Breaking News
recent

'ಗುರೂಜಿ' ಯಾದ ಸಾಹಿತಿ ವಿ.ನಾಗೇಂದ್ರ ಪ್ರಸಾದ್

ಇದೀಗ ಸದ್ಯಕ್ಕೆ ಎಲ್ಲೆಡೆ ಅಸಹಿಷ್ಣುತೆಯ ಬಗ್ಗೆ ಬುದ್ದಿ ಜೀವಿಗಳು ತಮಗೆ ತೋಚಿದಂತೆ ಮಾತನಾಡಿ, ಬಗೆ ಬಗೆಯ ವಿವಾದ ಸೃಷ್ಟಿ ಮಾಡುತ್ತಿರುವ ಈ ಸಂದರ್ಭದಲ್ಲಿ, ಸ್ಯಾಂಡಲ್ ವುಡ್ ನ ಖ್ಯಾತ ಸಾಹಿತಿ ಕಮ್ ನಿರ್ದೇಶಕ ವಿ.ನಾಗೇಂದ್ರ ಪ್ರಸಾದ್ ಅವರು ಅಸಹಿಷ್ಣುತೆ ಬಗ್ಗೆ ತಮ್ಮ ಸಣ್ಣದಾದ ಹೊಸ ಪ್ರಯೋಗದ ಮೂಲಕ ಸೂಕ್ತ ಉತ್ತರ ಕೊಡೋ ಪ್ರಯತ್ನದಲ್ಲಿದ್ದಾರೆ.
'ಗುರೂಜಿ' ಯಾದ ಸಾಹಿತಿ ವಿ.ನಾಗೇಂದ್ರ ಪ್ರಸಾದ್

ಮನೋರಂಜನೆಯ ಜೊತೆ ಜೊತೆಗೆ ಸಾಮಾಜಿಕ ಪರಿವರ್ತನೆಯುಳ್ಳ ಕೆಲವೊಂದು ಸಿನಿಮಾಗಳನ್ನು ಮಾಡಬೇಕೆಂದು ನನಗೆ ಕೆಲವು ದಿನಗಳಿಂದ ಆಸೆ ಇತ್ತು. ಬಹುಶಃ ಇದೀಗ ಸರಿಯಾದ ಕಾಲ ಕೂಡಿ ಬಂದಿದೆ. ಎನ್ನುತ್ತಾರೆ ನಾಗೇಂದ್ರ ಪ್ರಸಾದ್ ಅವರು.

ನನ್ನ ವಿಶಿಷ್ಟ ಪ್ರಯತ್ನ 'ಗುರೂಜಿ' ಚಿತ್ರದ ಮೊದಲ ಕೋಲ್ಮಿಂಚು ಇಲ್ಲಿದೆ ನೋಡಿ. ಹರಸಿ, ಇದು ಸಾಂದರ್ಭಿಕ ಅಷ್ಟೆ 'ಗುರೂಜಿ' ಚಿತ್ರ ವಿಶೇಷ ವಿಷಯಗಳ ಸಂಗಮ ಎಂದು ತಮ್ಮ ಫೇಸ್ ಬುಕ್ಕ್ ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ.

"ಕೇವಲ ಒಂದು ಮುಕ್ಕಾಲು ದಿನಕ್ಕೆ ಐದೂವರೆ ಸಾವಿರ ಮಂದಿ ಹಂಚಿಕೊಂಡಿದ್ದು, ಒಂದು ಲಕ್ಷಕ್ಕೂ ಮಿಕ್ಕಿ ಈ ವಿಡಿಯೋವನ್ನು ನೋಡಿದ್ದಾರೆ. ಅಲ್ಲದೇ ವಾಟ್ಸಾಪ್ ನಲ್ಲಿ ಲೆಕ್ಕಕ್ಕೂ ಸಿಗದಷ್ಟು ಹಂಚಿಕೆಯಾಗಿದ್ದು, ತಮಾಷೆ ಎಂದರೆ, ನನಗೆ ಒಬ್ಬರು ವಾಟ್ಸಾಪ್ ನಲ್ಲಿ ಕಳುಹಿಸಿದ್ದಾರೆ".

"ಮುಸಲ್ಮಾನ ಸಮಾಜದ ಹಿರಿಯರು, ಗೆಳೆಯರು ಮೆಚ್ಚಿ ಬೆನ್ನು ತಟ್ಟುತ್ತಿದ್ದಾರೆ, ನಿಮ್ಮ ಪ್ರೀತಿಗೆ ನಾನು ಋಣಿ, ಧನ್ಯವಾದಗಳು. ಧರ್ಮ ಜಾತಿ, ಮತಗಳನ್ನು ಮೀರಿದ ಮಾನವ ಪರವಾದ ಭಾಂದವ್ಯ ಸಮಾಜದ ಕನಸು 'ಗುರೂಜಿ' ಚಿತ್ರದ ಆಶಯ ಎಂದು ನಿರ್ದೇಶಕ ನಾಗೇಂದ್ರ ಪ್ರಸಾದ್ ಅವರು ತಮ್ಮ ಫೇಸ್ ಬುಕ್ಕಿನಲ್ಲಿ ಹಂಚಿಕೊಂಡಿದ್ದಾರೆ.

N2 ಮಿಡಿಯಾ ಅರ್ಪಿಸುವ ನಾಗೇಂದ್ರ ಪ್ರಸಾದ್ ಅವರ ಕನಸಿನ ಕೂಸು 'ಗುರೂಜಿ'ಯ ಫಸ್ಟ್ ಲುಕ್ ಟೀಸರ್ ಇಲ್ಲಿದೆ ನೋಡಿ. ನಿಮಗೂ ಇಷ್ಟವಾಗಬಹುದು.
Fresh Kannada

Fresh Kannada

No comments:

Post a Comment

Google+ Followers

Powered by Blogger.