Breaking News
recent

ಕಿಚ್ಚ, ತಮ್ಮ ತಂದೆಯನ್ನು ಬಿಟ್ಟರೆ, ಇನ್ನೊಬ್ಬರಿಗೆ ಹೆದರ್ತಾರಂತೆ!, ಯಾರವರು?

ಯಾವುದೇ ಒಬ್ಬ ಮನುಷ್ಯನ ಎತ್ತರ ನೋಡಿ ಕೋಪವನ್ನು ಅಳೆಯಲು ಸಾಧ್ಯವೇ ಎಂದು ಕಿಚ್ಚ ಸುದೀಪ್ ಅವರು ಪ್ರಶ್ನೆ ಮಾಡ್ತಾರೆ. ಅಂದಹಾಗೆ ಎತ್ತರ ನೋಡಿ ಕೋಪ ಅಳೆಯುವುದು, ಖಂಡಿತಾ ಸಾಧ್ಯ ಆಗದ ಮಾತು ಎಂದಿದ್ದಾರೆ ನಟ ಕಿಚ್ಚ ಸುದೀಪ್ ಅವರು.
ಕಿಚ್ಚ, ತಮ್ಮ ತಂದೆಯನ್ನು ಬಿಟ್ಟರೆ, ಇನ್ನೊಬ್ಬರಿಗೆ ಹೆದರ್ತಾರಂತೆ!, ಯಾರವರು?

ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಅವರ ಹೊಸ ಚಿತ್ರ 'ಯಕ್ಷಪ್ರಶ್ನೆಯ' ಲೋಗೋ ಅನಾವರಣ ಮಾಡಲು ನಟಿ ರಾಧಿಕಾ ಪಂಡಿತ್ ಅವರೊಂದಿಗೆ ಬೆಂಗಳೂರಿನ ಕ್ಯಾಪಿಟಲ್ ಹೋಟೆಲ್ ನಲ್ಲಿ ಭಾಗವಹಿಸಿದ್ದ ನಟ-ನಿರ್ಮಾಪಕ-ನಿರ್ದೇಶಕ ಕಿಚ್ಚ ಸುದೀಪ್ ಅವರು ನಿರ್ದೇಶಕ ಸುನೀಲ್ ದೇಸಾಯಿ ಅವರಿಗೆ ಇರುವ ಕೋಪದ ಬಗ್ಗೆ ಹಾಗೂ ಅವರ ಬಗ್ಗೆ ತಮಗಿರುವ ಅಭಿಮಾನವನ್ನು ಹೇಳಿಕೊಂಡಿದ್ದಾರೆ.[ದೇಸಾಯಿ ಅವರ 'ತಂದಾನ ತಂದನಾನ' ಈಗ 'ಯಕ್ಷಪ್ರಶ್ನೆ'!]

'ಕೋಪ ಅನ್ನೋದು ತುಂಬಾ ಹೈಟ್ ಇದ್ದವರಿಗೆ ಮಾತ್ರ ಬರೋದಲ್ಲ. ನಿರ್ದೇಶಕ ಸುನೀಲ್ ದೇಸಾಯಿ ಅವರಿಗೆ ಕೋಪ ಅನ್ನೋದು ಜಾಸ್ತಿ ನಿಜ, ಆದರೆ ಅವರ ಕೋಪ ಅನ್ನೋದು ಏನಿದ್ದರೂ ಕೆಲಸದ ವಿಷಯಕ್ಕೆ ಬಂದಾಗ ಮಾತ್ರ. ಇನ್ನುಳಿದಂತೆ ಅವರು ಬಹಳ ಒಳ್ಳೆಯ ಮನುಷ್ಯ.

'ಅವರ ಜೊತೆ ಕೆಲಸ ಮಾಡಿದ ಅನೇಕರು ಇಂದು ದೊಡ್ಡ ದೊಡ್ಡ ಸ್ಥಾನದಲ್ಲಿದ್ದಾರೆ. ಕನ್ನಡ ಚಿತ್ರರಂಗಕ್ಕೆ ನಿರ್ದೇಶಕ ಸುನೀಲ್ ದೇಸಾಯಿ ಅವರು ಮತ್ತೆ ಒಳ್ಳೊಳ್ಳೆ ಸಿನಿಮಾ ನೀಡಲಿ ಎಂಬುದೇ ನನ್ನ ಆಸೆ. ಎಂದು ಸುದೀಪ್ ಅವರು ಕಾರ್ಯಕ್ರಮದಲ್ಲಿ ನುಡಿದಿದ್ದಾರೆ.

