Breaking News
recent

ಚಂದನವನದ ನಕ್ಷತ್ರ ಕೆಎಸ್ಎಲ್ ಸ್ವಾಮಿ ಅವರಿಗೆ ನುಡಿ-ನಮನ

ಕರ್ನಾಟಕ ಚಲನಚಿತ್ರ ಅಕಾಡೆಮಿ ವತಿಯಿಂದ ನವೆಂಬರ್ 5ರಂದು ಬೆಳಿಗ್ಗೆ 11-30 ಗಂಟೆಗೆ ಬೆಂಗಳೂರು ನಗರದ ಕುಮಾರ ಪಾರ್ಕ್ ರಸ್ತೆಯಲ್ಲಿರುವ ಗಾಂಧೀ ಭವನದಲ್ಲಿ ಕನ್ನಡದ ಹೆಸರಾಂತ ಚಿತ್ರ ನಿರ್ದೇಶಕ ಕಮ್ ನಟ ರವೀ (ಕೆಎಸ್‌ಎಲ್ ಸ್ವಾಮಿ) ಅವರ ಕುರಿತ ರವೀ ನಮನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ, ಎಂದು ಅಕಾಡೆಮಿಯ ರಿಜಿಸ್ಟ್ರಾರ್ ಎಚ್. ಬಿ. ದಿನೇಶ್ ಅವರು ತಿಳಿಸಿದ್ದಾರೆ.
ಚಂದನವನದ ನಕ್ಷತ್ರ ಕೆಎಸ್ಎಲ್ ಸ್ವಾಮಿ ಅವರಿಗೆ ನುಡಿ-ನಮನ

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಅವರು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಎನ್.ಆರ್. ವಿಶುಕುಮಾರ್ ಅವರು ಭಾಗವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಹಿರಿಯ ಕಲಾವಿದರಾದ ನಟ-ನಿರ್ಮಾಪಕ-ನಿರ್ದೇಶಕ ದ್ವಾರಕೀಶ್, ನಟ ಎಸ್. ಶಿವರಾಂ, ಕೆಎಸ್‌ಎಲ್ ಸ್ವಾಮಿ ಪತ್ನಿ ಬಿ.ವಿ. ರಾಧಾ, ಎಚ್.ಜಿ. ಸೋಮಶೇಖರ್ ರಾವ್, ವಿಜಯಲಕ್ಷ್ಮೀ ಸಿಂಗ್, ಎಂ.ಎಸ್. ರಮೇಶ್, ಹಿರಿಯ ಚಲನಚಿತ್ರ ನಿರ್ದೇಶಕರಾದ ಎಸ್.ಕೆ. ಭಗವಾನ್, ಗಿರೀಶ್ ಕಾಸರವಳ್ಳಿ, ಸಿ.ವಿ. ಶಿವಶಂಕರ್, ರವಿ ಅವರ ಒಡನಾಡಿ ಕೃಪಾ, ಹಿರಿಯ ಪತ್ರಕರ್ತ ಗಂಗಾಧರ್ ಮೊದಲಿಯಾರ್ ಮುಂತಾದವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.