Breaking News
recent

ಜೈಲು ಪಾಲಾದ ನಟ ,ನಿರ್ದೇಶಕ ಹುಚ್ಚ ವೆಂಕಟ್

ಸಾಕಷ್ಟು ಸುದ್ದಿಯಾಗಿದ್ದ ನಟ, ನಿರ್ದೇಶಕ ಹುಚ್ಚ ವೆಂಕಟ್ ಜೈಲು ಸೇರಿದ್ದಾರೆ. ಡಾ.ಬಿಆರ್ ಅಂಬೇಡ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ ಪ್ರಕರಣದಲ್ಲಿ ಹುಚ್ಚ ವೆಂಕಟ್ ಅವರಿಗೆ ಡಿ. 4 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಬೆಂಗಳೂರಿನ 17 ನೇ ಸಿಟಿ ಸಿವಿಲ್ ಕೋರ್ಟ್ ಆದೇಶ ನೀಡಿದೆ.
ಜೈಲು ಪಾಲಾದ ನಟ ,ನಿರ್ದೇಶಕ ಹುಚ್ಚ ವೆಂಕಟ್

ಅಂಬೇಡ್ಕರ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದ ಹಿನ್ನೆಲೆಯಲ್ಲಿ ಹುಚ್ಚ ವೆಂಕಟ್ ವಿರುದ್ಧ ದಲಿತ ಸಂಘಟನೆ ಸದಸ್ಯರು ದೂರು ನೀಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಜ್ಞಾನಭಾರತಿ ಪೊಲೀಸರು ನಿನ್ನೆ ರಾತ್ರಿ ಹುಚ್ಚ ವೆಂಕಟ್‍ ಅವರನ್ನು ಹಲಸೂರಿನ ನಿವಾಸದಲ್ಲಿ ಬಂಧಿಸಿ ಇಂದು ನ್ಯಾ. ಎಂ ಕೆ ಹಾಜವಗೋಲ್ ಅವರ ಮುಂದೆ ಹಾಜರು ಪಡಿಸಿದ್ದರು.
ಜೆರಾಕ್ಸ್ ಗೆ  ತೆರಳಿದ್ದ ವೆಂಕಟ್ ಪರ ವಕೀಲ ವಿಚಾರಣೆಗೆ ಹಾಜರಾಗದ ಹಿನ್ನಲೆಯಲ್ಲಿ ಕೆಲ ಕಾಲ ವಿಚಾರಣೆಯನ್ನು ನ್ಯಾಯಾಧೀಶರು ಮುಂದೂಡಿದ್ದರು. ಅಲ್ಲದೇ, ಬೇಲ್ ಶ್ಯೂರಿಟಿ ನೀಡಲು ವೆಂಕಟ್ ಅಕ್ಕ ಬರಲಿಲ್ಲ. ಈ ಹಿನ್ನೆಯಲ್ಲಿ  ಹುಚ್ಚ ವೆಂಕಟ್‍ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕೋರ್ಟ್ ಆದೇಶ ನೀಡಿತು.
ವಿಚಾರಣೆ ವೇಳೆ ಪೊಲೀಸರು ಏನಾದ್ರೂ ತೊಂದರೆ ಮಾಡಿದ್ರಾ ಎಂದು ಹುಚ್ಚ ವೆಂಕಟ್‍ಗೆ ಸಿಟಿ ಸಿವಿಲ್ ಕೋರ್ಟ್ ನ್ಯಾಯಾಧೀಶರು ಪ್ರಶ್ನಿಸಿದರು. ಈ ವೇಳೆ ಯಾವುದೇ ತೊಂದರೆ ಕೊಟ್ಟಿಲ್ಲ ಎಂದು ಹುಚ್ಚ ವೆಂಕಟ್ ಉತ್ತರಿಸಿದರು.
ವಿಚಾರಣೆ ವೇಳೆ ಹುಚ್ಚ ವೆಂಕಟ್ ನೋಡಲು ಕೋರ್ಟ್‍ನಲ್ಲಿ ಜನ ಜಮಾಯಿಸಿದ್ದರು. ಹುಚ್ಚ ವೆಂಕಟ್ ಪರ ಉಚಿತವಾಗಿ ವಕಾಲತ್ತು ವಹಿಸಲು ವಕೀಲರ ದಂಡೇ ನಿಂತಿತ್ತು.
Fresh Kannada

Fresh Kannada

No comments:

Post a Comment

Google+ Followers

Powered by Blogger.