Breaking News
recent

ಸ್ಪೆಷಲ್ ಹುಡುಗನ 'ಬಾಕ್ಸರ್' ಏಕೆ ನೋಡಬೇಕು?, ಇಲ್ಲಿದೆ ಕಾರಣ

ಡೈರೆಕ್ಟರ್ ಸ್ಪೆಷಲ್ ಹುಡುಗ ಧನಂಜಯ್ ಅವರ ಬಹುನಿರೀಕ್ಷಿತ 'ಬಾಕ್ಸರ್' ಚಿತ್ರ ಇಂದು (ನವೆಂಬರ್ 20) ರಾಜ್ಯಾದ್ಯಂತ ಸುಮಾರು 160 ರಿಂದ 180 ಚಿತ್ರಮಂದಿರಗಳಲ್ಲಿ ಭರ್ಜರಿಯಾಗಿ ತೆರೆ ಕಂಡಿದೆ. ಬೆಂಗಳೂರಿನ ಮುಖ್ಯ ಚಿತ್ರಮಂದಿರ ಸಂತೋಷ್ ಥಿಯೇಟರ್ ನಲ್ಲಿ ಚಿತ್ರ ತೆರೆ ಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ.
ಸ್ಪೆಷಲ್ ಹುಡುಗನ 'ಬಾಕ್ಸರ್' ಏಕೆ ನೋಡಬೇಕು?, ಇಲ್ಲಿದೆ ಕಾರಣ

ನಿರ್ದೇಶಕ ಪ್ರೀತಂ ಗುಬ್ಬಿ ಆಕ್ಷನ್-ಕಟ್ ಹೇಳಿರುವ ಈ ಚಿತ್ರ ಗಾಂಧಿನಗರದಲ್ಲಿ ಭಾರಿ ಕುತೂಹಲ ಹುಟ್ಟಿಸಿದೆ. ಇದೇ ಮೊದಲ ಬಾರಿಗೆ ಚಂದನವನಕ್ಕೆ ಕಾಲಿಡುತ್ತಿರುವ ಕನ್ನಡತಿ ಕೃತಿಕಾ ಜಯಕುಮಾರ್ ಅವರು ಧನಂಜಯ್ ಅವರ ಜೊತೆ ಡ್ಯುಯೆಟ್ ಹಾಡಿದ್ದಾರೆ.

ಅಂದಹಾಗೆ ನಟ ಧನಂಜಯ್ ಅವರ ಸಿನಿಕೆರಿಯರ್ ನಲ್ಲಿ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಮಟ್ಟದಲ್ಲಿ ಕರ್ನಾಟಕದಾದ್ಯಂತ ಚಿತ್ರ ತೆರೆ ಕಾಣುತ್ತಿರುವುದು. ಎಂದು ನಟ ಧನಂಜಯ್ ಹಾಗೂ ನಿರ್ದೇಶಕ ಪ್ರೀತಂ ಗುಬ್ಬಿ ಸಂತಸ ವ್ಯಕ್ತಪಡಿಸಿದ್ದಾರೆ.

ಇನ್ನು ಗಾಂದಿನಗರದ ಸಿನಿ ತಜ್ಞರು ಹೇಳುವ ಪ್ರಕಾರ 'ಬಾಕ್ಸರ್' ಚಿತ್ರ ಹಿಟ್ ಮೂವಿ ಆಗುತ್ತೆ ಮಾತ್ರವಲ್ಲದೇ ನಟ ದನಂಜಯ್ ಅವರಿಗೆ ಈ ಸಿನಿಮಾ ಬ್ರೇಕ್ ನೀಡುತ್ತೆ ಅಂತ ಅಲ್ಲಲ್ಲಿ ಚರ್ಚೆ ಆಗುತ್ತಿದೆ.

'ದಿಲ್ ರಂಗೀಲಾ' ಚಿತ್ರದ ನಂತರ ಮತ್ತೆ ಗಾಂಧಿನಗರಕ್ಕೆ ವಾಪಸಾಗಿ 'ಬಾಕ್ಸರ್' ಎಂಬ ಖಡಕ್ ಸಿನಿಮಾ ಮಾಡಿರುವ ನಿರ್ದೇಶಕ ಪ್ರೀತಂ ಗುಬ್ಬಿ ಅವರ 'ಬಾಕ್ಸರ್' ಚಿತ್ರವನ್ನು ಏಕೆ ನೋಡಬೇಕು, ಎಂಬುದನ್ನು ತಿಳಿಯಲು ಕೆಳಗಿನ ಕೆಳಗಿರುವ ಅಪ್ಡೇಟ್ ಓದಿ.....


