Breaking News
recent

ಚಿನ್ನದ ಹುಡುಗನಿಗೆ ಆಕ್ಷನ್-ಕಟ್ ಹೇಳ್ತಾರಂತೆ, ರಮೇಶ್ ಅರವಿಂದ್.!

ಬಹುಭಾಷಾ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರು ತೆಲುಗಿನ ಸೂಪರ್ ಹಿಟ್ 'ಭಲೇ ಭಲೇ ಮಗಾಡಿವೋಯ್', ಚಿತ್ರವನ್ನು ಕನ್ನಡಕ್ಕೆ ತರುತ್ತಿರುವ ವಿಷಯವನ್ನು ನಾವು ನಿಮಗೆ ಈ ಮೊದಲು ಇದೇ ಫ್ರೆಶ್ ಕನ್ನಡದಲ್ಲಿ ಹೇಳಿದ್ವಿ ತಾನೇ.
ಚಿನ್ನದ ಹುಡುಗನಿಗೆ ಆಕ್ಷನ್-ಕಟ್ ಹೇಳ್ತಾರಂತೆ, ರಮೇಶ್ ಅರವಿಂದ್.!

ಈ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಮತ್ತು ತೆಲುಗಿನ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ರಾಕ್ ಲೈನ್ ವೆಂಟಕೇಶ್ ಅವರು ಜೊತೆಯಾಗಿ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ ಎಂಬುದು ಈಗಿರುವ ಸದ್ಯದ ಸುದ್ದಿ.

ಅಂದಹಾಗೆ ಈ ಚಿತ್ರಕ್ಕೆ ನಿರ್ದೇಶಕರು ಯಾರು ಎಂಬುದರ ಬಗ್ಗೆ ಈ ಮೊದಲು ಭಾರಿ ಚರ್ಚೆ ಏರ್ಪಟ್ಟಿತ್ತು. ಇದೀಗ ಆ ಚರ್ಚೆಗೆ ಫುಲ್ ಸ್ಟಾಪ್ ಬಿದ್ದಿದ್ದು, ನಟ-ನಿರ್ದೇಶಕ ರಮೇಶ್ ಅರವಿಂದ್ ಅವರು ಗೋಲ್ಡನ್ ಸ್ಟಾರ್ ಗಣೇಶ್ ಗೆ ಆಕ್ಷನ್-ಕಟ್ ಹೇಳಲು ತಯಾರಾಗಿದ್ದಾರೆ.

ತಮಿಳು ನಟ ಕಮಲ್ ಹಾಸನ್ ಅವರಿಗೆ 'ಉತ್ತಮ್ ವಿಲನ್' ಸಿನಿಮಾ ಮಾಡಿದ ನಂತರ ಇದೀಗ ಮತ್ತೆ ಕನ್ನಡದಲ್ಲಿ ನಿರ್ದೇಶಕರ ಪಟ್ಟ ಹೊತ್ತುಕೊಳ್ಳಲು ನಟ ರಮೇಶ್ ಅರವಿಂದ್ ಅವರು ಒಪ್ಪಿಕೊಂಡಿದ್ದಾರೆ.

ಇನ್ನು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರು 'ಲಿಂಗಾ' ಚಿತ್ರದ ಅನೇಕ ವಿವಾದಗಳನ್ನು ಹಿಮ್ಮೆಟ್ಟಿ 'ಭಜರಂಗಿ ಭಾಯಿಜಾನ್' ಸಿನಿಮಾದ ಯಶಸ್ಸು ಕಂಡು ಮತ್ತೆ ಕನ್ನಡಕ್ಕೆ ತೆಲುಗು ಚಿತ್ರ 'ಭಲೇ ಭಲೇ ಮಗಾಡಿವೋಯ್' ಚಿತ್ರದ ರಿಮೇಕ್ ಹಕ್ಕನ್ನು ಕೈಯಲ್ಲಿ ಹಿಡಿದು ಬಂದಿದ್ದಾರೆ.

ಸದ್ಯಕ್ಕೆ ರಮೇಶ್ ಅರವಿಂದ್ ಅವರು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಎರಡನೇ ಆವೃತ್ತಿಗೆ ತಯಾರಾಗುತ್ತಿದ್ದು, ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರು ನಿರ್ದೇಶಕ ಶಶಾಂಕ್ ಆಕ್ಷನ್-ಕಟ್ ಹೇಳುತ್ತಿರುವ 'ಮುಂಗಾರು ಮಳೆ 2' ಚಿತ್ರದ ಶೂಟಿಂಗ್ ಗಾಗಿ ರಾಜಸ್ಥಾನಕ್ಕೆ ಹಾರಿದ್ದಾರೆ.

ಒಟ್ನಲ್ಲಿ ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ವರ್ಷಕ್ಕೆ ಇವರೆಲ್ಲರ ಮುಂದಾಳತ್ವದಲ್ಲಿ ಈ ಸಿನಿಮಾ ಭರ್ಜರಿಯಾಗಿ ಸೆಟ್ಟೇರಲಿದೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.