Breaking News
recent

ಕುವೆಂಪು ಮನೆಯಿಂದ ಪ್ರಶಸ್ತಿ ಕದ್ದ ಕಳ್ಳನ ಚಹರೆ ಪತ್ತೆ

ರಾಷ್ಟ್ರಕವಿ ಕುವೆಂಪು ಅವರ ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿ ನಿವಾಸದಲ್ಲಿ ಸೋಮವಾರ ರಾತ್ರಿ ಕಳ್ಳತನ ನಡೆದಿದ್ದು, ಕಳ್ಳತನ ನಡೆಸಿದ ವ್ಯಕ್ತಿಯ ಚಹರೆ ಸಿಸಿ ಕ್ಯಾಮೆರಾದಲ್ಲಿ ಪತ್ತೆಯಾಗಿದೆ.
ಕುವೆಂಪು ಮನೆಯಿಂದ ಪ್ರಶಸ್ತಿ ಕದ್ದ ಕಳ್ಳನ ಚಹರೆ ಪತ್ತೆ

ಕುವೆಂಪು ಅವರ ಕವಿಶೈಲ ಮನೆ ಹಿಂಬದಿಯಿಂದ ಏಣಿ ಮೇಲೆ ಬಂದು, ಹೆಂಚು ತೆಗೆದು ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಫಲಕಗಳನ್ನ ಕದ್ದು ಕಳ್ಳ ಪರಾರಿಯಾಗಿದ್ದಾನೆ. ಆದರೆ ಜ್ಞಾನಪೀಠ ಪ್ರಶಸ್ತಿ ಮಾತ್ರ ಭದ್ರವಾಗಿದೆ. ಮನೆಯಲ್ಲಿದ್ದ ಸಿಸಿ ಕ್ಯಾಮೆರಾಗಳಲ್ಲಿ ಕೆಲ ಕ್ಯಾಮೆರಾಗಳನ್ನು ಧ್ವಂಸಗೊಳಿಸಿದ್ದಾನೆ.
ಕಳವು ಪ್ರಕರಣದ ಹಿನ್ನೆಲೆಯಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ  ಗೃಹ ಸಚಿವ ಪರಮೇಶ್ವರ್ ಹೇಳಿದ್ದು, ಕಳವಾಗಿರುವ ವಸ್ತುಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಕೂಡಲೇ ಅವುಗಳನ್ನು ಪತ್ತೆ ಹಚ್ಚುವ ಕಾರ್ಯ ಆಗಬೇಕು ಬಿಜೆಪಿ ಶಾಸಕ ಸಿಟಿ ರವಿ ಹೇಳಿದ್ದಾರೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.