Breaking News
recent

ನಿಜ ಜೀವನದಲ್ಲೂ, ಸೆಂಚುರಿ ಬಾರಿಸಿ ಅಭಿಮಾನಿಗಳ ಮೆಚ್ಚುಗೆ ಗಳಿಸಿದ ಕಿಚ್ಚ!

ಕಿಚ್ಚ ಸುದೀಪ್ ಅವರು ಭರ್ಜರಿ ಇನ್ನೊಂದು ಶತಕ ಗಳಿಸಿದ್ದಾರೆ. ಇದೇನಪ್ಪಾ ಈಗ್ಯಾವ ಸ್ಕೋರ್, ಕರ್ನಾಟಕ ಸಿಸಿಎಲ್ ಮ್ಯಾಚ್ ನಡೀತಾ ಇಲ್ಲ, ಅಲ್ಲಾ ಸುದೀಪ್ ಅವರ ಯಾವುದಾದ್ರೂ ಸಿನಿಮಾದ ಬಾಕ್ಸಾಫೀಸ್ ಸ್ಕೋರಾ?, ಅಂತ ನೀವು ತಲೆ ಕೆರೆದುಕೊಳ್ಳಬೇಡಿ.
ನಿಜ ಜೀವನದಲ್ಲೂ, ಸೆಂಚುರಿ ಬಾರಿಸಿ ಅಭಿಮಾನಿಗಳ ಮೆಚ್ಚುಗೆ ಗಳಿಸಿದ ಕಿಚ್ಚ!

ಅಂದಹಾಗೆ ಕಿಚ್ಚ ಅವರು ಸೆಂಚುರಿ ಹೊಡೆದಿದ್ದು, ನಿಜ ಜೀವನದಲ್ಲಿ. ಅದೇನಪ್ಪಾ ಅಂದ್ರೆ ನಮ್ಮ ಪ್ರೀತಿಯ ಕಿಚ್ಚ ಸುದೀಪ್ ಅವರು ಸಿಗರೇಟ್ ಸೇದದೆ ಹಾಗೂ ವೈನ್ ಸೇವನೆ ಮಾಡದೇ ಬರೋಬ್ಬರಿ 100 ದಿನ ಆಯ್ತಂತೆ!. ಇದಕ್ಕೆ ನಾವು ಹೇಳಿದ್ದು, ಸುದೀಪ್ ಅವರು ಸೆಂಚುರಿ ಹೊಡೆದ್ರು ಅಂತ.

ನಟ ಸುದೀಪ್ ಅವರು ಆಗಾಗ ಸಿಗರೇಟು ಸೇದುತ್ತಿದ್ದು, ಇದೀಗ ಅದನ್ನು ಸಂಪೂರ್ಣವಾಗಿ ನಿಲ್ಲಿಸಿ ಎಲ್ಲರಿಗೆ ಮಾದರಿಯಾಗಿದ್ದಾರೆ. ಅದರೊಂದಿಗೆ ಯಾವಾಗಲಾದರೂ ಒಮ್ಮೆ ಬಿಳಿ ವೈನ್ ಸೇವನೆ ಮಾಡುತ್ತಿದ್ದ ಸುದೀಪ್ ಅವರು ಅದನ್ನು ಈಗ ಸಂಪೂರ್ಣವಾಗಿ ನಿಲ್ಲಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.[ದೀಪಾವಳಿ ಹಬ್ಬಕ್ಕೆ 10 ಲಕ್ಷ ಖರ್ಚು ಮಾಡಿದ ಕಿಚ್ಚ ಸುದೀಪ್!]

ಕೆಲವಾರು ತಿಂಗಳುಗಳ ಹಿಂದೆ ಕಿಚ್ಚ ಸುದೀಪ್ ಅವರು ಈ ತರದ ನಿರ್ಧಾರ ಕೈಗೊಂಡಿದ್ದು, ಇದೀಗ ಅದನ್ನು ಕಾರ್ಯರೂಪಕ್ಕೆ ತಂದಿದ್ದಾರೆ. ಜೊತೆಗೆ ಈ ತರದ ನಿರ್ಧಾರಕ್ಕೆ ಕಿಚ್ಚ ಅವರ ಅಭಿಮಾನಿಗಳು ಜೈ ಅಂದಿದ್ದಾರೆ.

ಇದೀಗ ಸುದೀಪ್ ಅವರು ಒಂದೇ ಒಂದು ಸಿಗರೇಟ್ ಮುಟ್ಟುತ್ತಿಲ್ಲ, ಜೊತೆಗೆ ವೈನ್ ಗ್ಲಾಸ್ ಅನ್ನು ಕೂಡ ಟಚ್ ಮಾಡಿಲ್ಲ. ಇನ್ನು ಕಿಚ್ಚ ಸುದೀಪ್ ಅವರು ಹೇಳುವ ಪ್ರಕಾರ ಇದು ಯಾರು ಹೇಳಿ, ಅಥವಾ ನಾನು ಯಾರನ್ನು ನೋಡಿ ಮಾಡಿದ್ದಲ್ಲ, ಬದ್ಲಾಗಿ ಇದು ನನ್ನದೇ ಯೋಚನೆ, ನನ್ನದೇ ನಿರ್ಧಾರ. ನಾನು ಇಷ್ಟಪಟ್ಟು ಮಾಡುತ್ತಿದ್ದೇನೆ ಎಂದಿದ್ದಾರೆ.[ಫೇರ್ ಅಂಡ್ ಲವ್ಲೀ ಸುಂದರಿಗೆ ಕಿಚ್ಚನ ಜೊತೆ ನಟಿಸುವ ಆಸೆಯಂತೆ!]

ಇದಕ್ಕೆ ಕಿಚ್ಚನ ಅಭಿಮಾನಿಗಳು ಕೂಡ ಸಂತಸ ವ್ಯಕ್ತಪಡಿಸಿ ಕಿಚ್ಚ ಅವರೇ ಇದನ್ನೇ ಮುಂದುವರಿಸಿಕೊಂಡು ಹೋಗಿ ಎನ್ನುವ ಮೂಲಕ ಅಭಿನಯ ಚಕ್ರವರ್ತಿಗೆ ಬಹುಪರಾಕ್ ಎಂದಿದ್ದಾರೆ.

ಒಟ್ನಲ್ಲಿ ಒಳ್ಳೊಳ್ಳೆ ಕೆಲಸ ಮಾಡುವ ಮೂಲಕ ನಟ ಕಿಚ್ಚ ಸುದೀಪ್ ಅವರು ತೆರೆಯ ಮೇಲೆ, ತೆರೆಯ ಹಿಂದೆ ಅಂತ ಎಲ್ಲಾ ಕಡೆ ಮಿಂಚುತ್ತಾ, ಅಭಿಮಾನಿಗಳ ಮನದಲ್ಲಿ ಭದ್ರವಾದ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಏನೇ ಇರಲಿ ಇದೀಗ ನಾವು ಕಿಚ್ಚ ಸುದೀಪ್ ಗೆ ಕಂಗ್ರಾಜ್ಯುಲೇಷನ್ ಹೇಳೋಣ್ವಾ.
Fresh Kannada

Fresh Kannada

No comments:

Post a Comment

Google+ Followers

Powered by Blogger.