Breaking News
recent

ಆನ್‍ಲೈನ್‍ನಲ್ಲಿ ಅತ್ತೆಯನ್ನು ಮಾರಾಟಕಿಟ್ಟ ಸೊಸೆ!

ನವದೆಹಲಿ: ಮಹಿಳೆಯೊಬ್ಬಳು ತನ್ನ ಅತ್ತೆಯ ದಿನನಿತ್ಯದ ವರ್ತನೆಯಿಂದ ಬೇಸತ್ತು ಆಕೆಯನ್ನು ಆನ್‍ಲೈನ್‍ನಲ್ಲಿ ಮಾರಾಟಕ್ಕಿಟ್ಟ ವಿಚಿತ್ರ ಪ್ರಸಂಗ ನಡೆದಿದೆ.

ಹೌದು, ಸದಾ ಏನಾದರೊಂದು ಗೊಣಗುತ್ತಾರೆ, ಯಾವ ಅಡುಗೆಯೂ ಇವರಿಗೆ ರುಚಿಸುವುದಿಲ್ಲ, ಎಷ್ಟೇ ಅಚ್ಚುಕಟ್ಟಾಗಿ ಕೆಲಸ ಮಾಡಿದರೂ ಇವರಿಗೆ ತೃಪ್ತಿಯಾಗುವುದಿಲ್ಲ, ಇವರ ಮಾತಂತೂ ಅಕ್ಕ ಪಕ್ಕದ ಮನೆಯವರನ್ನೂ ಸಾಯಿಸುವಂತಿದೆ, ಎಂಬ ಕಾರಣಗಳನ್ನು ನೀಡಿ ತನ್ನ ಗೈಯ್ಯಾಳಿ ಅತ್ತೆಯನ್ನು ಸೊಸೆ ಒಬ್ಬಳು ಫೈದಾ ಡಾಟ್ ಕಾಂ ಹೆಸರಿನ ಆನ್‍ಲೈನ್ ತಾಣದಲ್ಲಿ ಮಾರಾಟಕ್ಕೆ ಇಟ್ಟಿದ್ದಾಳೆ. ಅಷ್ಟೇ ಅಲ್ಲದೇ ನೀವು ಆತ್ತೆಯನ್ನು ಖರೀದಿಸಿ ನನಗೆ ಆತ್ಮವಿಶ್ವಾಸ ವೃದ್ಧಿಸುವ ಪುಸ್ತಕವನ್ನು ನೀಡಿ ಎಂದು ಆಕೆ ಬರೆದುಕೊಂಡಿದ್ದಾಳೆ.
“ಮದರ್-ಇನ್-ಲಾ ಇನ್ ಗುಡ್ ಕಂಡಿಷನ್” ಎಂಬ ಶಿರ್ಷಿಕೆಯನ್ನು ನೀಡಿ ಸೊಸೆ ತನ್ನ ಅತ್ತೆಯ ಚಿತ್ರವನ್ನು ಪೋಸ್ಟ್ ಮಾಡಿದ್ದಳು. ಇಂತಹ ವಿಚಿತ್ರ ಪೋಸ್ಟ್‍ನ್ನು ನೋಡಿದ ಫೈದಾ ಸಂಸ್ಥೆಯವರು ಕೂಡಲೇ ಆ ಪೋಸ್ಟನ್ನು ತಮ್ಮ ಸೈಟ್‍ನಿಂದ ತೆಗೆದು ಹಾಕಿದ್ದಾರೆ.
ಈ ರೀತಿ ವೈಯಕ್ತಿಕ ದ್ವೇಷ ಮತ್ತು ಕೌಟುಂಬಿಕ ಕಲಹಗಳಿಗೆ ಆನ್‍ಲೈನ್‍ನಲ್ಲಿ ಪ್ರತೀಕಾರ ತೀರಿಸಿಕೊಂಡಿರುವ ಘಟನೆ ಇದೇ ಮೊದಲೇನಲ್ಲ. ಈ ಹಿಂದೆ ಕ್ವಿಕ್ಕರ್‍ನಲ್ಲಿ ಮಹಿಳೆಯೊಬ್ಬಳು ತನ್ನ ಗಂಡನ ಭಾವಚಿತ್ರವನ್ನು ಸಾಕುಪ್ರಾಣಿಗಳ ವಿಭಾಗದಲ್ಲಿ ಸೇರಿಸಿ ಮಾರಾಟಕ್ಕಿಟ್ಟಿದ್ದಳು. ಅಲ್ಲದೆ ಚೆನ್ನೈನ ಮಹಿಳೆಯೊಬ್ಬಳು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಬಳಿಕ ತನ್ನ ಗಂಡ ಮತ್ತು ಆತನ ಅಮ್ಮನ ಚಿತ್ರವನ್ನು ಸಾಮಾಜಿಕ ಜಾಲತಾಣವೊಂದರಲ್ಲಿ ಹಾಕಿ ಅವಮಾನಿಸಿದ್ದಳು. ಚಿತ್ರದಲ್ಲಿ ಆಕೆಯ ಗಂಡ, ಆತನ ತಾಯಿ ಮತ್ತು ತಂಗಿಯೊಂದಿಗೆ ರಾಜಿಯಾಗುತ್ತಿರುವಂತೆ ಎಡಿಟ್ ಮಾಡಲಾಗಿತ್ತು. ಇದಕ್ಕಾಗಿ ಆಕೆ ಮತ್ತು ಆಕೆಯ ತಂದೆಯನ್ನು ಚೆನ್ನೈ ಪೊಲೀಸರು ಬಂಧಿಸಿದ್ದರು.
Fresh Kannada

Fresh Kannada

No comments:

Post a Comment

Google+ Followers

Powered by Blogger.