1. ಸ್ಪೆಷಲ್ ಹುಡುಗ ಧನಂಜಯ್
ಡೈರೆಕ್ಟರ್ ಸ್ಪೆಷಲ್ ಹುಡುಗ ಧನಂಜಯ್ ಅವರು ಈ ಚಿತ್ರದಲ್ಲಿ ಕಿಕ್ 'ಬಾಕ್ಸರ್' ರೋಲ್ ಮಾಡುತ್ತಿದ್ದಾರೆ. ಅಲ್ಲದೇ ಧನಂಜಯ್ ಅವರು ಈ ಚಿತ್ರಕ್ಕಾಗಿಯೇ ಸಖತ್ ವರ್ಕೌಟ್ ಕೂಡ ಮಾಡಿದ್ದು, ಅವರ ಲುಕ್ ಮತ್ತು ಬಾಡಿ ಲಾಂಗ್ವೇಜ್ ಮುಂತಾದವು ಸಾಮಾನ್ಯವಾಗಿ ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟಿಸುತ್ತಿದೆ.

2. ಧನಂಜಯ್ ಮತ್ತು ಕೃತಿಕಾ ಜಯಕುಮಾರ್
ಇದೇ ಮೊದಲ ಬಾರಿಗೆ ನಟಿ ಕೃತಿಕಾ ಜಯಕುಮಾರ್ ಮತ್ತು ಧನಂಜಯ್ ಅವರು ತೆರೆ ಮೇಲೆ ಒಂದಾಗಿದ್ದು, ಇವರಿಬ್ಬರ ಕೆಮಿಸ್ಟ್ರಿ ತೆರೆ ಮೇಲೆ ಹೇಗೆ ವರ್ಕೌಟ್ ಆಗಿದೆ ಎಂಬುದನ್ನು ತಿಳಿಯಲು ಸಿನಿಪ್ರೀಯರು ಕಾತರರಾಗಿದ್ದಾರೆ. ಚಿತ್ರದಲ್ಲಿ ನಟಿ ಕೃತಿಕಾ ಅವರು ಕುರುಡಿಯಾಗಿ ಮುಗ್ದ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಟಫ್ 'ಬಾಕ್ಸರ್' ಧನಂಜಯ್ ಅವರನ್ನು ಪ್ರೀತಿಯ ಲೋಕಕ್ಕೆ ಕರೆದೊಯ್ಯಲಿದ್ದಾರೆ.

3. ಸ್ಪೆಷಲ್ ಹುಡುಗ ಡಿಫರೆಂಟ್ ರೋಲ್ ನಲ್ಲಿ
'ಡೈರೆಕ್ಟರ್ ಸ್ಪೆಷಲ್' ಚಿತ್ರದಲ್ಲಿ ಹಾಗೂ 'ರಾಟೆ' ಚಿತ್ರದಲ್ಲಿ ಮುಗ್ದ ಲವರ್ ಬಾಯ್ ಆಗಿದ್ದ ನಟ ಧನಂಜಯ್ ಅವರು 'ಬಾಕ್ಸರ್' ಚಿತ್ರದಲ್ಲಿ ಮಾತ್ರ ರಫ್ ಅಂಡ್ ಟಫ್ ಆಗಿ ಯಾವುದೇ ಭಾವನೆಗಳಿಲ್ಲದ ಕಂಪ್ಲೀಟ್ ಆಕ್ಷನ್ ಹೀರೋ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಮುಖ್ಯವಾಗಿ ಈ ಸಿನಿಮಾ ನೋಡಲು ಕಾರಣ ನಟ ಧನಂಜಯ್ ಅವರು.

