ್ ಕುಮಾರ್ ಮಾಡಿದ ಪಾತ್ರವನ್ನು ಕಿಚ್ಚ ಸುದೀಪ್ ಅವರು ಮಾಡಲಿದ್ದಾರೆ.

ದೇವರ ಮೇಲೆ ಒಂಚೂರು ಭಕ್ತಿಯೇ ಇಲ್ಲದ ನಾಸ್ತಿಕನ ಪಾತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರು ಮಿಂಚಿದ್ದು, ಕಿಚ್ಚ ಸುದೀಪ್ ಅವರು ದೇವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

'ವಿಕ್ಟರಿ' ಹಾಗೂ 'ಅಧ್ಯಕ್ಷ' ಚಿತ್ರಕ್ಕೆ ಆಕ್ಷನ್-ಕಟ್ ಹೇಳಿದ್ದ ನಿರ್ದೇಶಕ ನಂದ ಕಿಶೋರ್ ಅವರು ಈ ಸಿನಿಮಾಕ್ಕೆ ಆಕ್ಷನ್-ಕಟ್ ಹೇಳಲಿದ್ದಾರೆ. ಅಂದಹಾಗೆ ಉಪೇಂದ್ರ ಅವರಿಗೆ ನಂದ ಕಿಶೋರ್ ಅವರು ಆಕ್ಷನ್-ಕಟ್ ಹೇಳುತ್ತಿರುವುದು ಇದೇ ಮೊದಲು.

ಇನ್ನು ಈ ಸಿನಿಮಾ ತೆಲುಗು ವರ್ಷನ್ 'ಗೋಪಾಲ ಗೋಪಾಲ' ಎಂಬ ಹೆಸರಿನಲ್ಲಿ ತೆರೆ ಕಂಡಿತ್ತು. ಚಿತ್ರದಲ್ಲಿ ದೇವರಾಗಿ ಪವನ್ ಕಲ್ಯಾಣ್ ಮತ್ತು ನಾಸ್ತಿಕನಾಗಿ ವಿಕ್ಟರಿ ವೆಂಕಟೇಶ್ ಅವರು ಲೀಡ್ ರೋಲ್ ನಲ್ಲಿ ಮಿಂಚಿದ್ದರು.

ಇನ್ನೊಂದು ವಿಶೇಷ ಏನಪ್ಪಾ ಅಂದ್ರೆ ಈ ಚಿತ್ರ, ಕಿಚ್ಚ ಸುದೀಪ್ ಕ್ರಿಯೇಷನ್ಸ್, ಜಯಶ್ರೀ ದೇವಿ ಪ್ರೊಡಕ್ಷನ್ಸ್ ಮತ್ತು ಎನ್ ಕುಮಾರ್ ಪ್ರೊಡಕ್ಸನ್ಸ್ ಎಂಬ ಮೂರು ಪ್ರೊಡಕ್ಷನ್ ಹೌಸ್ ನಲ್ಲಿ ಮೂಡಿಬರಲಿದೆ.

ಒಟ್ಟಾರೆ ಒಬ್ಬ ಭಕ್ತ ಮತ್ತು ದೇವರ ನಡುವೆ ನಡೆಯುವ ಚಿತ್ರಕಥೆಯಾಗಿದ್ದು, ನಾಸ್ತಿಕನಾಗಿರುವವನು, ಆಸ್ತಿಕನಾಗಿ ಕೊನೆಗೆ ಹೇಗೆ ದೇವರ ಭಕ್ತ ಆಗುತ್ತಾನೆ ಎಂಬುದನ್ನು ಇಡೀ ಚಿತ್ರದಲ್ಲಿ ತೋರಿಸಲಾಗುತ್ತದೆ.

ಅದೇನೇ ಇರಲಿ ಇದೀಗ ಮಲ್ಟಿ ಸ್ಟಾರರ್ ಇದೇ ಮೊದಲ ಬಾರಿಗೆ ಒಂದಾಗುತ್ತಿರುವುದು ಎಲ್ಲ ಅಭಿಮಾನಿಗಳಿಗೆ ಸಂತಸ ತರುವ ವಿಷಯವಾಗಿದೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.