Breaking News
recent

ದಲೇರ್ ಮಹಿಂದಿ ನಿರ್ಮಾಣದಲ್ಲಿ ಕನ್ನಡ ಚಿತ್ರ 'ಪವರ್ ಆಫ್ ಡ್ಯಾನ್ಸ್'

ಪಾಪ್ ಗಾಯಕ ದಲೇರ್ ಮಹಿಂದಿ ಕನ್ನಡ ಚಿತ್ರ ನಿರ್ಮಾಣ ಮಾಡುತ್ತಿರುವ ಸುದ್ದಿಯನ್ನ ನಿಮ್ಮ 'ಫಿಲ್ಮಿಬೀಟ್ ಕನ್ನಡ' ವರದಿ ಮಾಡಿತ್ತು. ಇದೇ ಚಿತ್ರಕ್ಕೆ ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಆಕ್ಷನ್ ಕಟ್ ಹೇಳುತ್ತಿದ್ದಾರೆ ಅಂತ ನಾವೇ ನಿಮಗೆ ಹೇಳಿದ್ವಿ.
ದಲೇರ್ ಮಹಿಂದಿ ನಿರ್ಮಾಣದಲ್ಲಿ ಕನ್ನಡ ಚಿತ್ರ 'ಪವರ್ ಆಫ್ ಡ್ಯಾನ್ಸ್'

ಇದೇ ಚಿತ್ರದ ಕುರಿತಾಗಿ ಈಗ ಹೊರಬಿದ್ದಿರುವ ತಾಜಾ ಸುದ್ದಿ ಏನಂದ್ರೆ, ದಲೇರ್ ಮಹಿಂದಿ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಕನ್ನಡ ಚಿತ್ರಕ್ಕೆ 'ಪವರ್ ಆಫ್ ಡ್ಯಾನ್ಸ್' ಅಂತ ಟೈಟಲ್ ಇಡಲಾಗಿದೆ.

ಶೀರ್ಷಿಕೆ ಸೂಚಿಸುವಂತೆ ಇದು ಡ್ಯಾನ್ಸ್ ಬೇಸ್ಡ್ ಸಿನಿಮಾ. ಹಾಲಿವುಡ್ ನ 'ಬಿಲ್ಲಿ ಎಲಿಯಟ್' ಚಿತ್ರದ ಸ್ಪೂರ್ಥಿ ಪಡೆದು 'ಪವರ್ ಆಫ್ ಡ್ಯಾನ್ಸ್' ಕಥೆ ರಚಿಸಲಾಗಿದೆ. ಅಷ್ಟಕ್ಕೂ ಈ ಪ್ಲಾನ್ ಯಾರದ್ದು ಅಂದ್ರೆ ದಲೇರ್ ಮಹಿಂದಿ ಆಪ್ತ ಮಿತ್ರ ಸಲಭ್ ಕುಮಾರ್ ರದ್ದು.

'ಪವರ್ ಆಫ್ ಡ್ಯಾನ್ಸ್' ಚಿತ್ರಕ್ಕೆ ದಲೇರ್ ಮಹಿಂದಿ ಜೊತೆ ಸಲಭ್ ಕುಮಾರ್ ಕೂಡ ಬಂಡವಾಳ ಹಾಕುತ್ತಿದ್ದಾರೆ. ಹಾಗ್ನೋಡಿದ್ರೆ, ದಲೇರ್ ಮಹಿಂದಿ ಕನ್ನಡ ಚಿತ್ರ ನಿರ್ಮಾಣ ಮಾಡುತ್ತಿರುವುದಕ್ಕೆ ಸಲಭ್ ಕುಮಾರ್ ಕಾರಣ. ದೇವನಹಳ್ಳಿ ಬಳಿಯ ಜೇಡ್ ಗಾರ್ಡನ್ ರೆಸಾರ್ಟ್ ನಲ್ಲಿ ಮನೆ ಕೊಂಡುಕೊಂಡಿರುವ ಸಲಭ್ ಗೆ ಕನ್ನಡ ಚಿತ್ರ ನಿರ್ಮಾಣ ಮಾಡಬೇಕೆಂಬ ಆಸೆ.

'ಬಿಲ್ಲಿ ಎಲಿಯಟ್' ಚಿತ್ರ ಅವರಿಗೆ ಇಷ್ಟವಾದ ಕಾರಣ, ಅದೇ ತರಹದ ಸಿನಿಮಾ ಮಾಡುವ ಇಚ್ಛೆ ಇತ್ತು. ಈ ಬಗ್ಗೆ ಮೊದಲು 'ಲೂಸಿಯಾ' ಪವನ್ ಬಳಿ ಚರ್ಚೆ ಕೂಡ ಮಾಡಿದ್ದರಂತೆ. ಆದ್ರೆ, ಪವನ್ ಬಿಜಿಯಿದ್ದ ಕಾರಣ, ಜ್ಯಾಕ್ ಮಂಜು ಮುಖಾಂತರ ಇಮ್ರಾನ್ ಸರ್ದಾರಿಯಾ ಪರಿಚಯವಾಗಿ 'ಪವರ್ ಆಫ್ ಡ್ಯಾನ್ಸ್' ಸಿನಿಮಾ ಕೈಗೆತ್ತಿಕೊಂಡಿದ್ದಾರೆ.

ಇದೇ ವಿಷಯವನ್ನ ದಲೇರ್ ಮಹಿಂದಿ ಬಳಿ ಪ್ರಸ್ತಾಪ ಮಾಡಿದಾಗ ಅವರೂ ನಿರ್ಮಾಣ ಮಾಡುವುದಕ್ಕೆ ಮುಂದಾದರಂತೆ. ಅಲ್ಲಿಂದ, 'ಪವರ್ ಆಫ್ ಡ್ಯಾನ್ಸ್' ಪ್ರಾಜೆಕ್ಟ್ ಟೇಕ್ ಆಫ್ ಆಗಿದೆ.

ಅಂದ್ಹಾಗೆ, ವಿ.ಹರಿಕೃಷ್ಣ ಈ ಚಿತ್ರದ ಸಂಗೀತ ನಿರ್ದೇಶಕ. ಮೂರು ಹಾಡುಗಳಿಗೆ ದಲೇರ್ ಮಹಿಂದಿ ಸಂಗೀತ ನೀಡಲಿದ್ದಾರೆ. ಚಿತ್ರದ ಪ್ರಮುಖ ಪಾತ್ರಕ್ಕಾಗಿ ಈಗ ಹೊಸ ಮುಖಗಳ ಹುಡುಕಾಟ ನಡೆಯುತ್ತಿದೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.