Breaking News
recent

ಅವನಲ್ಲ...'ಅವಳಿಗೆ' ಮನಸೋತ ಕನ್ನಡ ಸಿನಿ ವಿಮರ್ಶಕರು

ಎರಡು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕನ್ನಡ ಸಿನಿಮಾ, ಮಂಗಳಮುಖಿ 'ಲಿವಿಂಗ್ ಸ್ಮೈಲ್' ವಿದ್ಯಾ ಆತ್ಮಕಥೆ ಆಧರಿಸಿರುವ 'ನಾನು ಅವನಲ್ಲ...ಅವಳು' ಈ ವಾರ ತೆರೆಗೆ ಬಂದಿದೆ. 
Naanu avanalla avalu new

ಮಂಗಳಮುಖಿಯರ ವಾಸ್ತವ ಬದುಕನ್ನ ತೆರೆಮೇಲೆ ಅಚ್ಚುಕಟ್ಟಾಗಿ ತೋರಿಸಿರುವ 'ನಾನು ಅವನಲ್ಲ...ಅವಳು' ಸಿನಿಮಾ ನೋಡಿದ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. [ವಿಮರ್ಶೆ: ನೋಡುಗರ ಪರಿಕಲ್ಪನೆ ಬದಲಾಯಿಸುವ 'ನಾನು ಅವನಲ್ಲ...ಅವಳು'] ಸಂಚಾರಿ ವಿಜಯ್ ನಟನೆ ಅದ್ಭುತವಾಗಿದೆ ಅಂತ ಜನಸಾಮಾನ್ಯರು ಹಾಡಿ ಹೊಗಳುತ್ತಿದ್ದಾರೆ. ಹಾಗೆ, ವಿಮರ್ಶಕರು ಕೂಡ 'ನಾನು ಅವನಲ್ಲ...ಅವಳು' ಚಿತ್ರವನ್ನು ನೋಡಿ ನಿರ್ದೇಶಕ ಬಿ.ಎಸ್.ಲಿಂಗದೇವರು ಮತ್ತು ಸಂಚಾರಿ ವಿಜಯ್ ಬೆನ್ನು ತಟ್ಟಿದ್ದಾರೆ. ಮುಂದೆ ಓದಿ.....

1. ಮನುಷ್ಯ ಪ್ರೇಮ
ಹಿಜ್ಡಾಗಳ ಕುರಿತ ಸಿನಿಮಾ ಕನ್ನಡಕ್ಕೆ ಹೊಸತಲ್ಲ. ಆದರೆ, ಇಂಥ ಬಹುತೇಕ ಚಿತ್ರಗಳು ಸಾಕ್ಷ್ಯಚಿತ್ರದ ನೆಲೆಯಲ್ಲಿ ಇಲ್ಲವೇ ಹಸಿಬಿಸಿ ದೃಶ್ಯಗಳ ಮಾದರಿಯಲ್ಲಿ ರೂಪುಗೊಂಡಿರುತ್ತವೆ. ಈ ಅಪಾಯಗಳನ್ನು ಮೀರಿರುವ ‘ನಾನು ಅವನಲ್ಲ ಅವಳು' ಸಹ ಮನುಷ್ಯನೊಬ್ಬನ ಕಥೆಗೆ ಸ್ಪಂದಿಸುವ ಅಂತಃಕರಣ ಮತ್ತು ಸಂಯಮದಲ್ಲಿ ಹಿಜ್ಡಾಗಳ ಬದುಕನ್ನು ನಿರೂಪಿಸಿದೆ. ಇದು ಲಿಂಗದೇವರು ಅವರ ವೃತ್ತಿಜೀವನದ ಅತ್ಯುತ್ತಮ ಸಿನಿಮಾ ಮಾತ್ರವಲ್ಲ, ಇತ್ತೀಚಿನ ವರ್ಷಗಳಲ್ಲಿನ ಕನ್ನಡದ ಬಹುಮುಖ್ಯ ಪ್ರಯೋಗಶೀಲ ಚಿತ್ರಗಳಲ್ಲೂ ಒಂದಾಗಿದೆ. - ರಘುನಾಥ ಚ.ಹ.

2. ದೂರ ಉಳಿದವರ ಸಮೀಪ ದರ್ಶನ
'ಲಿವಿಂಗ್ ಸ್ಲೈಲಿಂಗ್' ವಿದ್ಯಾ ಹೆಸರಿನ ಹೆಸರುವಾಸಿ ಮಂಗಳಮುಖಿಯ ಜೀವನವನ್ನಾಧರಿಸಿದ ಈ ಸಿನಿಮಾ, ಡಾಕ್ಯುಮೆಂಟರಿ ರೂಪದಲ್ಲಿ ಮೂಡುತ್ತಲೇ ಒಳಗೊಳಗೇ ಮನಸ್ಸನ್ನು ಗಾಢವಾಗಿ ಆವರಿಸಿಕೊಳ್ಳುವ ತಣ್ಣನೆಯ ವಿಷಾದಕಾವ್ಯವಾಗಿಯೂ ಬೆಳೆಯುತ್ತದೆ. ಸಾಮಾನ್ಯವಾಗಿ ಇಂಥ ಕೃತಿಯನ್ನ ಸಿನಿಮಾ ಆಗಿಸುವಾಗ ಅಸೂಕ್ಷ್ಮಗೊಳಿಸಲಾಗುತ್ತದೆ. ಕಾರಣ ಆ ಬಗೆಗಿನ ಅಧ್ಯಯನ ಕೊರತೆ. ಆದರೆ ನಿರ್ದೇಶಕ ಬಿ.ಎಸ್.ಲಿಂಗದೇವರು ಮೂಲ ಕೃತಿಯನ್ನು ಓದಿ, ಮಂಗಳ ಮುಖಿಯರ ಕತೆ ಹೆಣೆದಿಲ್ಲ. ಅವಳೊಬ್ಬಳ ಲಿಂಗಾಂತರದ ಕತೆಯನ್ನು ಆಯಾ ಪರಿಸರ, ಸನ್ನಿವೇಶ, ಸಂದರ್ಭಗಳ ಮಧ್ಯೆಯೇ ಜೀವಿಸಲು ಬಿಟ್ಟಿದ್ದಾರೆ. - ವಿಕಾಸ್ ನೇಗಿಲೋಣಿ