ಅಂದಹಾಗೆ 'ನಾನು ನನ್ನ ತಂದೆಯನ್ನು ಬಿಟ್ಟರೆ, ಹೆದರೋದು ಸುನೀಲ್ ಕುಮಾರ್ ದೇಸಾಯಿ ಅವರಿಗೆ. ಅವರ ಜೊತೆ ಕೆಲಸ ಮಾಡಿದವರಿಗೆ ಗೊತ್ತಾಗುತ್ತೆ ದೇಸಾಯಿ ಅವರು ಹೇಗಿರುತ್ತಾರೆ ಅಂತ.[ಎರಡು ದಶಕಗಳ ನಂತ್ರ ಒಂದಾದ 'ನಮ್ಮೂರ ಮಂದಾರ..' ಜೋಡಿ]

ನನ್ನ ಹೀರೋ ಆಗುವ ಕನಸು ಮುಗೀತು ಅಂತ ಸುಮ್ಮನಾದಾಗ, 'ಸ್ಪರ್ಶ' ಚಿತ್ರ ಮಾಡಿ ನನಗೊಂದು ಹೊಸ ಜೀವನ ಕಟ್ಟಿಕೊಟ್ಟಿದ್ದು, ಇದೇ ದೇಸಾಯಿ ಅವರು. ನಾನಿವತ್ತು ಇಷ್ಟು ಸಣ್ಣ ಸಾಧನೆ ಮಾಡಿದ್ದೇನೆ ಅಂದರೆ ಅದಕ್ಕೆ ಕಾರಣ ದೇಸಾಯಿ ಅವರು. ನಾನು ಚಿತ್ರರಂಗದಲ್ಲಿ ನನ್ನ ಗುರು ಅಂತ ಯಾರಾನ್ನಾದರೂ ಕರೆಯುತ್ತೇನೆ ಅಂದರೆ ಅದು ದೇಸಾಯಿ ಅವರನ್ನು ಮಾತ್ರ ಎಂದು ಸುದೀಪ್ ಹೇಳಿದ್ದಾರೆ.

ನಟ-ನಿರ್ದೇಶಕ ರಮೇಶ್ ಅರವಿಂದ್, ನಟಿ ಹರ್ಷಿಕಾ ಪೂಣಚ್ಚ, ನಟಿ ಮೈತ್ರಿಯಾ ಗೌಡ ಕಾಣಿಸಿಕೊಳ್ಳುತ್ತಿರುವ ದೇಸಾಯಿ ನಿರ್ದೇಶನದ ಕಾಮಿಡಿ ಚಿತ್ರ 'ಯಕ್ಷಪ್ರಶ್ನೆ' ಈ ಮೊದಲು 'ತಂದಾನ ತಂದನಾನ' ಎಂದು ಟೈಟಲ್ ಆಗಿತ್ತು. ಇದೀಗ ಚಿತ್ರತಂಡ ಹೊಸ ಹೆಸರು 'ಯಕ್ಷಪ್ರಶ್ನೆ'ಯನ್ನು ಸುದೀಪ್ ಹಾಗೂ ರಾಧಿಕ ಪಂಡಿತ್ ಅವರ ಕೈಯಲ್ಲಿ ಬಿಡುಗಡೆ ಮಾಡಿಸಿದ್ದಾರೆ.

ಚಿತ್ರದ ಆಡಿಯೋವನ್ನು, ಸಾಹಿತ್ಯ ಬರಹಗಾರ ಜಯಂತ್ ಕಾಯ್ಕಿಣಿ ಅವರು ಬಿಡುಗಡೆ ಮಾಡಿದ್ದಾರೆ. ಇನ್ನುಳಿದಂತೆ ಹಿರಿಯ ನಟ ಅನಂತ್ ನಾಗ್, ಸುಮನ್ ನಾಗರ್ ಕರ್, ಹರ್ಷಿಕಾ ಪೂನಚ್ಚ, ರಮೇಶ್ ಅರವಿಂದ್ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Fresh Kannada

Fresh Kannada

No comments:

Post a Comment

Google+ Followers

Powered by Blogger.