Breaking News
recent

ಜೈಲಲ್ಲಿ ಗೋಡೆಗೆ ತಲೆ ಚಚ್ಚಿಕೊಂಡ ಹುಚ್ಚ ವೆಂಕಟ್


ಜೈಲಲ್ಲಿ ಗೋಡೆಗೆ ತಲೆ ಚಚ್ಚಿಕೊಂಡ ಹುಚ್ಚ ವೆಂಕಟ್
ಜೈಲಲ್ಲಿ ಗೋಡೆಗೆ ತಲೆ ಚಚ್ಚಿಕೊಂಡ ಹುಚ್ಚ ವೆಂಕಟ್

  • ಕೋರ್ಟ್ ಜಾಮೀನು ಕೊಟ್ಟರೂ ಶ್ಯೂರಿಟಿ ಸಿಗದಿದ್ದಕ್ಕೆ ಬೇಸರ
  • ಆಸ್ಪತ್ರೆಗೆ ಕರೆದು ಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ ಜೈಲು ಸಿಬ್ಬಂದಿ
ಡಾ. ಬಿ.ಆರ್. ಅಂಬೇಡ್ಕರ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ಹುಚ್ಚ ವೆಂಕಟ್ ಸೋಮವಾರ ಬೆಳಗ್ಗೆ ಗೋಡೆಗೆ ತಲೆ ಚಚ್ಚಿಕೊಂಡು ಗಾಯ ಮಾಡಿಕೊಂಡಿದ್ದಾರೆ. ಕೋರ್ಟ್ ಜಾಮೀನು ಮಂಜೂರು ಮಾಡಿ ನಾಲ್ಕೈದು ದಿನ ಕಳೆದರೂ ಯಾರೊಬ್ಬರೂ ತನಗೆ ಶ್ಯೂರಿಟಿ ಕೊಡಲು ಮುಂದೆ ಬರುತ್ತಿಲ್ಲ ಎಂಬ ವಿಚಾರಕ್ಕೆ ಆಕ್ರೋಶ ವ್ಯಕ್ತಪಡಿಸಿ ಕೂಗಾಡುತ್ತಿದ್ದ ವೆಂಕಟ್ ಗೋಡೆಗೆ ತಲೆ ಚಚ್ಚಿಕೊಂಡಿದ್ದಾರೆ. ರಕ್ತ ಬರುತ್ತಿದ್ದನ್ನು ಗಮನಿಸಿದ ಜೈಲು ಸಿಬ್ಬಂದಿ ತಕ್ಷಣ ಸೆಲ್‌ನಿಂದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರು ಎಂದು ಜೈಲು ಮೂಲಗಳು ತಿಳಿಸಿವೆ. ಜೈಲಿನಿಂದ ಬಿಡಿಸಿಕೊಂಡು ಹೋಗಲು ಯಾರೂ ಬರುತ್ತಿಲ್ಲವೆಂದು ಭಾನುವಾರ ರಾತ್ರಿಯಿಂದ ವೆಂಕಟ್ ಕಿರುಚಾಡುತ್ತಿದ್ದರು. ಬೆಳಗ್ಗೆ ತಲೆ ಬಡಿದುಕೊಂಡು ಗಾಯ ಮಾಡಿಕೊಂಡಿದ್ದಾರೆ.

ಜೈಲು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಟ್ಟ ಬಳಿಕ ವಿಶೇಷ ಸೆಲ್‌ಗೆ ಸ್ಥಳಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.