Breaking News
recent

ಕೆಎಫ್ ಸಿಸಿ ನೂತನ ಅಧ್ಯಕ್ಷರಾಗಿ ಸಾರಾ ಗೋವಿಂದು ಆಯ್ಕೆ

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನೂತನ ಅಧ್ಯಕ್ಷರಾಗಿ ಹಿರಿಯ ನಿರ್ಮಾಪಕ ಸಾ.ರಾ ಗೋವಿಂದು ಅವರು ಆಯ್ಕೆಯಾಗಿದ್ದಾರೆ.
ಕೆಎಫ್ ಸಿಸಿ ನೂತನ ಅಧ್ಯಕ್ಷರಾಗಿ ಸಾರಾ ಗೋವಿಂದು ಆಯ್ಕೆ

ಚಲನಚಿತ್ರ ವಾಣಿಜ್ಯ ಮಂಡಳಿ ಪದಾದಿಕಾರಿಗಳ ಚುನಾವಣೆ ಶನಿವಾರ (ಅಕ್ಟೋಬರ್ 31) ದಂದು ಬೆಂಗಳೂರಿನಲ್ಲಿ ನಡೆದಿದ್ದು, ಚುನಾವಣೆಯಲ್ಲಿ ನಿರ್ಮಾಪಕ ಸಾ.ರಾ ಗೋವಿಂದು ಅವರು ಬಾ.ಮಾ ಹರೀಶ್ ವಿರುದ್ಧ 243 ಮತಗಳ ಅಂತರದಲ್ಲಿ ಗೆದ್ದು ಫಿಲ್ಮ್ ಛೇಂಬರ್ ನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಒಟ್ಟಾರೆ 8 ಸ್ಥಾನಗಳಲ್ಲಿ ಹಿರಿಯ ನಿರ್ಮಾಪಕ ಸಾ.ರಾ ಗೋವಿಂದು ಅವರ ಬಣ ಭರ್ಜರಿ ಜಯಗಳಿಸಿದೆ.[ಕೆ.ಎಫ್.ಸಿ.ಸಿ ಅಧ್ಯಕ್ಷಗಾದಿಗೆ ನಿರ್ಮಾಪಕ ಸಾ.ರಾ.ಗೋವಿಂದು?]

"ಇದೊಂದು ಐತಿಹಾಸಿಕ ಜಯ, ನನ್ನ ಗೆಲುವಿಗೆ ಶ್ರಮಿಸಿದ ಎಲ್ಲಾ ಸದಸ್ಯರು, ಹಾಗೂ ಜನತೆಗೆ ನನ್ನ ತುಂಬು ಹೃದಯದ ಕೃತಜ್ಞತೆಗಳು. ಚಲನಚಿತ್ರ ವಾಣಿಜ್ಯ ಮಂಡಳಿಯ ಅಭಿವೃದ್ದಿಗಾಗಿ ದುಡಿಯುವೆ" ಎಂದು ನೂತನ ಅಧ್ಯಕ್ಷ ಸಾ.ರಾ ಗೋವಿಂದು ಅವರು ಜಯಗಳಿಸಿದ ಸಂಭ್ರಮದಲ್ಲಿ ನುಡಿದಿದ್ದಾರೆ.[ಪಿಯು ಸ್ಟೂಡೆಂಟ್ ಸಾರಾ ಗೋವಿಂದು ಮಗನ ಡವ್ ಕಹಾನಿ]

ಇದೀಗ ನೂತನವಾಗಿ ರಚನೆಗೊಂಡ ಚಲನಚಿತ್ರ ವಾಣಿಜ್ಯ ಮಂಡಳಿಯ ಪದಾದಿಕಾರಿಗಳ ಸಂಘದ ಲಿಸ್ಟ್ ಇಲ್ಲಿದೆ ನೋಡಿ..

-ಹಿರಿಯ ನಿರ್ಮಾಪಕ ಸಾ.ರಾ ಗೋವಿಂದು - ಅಧ್ಯಕ್ಷರು ಚಲನಚಿತ್ರ ವಾಣಿಜ್ಯ ಮಂಡಳಿ
-ಉಮೇಶ್ ಬನಾಕರ್ - ಉಪಾಧ್ಯಕ್ಷರು, ನಿರ್ಮಾಪಕ ವಲಯ
-ಎಂ.ಎನ್ ಕುಮಾರ್ - ಉಪಾಧ್ಯಕ್ಷರು, ವಿತರಕ ವಲಯ
-ಜೈರಾಜ್ ಡಿ.ಆರ್ - ಉಪಾಧ್ಯಕ್ಷರು, ಎಕ್ಸಿಬಿಟರ್ ಸೆಕ್ಟರ್
-ಎಂ.ಜಿ ರಾಮಮೂರ್ತಿ - ಕಾರ್ಯದರ್ಶಿ, ನಿರ್ಮಾಪಕ ವಲಯ
-ಎಂ.ಎನ್ ಸುರೇಶ್ - ಕಾರ್ಯದರ್ಶಿ, ವಿತರಕ ವಲಯ
-ನರಸಿಂಹುಲು - ಕಾರ್ಯದರ್ಶಿ, ಎಕ್ಸಿಬಿಟರ್ ಸೆಕ್ಟರ್
-ರಾಜೇಂದ್ರ - ಖಜಾಂಚಿ
Fresh Kannada

Fresh Kannada

No comments:

Post a Comment

Google+ Followers

Powered by Blogger.