Breaking News
recent

ಫಸ್ಟ್‌ ರ‍್ಯಾಂಕ್‌ ರಾಜು ಏಕೆ ನೋಡಬೇಕು?, ಇಲ್ಲಿದೆ ಕಾರಣಗಳು

ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದು, ನಿರ್ದೇಶಕ ಸ್ಥಾನಕ್ಕೆ ಭಡ್ತಿ ಹೊಂದಿರುವ ಚೊಚ್ಚಲ ನಿರ್ದೇಶಕ ನರೇಶ್ ಕುಮಾರ್ ಆಕ್ಷನ್-ಕಟ್ ಹೇಳಿರುವ 'ಫಸ್ಟ್‌ ರ‍್ಯಾಂಕ್‌ ರಾಜು' ಸಿನಿಮಾ ನಾಳೆ (ನವೆಂಬರ್ 27) ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ.
ಫಸ್ಟ್‌ ರ‍್ಯಾಂಕ್‌ ರಾಜು
ಫಸ್ಟ್‌ ರ‍್ಯಾಂಕ್‌ ರಾಜು

ಈಗಾಗಲೇ ಟ್ರೈಲರ್ ಮೂಲಕ ಭಾರಿ ನಿರೀಕ್ಷೆ ಹುಟ್ಟಿಸಿರುವ 'ಫಸ್ಟ್‌ ರ‍್ಯಾಂಕ್‌ ರಾಜು' ಪಕ್ಕಾ ಕಾಮಿಡಿ ಸಿನಿಮಾವಾಗಿದ್ದು, ಚಿತ್ರದಲ್ಲಿ ನಾಯಕನಾಗಿ ಗುರುನಂದನ್, ನಾಯಕಿ ಅಪೂರ್ವ ಮತ್ತು ನಟಿ ತನುಷ್ಕಾ ಅವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಸಿನಿಮಾದಲ್ಲಿರುವ ಕಾನ್ಸೆಪ್ಟ್ ಹೊಸದಾಗಿದ್ದು, ಕೊಂಚ ವಿಭಿನ್ನವಾಗಿದೆ. 'ವಿದ್ಯೆ 100% ಬುದ್ದಿ 0% ಎಂಬ ಅಡಿಬರಹದಲ್ಲಿ ಮೂಡಿಬರುತ್ತಿರುವ 'ಫಸ್ಟ್‌ ರ‍್ಯಾಂಕ್‌ ರಾಜು' ಸಿನಿಮಾ ಟೀಸರ್, ಟ್ರೈಲರ್ ಹಾಗೂ ಹಾಡುಗಳ ಮೂಲಕ ಭಾರಿ ರೆಸ್ಪಾನ್ಸ್ ಗಿಟ್ಟಿಸಿಕೊಂಡಿದೆ.

ನಟ-ನಿರ್ಮಾಪಕ ರಾಘವೇಂದ್ರ ರಾಜ್ ಕುಮಾರ್ ಅವರು ಚಿತ್ರದ ಟ್ರೈಲರ್ ಹಾಗೂ ಆಡಿಯೋ ರಿಲೀಸ್ ಮಾಡಿದ್ದು, ಅವರೂ ಕೂಡ ಚಿತ್ರದ ಬಗ್ಗೆ ಭಾರಿ ಕುತೂಹಲ ವ್ಯಕ್ತಪಡಿಸಿದ್ದಾರೆ. ಜೊತೆಗೆ ವಿಭಿನ್ನ ಕಥಾಹಂದರವನ್ನು ಹೊಂದಿರುವ ಚಿತ್ರಕ್ಕೆ ಶುಭ ಹಾರೈಸಿದ್ದಾರೆ.[ನ.27 ರಂದು ಹುಟ್ಟೋ ಮಗುವಿಗೆ 2 ಲಕ್ಷ ಕೊಡ್ತಾರಂತೆ!]

