Breaking News
recent

ದೀಪಾವಳಿಗೆ ಬಟ್ಟೆ ಕೊಡಿಸದ್ದಕ್ಕೆ ಸೋದರಿಯರ ಆತ್ಮಹತ್ಯೆ!

ಕಾರವಾರ: ಬೆಳಕಿನ ಹಬ್ಬ ದೀಪಾವಳಿ ಸಂಭ್ರಮಕ್ಕೆ ಬಟ್ಟೆ ಖರೀದಿಗೆ ಹೆಚ್ಚು ಹಣ ಕೊಡದ ಹಿನ್ನೆಲೆಯಲ್ಲಿ ಮನನೊಂದು ಸೋದರಿಯರಿಬ್ಬರು ನೇಣಿಗೆ ಶರಣಾಗಿದ್ದಾರೆ.
ದೀಪಾವಳಿಗೆ ಬಟ್ಟೆ ಕೊಡಿಸದ್ದಕ್ಕೆ ಸೋದರಿಯರ ಆತ್ಮಹತ್ಯೆ!

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಸಾಲ್ಕೋಡು ಗ್ರಾಮದಲ್ಲಿ ಘಟನೆ ನಡೆದಿದ್ದು ಸುನಿತಾ ಶಂಕರ್ ಗೌಡ (17) ಹಾಗೂ ಮಂಗಳಾ ಶಂಕರ ಗೌಡ (15) ಮೃತಪಟ್ಟ ಸಹೋದರಿಯರು. ಇವರಿಬ್ಬರೂ ಕವಲಕ್ಕಿ ಗ್ರಾಮದ ಸಿದ್ಧಿವಿನಾಯಕ ಪ್ರೌಢ ಶಾಲೆಯಲ್ಲಿ 10 ಹಾಗೂ 8 ನೇ ತರಗತಿಯಲ್ಲಿ ಓದುತ್ತಿದ್ದರು.
ತಾಯಿ 3 ಸಾವಿರ ಕೊಟ್ಟಿದ್ರು!: ದೀಪಾವಳಿ ಹಬ್ಬಕ್ಕೆ ಬಟ್ಟೆ ಖರೀದಿಗಾಗಿ ಇಬ್ಬರೂ ತಾಯಿ ಬಳಿ ಹಣ ಕೇಳಿದ್ದರು. ಬಟ್ಟೆ ತೆಗೆದುಕೊಳ್ಳಲು ತಾಯಿ 3 ಸಾವಿರ ರೂಪಾಯಿ ಹಣ ನೀಡಿದ್ದರು. ಆದ್ರೆ ಸುನಿತಾ ಹಾಗೂ ಮಂಗಳಾ ಇಷ್ಟು ಹಣ ನಮಗೆ ಸಾಕಾಗುವುದಿಲ್ಲ. ನಮಗೆ ಇನ್ನೂ ಹೆಚ್ಚಿನ ಹಣ ಬೇಕು ಎಂದು ಒತ್ತಾಯಿಸಿದ್ದರು. ಆದರೆ ತಾಯಿ ಇವರ ಬೇಡಿಕೆಗೆ ಸೊಪ್ಪು ಹಾಕಲೇ ಇಲ್ಲ. ಇದರಿಂದ ಮನನೊಂದು ಸೋದರಿಯರಿಬ್ಬರೂ ಮನೆಯ ಬಳಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.