Breaking News
recent

ಸಂಗಾತಿಯೊಂದಿಗೆ ಬ್ರೇಕ್‍ಅಪ್ ಮಾಡಿಕೊಳ್ಳಲು ವೆಬ್‍ಸೈಟ್!

ಈಗಿನ ಕಾಲದಲ್ಲಿ ಎಲ್ಲವೂ ಅಂತರ್ಜಾಲ ಮಯವಾಗಿದೆ. ಜನ ತಮಗೆ ಬೇಕಾದ ಅಡುಗೆ, ಬಟ್ಟೆ ಎಲ್ಲವನ್ನು ಆನ್‍ಲೈನ್ ವೆಬ್‍ಸೈಟ್‍ನಲ್ಲಿ ಖರೀದಿಸುತ್ತಾರೆ. ಇದಲ್ಲದೇ ವಧು ವರರನ್ನು ಹುಡುಕಲು ವೆಬ್‍ಸೈಟ್‍ಗಳಿವೆ. ಇಷ್ಟು ಸಾಲದು ಎಂಬಂತೆ ಇದೀಗ ಸಂಗಾತಿಯೊಂದಿಗೆ ಬ್ರೇಕ್‍ಅಪ್ ಮಾಡಿಕೊಳ್ಳಲು ವೆಬ್‍ಸೈಟ್ ತೆರೆಯಲಾಗಿದೆ.
ಸಂಗಾತಿಯೊಂದಿಗೆ ಬ್ರೇಕ್‍ಅಪ್ ಮಾಡಿಕೊಳ್ಳಲು ವೆಬ್‍ಸೈಟ್!

ಹೌದು. ಕೇಳುವುದಕ್ಕೆ ಆಶ್ಚರ್ಯವೆನಿಸಬಹುದು. ಗೆಳತಿಗೆ ಅಥವಾ ಗೆಳೆಯನಿಗೆ ಗುಡ್‍ಬೈ ಹೇಳುವುದು ಅಷ್ಟು ಸುಲಭದ ಮಾತಲ್ಲ. ಇದೇ ಕಾರಣಕ್ಕೆ ಆನ್‍ಲೈನ್‍ನಲ್ಲಿ “ದಿ ಬ್ರೇಕ್‍ಅಪ್ ಶಾಪ್” ಎಂಬ ವೆಬ್‍ಸೈಟ್ ತೆರೆಯಲಾಗಿದ್ದು, ಈ ಮೂಲಕ ಸಂಗಾತಿಯೊಂದಿಗೆ ಸಂಬಂಧ ಕಡಿತಗೊಳಿಸಬಹುದಾಗಿದೆ. ಈ ವೆಬ್‍ಸೈಟ್ ಮಧ್ಯವರ್ತಿಯಾಗಿ ಕೆಲಸಮಾಡಲಿದ್ದು, ಬ್ರೇಕ್ ಸಂದೇಶವನ್ನು ತಿಳಿಸಬೇಕಾದವರಿಗೆ ತಿಳಿಸುತ್ತದೆ.

ಸದ್ಯ ಈ ಸೇವೆ ಕೆನಡಾದದಲ್ಲಿ ಆರಂಭವಾಗಿದ್ದು, ಭಾರತದಲ್ಲೂ ಈ ಸೇವೆ ಬಂದರೆ ಆಶ್ಚರ್ಯ ಪಡಬೇಕಿಲ್ಲ. ಈ ಸೇವೆ ಮೂರು ರೀತಿಯಲ್ಲಿದ್ದು, ಮೆಸೇಜ್, ಪತ್ರ ಹಾಗೂ ಕರೆಗಳ ಮೂಲಕ ಬ್ರೇಕ್‍ಅಪ್ ಮಾಡಿಕೊಳ್ಳಬಹುದು. ಮೆಸೇಜ್ ಸೇವೆಗೆ 10 ಡಾಲರ್(661 ರೂ.), ಕರೆ ಮಾಡಲು 29 ಡಾಲರ್(1917 ರೂ.) ಹಾಗೂ ಪತ್ರಕ್ಕೆ 30 ಡಾಲರ್ (1983 ರೂ.) ಶುಲ್ಕವನ್ನು ಕಂಪೆನಿ ನಿಗದಿಪಡಿಸಿದೆ. ಇದರ ಜೊತೆಗೆ ಬ್ರೇಕ್ ಅಪ್ ಮಡಿಕೊಳ್ಳಲು ಗಿಫ್ಟ್ ಕೂಡ ನೀಡಬಹುದು ಇದಕ್ಕೆ 80 ಡಾಲರ್(5292) ಶುಲ್ಕ ನೀಡಬೇಕಾಗುತ್ತದೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.