4. ಸಾಮಾಜಿಕ ಜಾಲತಾಣಗಳಲ್ಲಿ ಪಾಸಿಟಿವ್ ರೆಸ್ಪಾನ್ಸ್
ಪ್ರೀತಂ ಗುಬ್ಬಿ ಅವರ 'ಬಾಕ್ಸರ್' ರಿಲೀಸ್ ಗೂ ಮುನ್ನ ಇಡೀ ಸಾಮಾಜಿಕ ಜಾಲತಾಣಗಳಲ್ಲಿ ಪಾಸಿಟಿವ್ ರೆಸ್ಪಾನ್ಸ್ ಗಿಟ್ಟಿಸಿಕೊಂಡಿದ್ದು, ಚಿತ್ರ ಖಂಡಿತವಾಗಲೂ ಹಿಟ್ ಆಗುತ್ತೆ ಅನ್ನೋದು ಸಿನಿಪ್ರೀಯರ ಅಭಿಪ್ರಾಯ.

5. ನಿರ್ದೇಶಕ ಪ್ರೀತಂ ಗುಬ್ಬಿ ಅವರ ಆಕ್ಷನ್-ಕಟ್
'ದಿಲ್ ರಂಗಿಲಾ' ಚಿತ್ರದ ಭರ್ಜರಿ ಯಶಸ್ಸಿನ ನಂತರ ನಿರ್ದೇಶಕ ಪ್ರೀತಂ ಗುಬ್ಬಿ ಅವರು 'ಬಾಕ್ಸರ್' ಚಿತ್ರದ ನಂತರ ವಾಪಸಾಗಿದ್ದು, ಕಿಕ್ 'ಬಾಕ್ಸರ್' ಸಿನಿಪ್ರಿಯರ ಮೆಚ್ಚುಗೆ ಗಳಿಸುತ್ತಾ ಅಂತ ಕಾದು ನೋಡೋಣ.

6. 'ಬಾಕ್ಸರ್' ಕಂಪ್ಲೀಟ್ ಫ್ಯಾಮಿಲಿ ಎಂರ್ಟಟೈನರ್
ಸ್ಪೆಷಲ್ ಹುಡುಗನ 'ಬಾಕ್ಸರ್' ಚಿತ್ರ ಕಂಪ್ಲೀಟ್ ಫ್ಯಾಮಿಲಿ ಎಂರ್ಟಟೈನರ್ ಚಿತ್ರವಾಗಿದ್ದು, ಈ ಸಿನಿಮಾ ಒಳ್ಳೆ ಸ್ಕ್ರಿಪ್ಟ್, ಸುಂದರ ಹಾಡುಗಳು ಹಾಗೂ ಸಖತ್ ಫೈಟ್ಸ್ ಅನ್ನು ಒಳಗೊಂಡಿದ್ದು, ಖಂಡಿತವಾಗಲೂ ಸಿನಿ ರಸಿಕರ ಮೆಚ್ಚುಗೆ ಪಡೆಯತ್ತದೆ.

7. ಲವ್ ಕಮ್ ಆಕ್ಷನ್ ಎಂರ್ಟಟೈನರ್
'ಬಾಕ್ಸರ್' ಚಿತ್ರ ರೊಮ್ಯಾಂಟಿಕ್ ಲವ್ ಹಾಗು ಜಬರ್ದಸ್ತ್ ಸ್ಟಂಟ್ಸ್ ಕಥೆಯಾಧರಿತ ಸಿನಿಮಾವಾಗಿದ್ದು, ಕಿಕ್ ಬಾಕ್ಸರ್ ಧನಂಜಯ್ ಗೆ ಸ್ಟಂಟ್ ಮಾಸ್ಟರ್ ಆಗಿ ಸಾಹಸ ನಿರ್ದೇಶಕ ರವಿವರ್ಮ ಅವರು ತರಬೇತಿ ನೀಡಿದ್ದಾರೆ. ಚಿತ್ರದಲ್ಲಿ ಮುಗ್ದ ಹುಡುಗಿಯ ಪಾತ್ರದಲ್ಲಿ ನಮ್ಮ ಬೆಂಗಳೂರಿನ ಕನ್ನಡತಿ ನಟಿ ಕೃತಿಕಾ ಜಯಕುಮಾರ್ ಅವರು ಮಿಂಚಿದ್ದಾರೆ. 'ತುಂಟ ತಾಟಕಿಯೇ' ಹಾಡು ಈಗಾಗಲೇ ಮಾರುಕಟ್ಟೆಯಲ್ಲಿ ಸಖತ್ ಹಿಟ್ಟಾಗಿದೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.