3. ಮುಖವಾಡದ ಜಗದಲ್ಲಿ ಅರಳಿದ ಮಂಗಳಮುಖ 
ಮಂಗಳಮುಖಿಯರನ್ನು ಕಂಡರೆ ಮುಖ ತಿರುಗಿಸಿಕೊಳ್ಳುವ, ಅವರಿಗೆ ದುಡಿದು ತಿನ್ನಲೇನು ದಾಡಿಯೇ ಎಂದು ಕಿರುಚಿ ಅಬ್ಬರಿಸುವ ಆದರೆ ಅವರನ್ನು ಕೆಲಸ ಮಾಡಲು ಬಿಡಗೊಡದ, ಕೆಲಸ ನೀಡದ, ಸಮಾನತೆ ತೋರದ ಪೂರ್ವಾಗ್ರಪೀಡಿತ-ಆಷಾಢಭೂತಿ ಸಮಾಜದ ಟೀಕೆಯಷ್ಟೇ ಆಗದೆ, ಮಂಗಳಮುಖಿಯರ ಲೋಕದ ಆಗುಹೋಗುಗಳನ್ನು ಅವರ ಸಂಪ್ರದಾಯ ರೀತು ರಿವಾಜುಗಳನ್ನು ಕಟ್ಟಿಕೊಡುವ ಈ ಸಿನೆಮಾ ಭಾರತೀಯ ಚಿತ್ರರಂಗದಲ್ಲಿ ಹೊಸತು ಮತ್ತು ಈ ಘಟ್ಟದಲ್ಲಿ ಬಹು ಮುಖ್ಯ. ಮಂಗಳಮುಖಿಯರ ಜೊತೆಗೆ ನಮ್ಮ ವರ್ತನೆಯ ಬಗ್ಗೆ ಪ್ರಶ್ನೆಗಳನ್ನು ಎತ್ತುವ ಅವರು ಕೂಡ ಸಮಾಜದ ಭಾಗ ಎಂದು ಒಪ್ಪಿಕೊಳ್ಳುವಂತೆ ತುಸುವಾದರೂ ಪ್ರೇರೇಪಿಸುವ ಸಿನೆಮಾದ ನಿರ್ಮಾಪಕ ರವಿ ಗರಣಿ ಕೂಡ ಅಭಿನಂದಾರ್ಹರು. - ಗುರುಪ್ರಸಾದ್

4. ಕಾಡುವ ಅವನಲ್ಲ, ಅವಳು : ವಿಜಯ ಕರ್ನಾಟಕ
ರೈಲಿನಲ್ಲಿ ಪ್ರಯಾಣಿಸುವಾಗ ಚಪ್ಪಾಳೆ ತಟ್ಟುತ್ತ ಬರುವ ಆ ಅವರನ್ನು ಕಂಡು ಅಂದೊಮ್ಮೆ ಮುಖ ತಿರುಗಿಸಿದ್ದಿರಬಹುದು ನೀವು. ಸಿಗ್ನಲ್‌ನಲ್ಲಿ ಕಾರು ನಿಂತಾಗ ಅವರು ಬಂದರೆಂದರೆ ಮಿರರ್ ಏರಿಸಿರುತ್ತೀರಿ ನೀವು. ಆದರೆ ಈ ಸಿನಿಮಾ ನೋಡಿದ ಬಳಿಕ ಹೀಗೆ ಮಾಡಲು ಮನಸ್ಸು ಬಾರದು. ಮಂಗಳಮುಖಿಯರೆಂದರೆ ಮೈಗೂ, ಮನಸ್ಸಿಗೂ ಅಸ್ಪೃಶ್ಯರೆಂದು ದೂರವಿಟ್ಟಿದ್ದ ಅಲಿಖಿತ ನಿಯಮಗಳು ಈ ಚಿತ್ರ ನೋಡಿ ಸಡಿಲಾಗುತ್ತವೆ. 'ನಾನು ಅವನಲ್ಲ, ಅವಳು' ಚಿತ್ರದ ಮೊದಲ ಗೆಲುವು ಇದು. - ವಿದ್ಯಾರಶ್ಮಿ ಪೆಲತ್ತಡ್ಕ

5. Naanu Avanalla Avalu - Bangalore Mirror 
Transgender characters are not uncommon in Kannada films. But as sidekicks or transgenders themselves doing bit roles, they are mostly at the receiving end of crude jokes. Director BS Lingadevaru has made a film that throws out all the stereotypes out of the window. The protagonist in his film Naanu Avanalla Avalu is a transgender, a bold attempt in itself, who attempts to become a complete transsexual battling the shock of his family, social stigma and the shortcomings of his own kind. - Shyam Prasad S

ಅವನಲ್ಲ...'ಅವಳಿಗೆ' ಮನಸೋತ ಕನ್ನಡ ಸಿನಿ ವಿಮರ್ಶಕರು

ನೋಡುಗರ ಪರಿಕಲ್ಪನೆ ಬದಲಾಯಿಸುವ 'ನಾನು ಅವನಲ್ಲ...ಅವಳು'


Fresh Kannada

Fresh Kannada

No comments:

Post a Comment

Google+ Followers

Powered by Blogger.