ಇತ್ತೀಚೆಗೆ ಸ್ಯಾಂಡಲ್ ವುಡ್ ಕ್ಷೇತ್ರಕ್ಕೆ ಹೊಡಿ-ಬಡಿ, ಮಚ್ಚು-ಲಾಂಗುಗಳ ಆರ್ಭಟದ ನಡುವೆಯು ಕೆಲವಾರು ಕಲರ್ ಫುಲ್ ಸಿನಿಮಾಗಳು ಬಂದುಹೋಗಿದ್ದು, ಇದೀಗ ಅದೇ ಸಾಲಿಗೆ ಟೆಕ್ಕಿ ನರೇಶ್ ಕುಮಾರ್ ಅವರ 'ಫಸ್ಟ್‌ ರ‍್ಯಾಂಕ್‌ ರಾಜು' ಸೇರ್ಪಡೆಗೊಳ್ಳಲಿದೆ. ಇದೀಗ ಈ ಸಿನಿಮಾ ಯಾಕೆ ನೋಡಬೇಕು ಎಂಬುದಕ್ಕೆ 5 ಕಾರಣಗಳನ್ನು ನಾವು ನಿಮಗೆ ಹೇಳುತ್ತೇವೆ ಮುಂದೆ ಓದಿ..


1. ಭರವಸೆಯ ನಟ ಗುರುನಂದನ್
'ಫಸ್ಟ್‌ ರ‍್ಯಾಂಕ್‌ ರಾಜು' ಚಿತ್ರದ ಮೂಲಕ ಇದೇ ಮೊದಲ ಬಾರಿಗೆ ನಟ ಗುರುನಂದನ್ ಅವರು ಬೆಳ್ಳಿತೆರೆ ಮೇಲೆ ಕಾಲಿಟ್ಟಿದ್ದು, ಮೊದಲ ಚಿತ್ರದಲ್ಲಿಯೇ ತಮ್ಮ ಉತ್ತಮ ನಟನೆಯ ಮೂಲಕ ಪ್ರೇಕ್ಷಕರ ಮನಗೆಲ್ಲುವುದು ಪಕ್ಕಾ ಅನ್ನೋದು ಟ್ರೈಲರ್, ಟೀಸರ್ ಹಾಗೂ ಪೋಸ್ಟರ್ ನೋಡಿದವರು ಸುಲಭವಾಗಿ ಹೇಳಬಹುದು.

2. ತೆರೆಯ ಮೇಲೆ ಲೀಡ್ ಜೋಡಿಗಳ ಕೆಮಿಸ್ಟ್ರಿ
ನಟ ಗುರುನಂದನ್, ಅಪೂರ್ವ ಮತ್ತು ತನಿಷ್ಕಾ ಅವರು ತೆರೆಯ ಮೇಲೆ ಉತ್ತಮ ಜೋಡಿಯಾಗಿ ಮಿಂಚಿದ್ದಾರೆ. ಇನ್ನು ವಿಧೇಯ ವಿದ್ಯಾರ್ಥಿಯಾಗಿ ಗುರುನಂದನ್ ಕಾಣಿಸಿಕೊಂಡರೆ, ಅವರ ಏಕಾಗ್ರತೆಯನ್ನು ಕೆಡಿಸಲು ಅಪೂರ್ವ ಮತ್ತು ತನಿಷ್ಕಾ ಅವರು ತಮ್ಮ ಗ್ಲಾಮರ್ ಅನ್ನು ತುಂಬಿದ್ದಾರೆ.

3. ಎಲ್ಲರಿಂದ ಮೆಚ್ಚುಗೆ ಪಡೆದ ಚಿತ್ರ
ನರೇಶ್ ಅವರ 'ಫಸ್ಟ್‌ ರ‍್ಯಾಂಕ್‌ ರಾಜು' ಸಿನಿಮಾ ಈಗಾಗಲೇ ಗಾಂಧಿನಗರದಲ್ಲಿ ಟಾಕ್ ಆಫ್ ದ ಟಾಪಿಕ್ ಆಗಿದೆ. ಪ್ರೇಕ್ಷಕರಿಗೆ ಸಖತ್ ಕಾಮಿಡಿ ಪಂಚ್ ಜೊತೆಗೆ ರಾಜು ಎಂಬ ಹುಡುಗನ ಸುತ್ತ ಸುತ್ತುವ ಕಥೆಯಲ್ಲಿ ನಾಯಕ ರಾಜು ಅಕಾಡೆಮಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದರೆ, ಸಾಮಾನ್ಯ ಜ್ಞಾನದಲ್ಲಿ ಹಿಂದುಳಿದಿರುತ್ತಾನೆ. ಆದರೆ ಈ ಸಿನಿಮಾ ಬಾಕ್ಸಾಫೀಸ್ ನಲ್ಲಿ 100% ಹಾಜರಾತಿ ಪಡೆದುಕೊಳ್ಳುತ್ತಾ, ಕಾದು ನೋಡೋಣ.

4. ವಿದ್ಯಾರ್ಥಿಗಳಿಗೆ ಮತ್ತು ಹೆತ್ತವರಿಗೆ ಈ ಸಿನಿಮಾ ಅರ್ಪಣೆ
ನಟ ಕಿಶೋರ್ ಅವರ 'ವಾಸ್ಕೋಡಿಗಾಮ' ಚಿತ್ರದ ನಂತರ ವಿದ್ಯಾರ್ಥಿಗಳಿಗೆ ಸಂಬಂಧಪಟ್ಟಂತೆ 'ಫಸ್ಟ್‌ ರ‍್ಯಾಂಕ್‌ ರಾಜು' ಸಿನಿಮಾ ಬರುತ್ತಿದ್ದು, ಮುಖ್ಯವಾಗಿ ವಿದ್ಯಾರ್ಥಿಗಳಿಗೆ, ಹೆತ್ತವರಿಗೆ ಹಾಗೂ ಈಗಿನ ಕಾಲದ ಯುವಜನರನ್ನು ಟಾರ್ಗೆಟ್ ಮಾಡಿ ಈ ಸಿನಿಮಾ ಮಾಡಲಾಗಿದೆ.

5. ವಿಭಿನ್ನ ಪ್ರಕಾರದ ಸಿನಿಮಾ
ಬರೀ ರೌಡಿಸಂ ಸಿನಿಮಾಗಳನ್ನು ಪಕ್ಕಕ್ಕಿಟ್ಟು, ಕಲಾತ್ಮಕ ಸಿನಿಮಾಗಳು ಇತ್ತೀಚೆಗೆ ಸ್ಯಾಂಡಲ್ ವುಡ್ ನಲ್ಲಿ ಸೌಂಡ್ ಮಾಡುತ್ತಿದ್ದು, 'ರಂಗಿತರಂಗ', 'ಕೆಂಡಸಂಪಿಗೆ' 'ಆಟಗಾರ' ಮತ್ತು 'ಕೃಷ್ಣಲೀಲಾ' ಮುಂತಾದ ಸಿನಿಮಾಗಳ ಸಾಲಿಗೆ ಇದೀಗ ನರೇಶ್ ಅವರ 'ಫಸ್ಟ್‌ ರ‍್ಯಾಂಕ್‌ ರಾಜು' ಹೊಸ ಸೇರ್ಪಡೆ. ಇದು ಕೂಡ ಆ ಚಿತ್ರಗಳಂತೆ ಹಿಟ್ ಲಿಸ್ಟ್ ಗೆ ಸೇರುತ್ತಾ ನೋಡೋಣ.

6. ಹಾಡುಗಳು ಹಿಟ್
ಈಗಾಗಲೇ ಚಿತ್ರದ ಹಾಡುಗಳು ಭಾರಿ ಹಿಟ್ ಆಗಿದ್ದು, ಅದರಲ್ಲೂ ಸೋನು ನಿಗಮ್ ಮತ್ತು ಶ್ರೇಯಾ ಘೋಷಾಲ್ ಹಾಡಿರುವ 'ಶುರು ಶುರು' ಮತ್ತು 'ಏಲಂಗಿ' ಹಾಡುಗಳು ಎಲ್ಲರ ಫೇವರೆಟ್ ಆಗಿದೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.