Breaking News
recent

ಟಾಲಿವುಡ್ ಕ್ಷೇತ್ರದಲ್ಲಿ ತಲ್ಲಣ ಸೃಷ್ಟಿಸಿದ ಸಲಿಂಗ ಪ್ರೇಮಿಗಳ 'ಅಫೇರ್'

ಕೆಲವು ಕಾಲಗಳ ಹಿಂದೆ ಲಿಪ್ ಲಾಕ್ ಸೀನ್ ಅಂದ್ರೆ, ಅದು ಹಾಲಿವುಡ್ ಸಿನಿಮಾಗಳಲ್ಲಿ ಮಾತ್ರ ಅನ್ನೋ ಭಾವನೆ ಸಾಮಾನ್ಯವಾಗಿ ಎಲ್ಲರಿಗೂ ಇತ್ತು.
ಟಾಲಿವುಡ್ ಕ್ಷೇತ್ರದಲ್ಲಿ ತಲ್ಲಣ ಸೃಷ್ಟಿಸಿದ ಸಲಿಂಗ ಪ್ರೇಮಿಗಳ 'ಅಫೇರ್'

ಆದರೆ ಅದೇ ಹಾಲಿವುಡ್ ಸಿನಿಮಾ ಕ್ಷೇತ್ರಗಳನ್ನು ಮೀರಿಸುವಂತೆ, ನಾವೇನು ಯಾರಿಗೂ ಕಡಿಮೆ ಇಲ್ಲ ಅಂತ ಬಾಲಿವುಡ್ ಕ್ಷೇತ್ರಗಳು ಮುಂದುವರಿಯುತ್ತಿರುವುದು ಕಂಡರೆ ಹಾಲಿವುಡ್ ಯಾವ ಮಹಾ ಎಂಬ ಅನಿಸಿಕೆ ಸಾಮಾನ್ಯ ಪ್ರೇಕ್ಷಕನೊಬ್ಬನಿಗೆ ಅನಿಸದೇ ಇರಲ್ಲ.

ಅಂದಹಾಗೆ ಇತ್ತೀಚೆಗೆ ತೆರೆ ಕಂಡ, ಹಾಲಿವುಡ್ ನಟ ಜೇಮ್ಸ್ ಬಾಂಡ್ ಕಾಣಿಸಿಕೊಂಡಿದ್ದ, 'ಸ್ಪೆಕ್ಟರ್' ಸಿನಿಮಾದ ಲಿಪ್ ಲಾಕ್ ಸೀನ್ ಗೆ ಸೆನ್ಸಾರ್ ಕತ್ತರಿ ಹಾಕಿರೋ ವಿಷಯ ಗೊತ್ತಿದ್ದರೂ ಕೂಡ ಕಿರುತೆರೆ, ಬಾಲಿವುಡ್ ಸೇರಿದಂತೆ ದಕ್ಷಿಣ ಭಾರತದಲ್ಲಿ ಇದಕ್ಕೂ ಸ್ವಲ್ಪ ಮುಂದುವರಿದು, ಸಲಿಂಗ ಪ್ರೇಮದ ಕಥೆಯಾಧರಿತ ಸಿನಿಮಾಗಳನ್ನು ಮಾಡಲು ಯಾರು ಎದೆಗುಂದಿಲ್ಲ.

ಇದಕ್ಕೆಲ್ಲಾ ಉತ್ತಮ ನಿದರ್ಶನ ಅಂದರೆ, ಕಳೆದ ವಾರ ಎಂ.ಟಿ.ವಿ ಕಿರುತೆರೆಯಲ್ಲೇ ಮೊಟ್ಟ ಮೊದಲ ಬಾರಿಗೆ ಲೆಸ್ಬಿಯನ್ ಕಥಾವಸ್ತು ಇರುವ ಕಿರುಚಿತ್ರವನ್ನು 'ಬಿಗ್ ಎಫ್' ಸರಣಿಯಲ್ಲಿ ಪ್ರಸಾರ ಮಾಡಿತ್ತು.

'ಐ ಕಿಸ್ಡ್ ಎ ಗರ್ಲ್' ಎಂಬ ಈ ಕಂತು ಸದ್ದಿಲ್ಲದೇ ಪ್ರಸಾರವಾಗಿ ಸಖತ್ ಸುದ್ದಿ ಮಾಡಿತ್ತು. ಯೂಟ್ಯೂಬ್ ನಲ್ಲಿ ಲಭ್ಯವಿರುವ ಈ ವಿಡಿಯೋವನ್ನು ಈಗಾಗಲೇ 8.74 ಲಕ್ಷ ಬಾರಿ ವೀಕ್ಷಣೆಗೆ ಒಳಗಾಗಿರುವ ಈ ಸುಸಂದರ್ಭದಲ್ಲಿ, ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸಣ್ಣ ಕಂಪನವನ್ನುಂಟು ಮಾಡುವ ಘಟನೆಯೊಂದು ನಡೆದೇ ಹೋಗಿದೆ.

ಅದೇನಂತೀರಾ?, ಟಾಲಿವುಡ್ ನಿರ್ದೇಶಕ ಶ್ರೀರಂಜನ್ ಆಕ್ಷನ್-ಕಟ್ ನಲ್ಲಿ ಮೂಡಿಬರುತ್ತಿರುವ ಲೆಸ್ಬಿಯನ್ ಕಥಾಹಂದರವಿರುವ 'ಅಫೇರ್' ಎಂಬ ಹೆಸರಿನ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು, ಎಲ್ಲೆಡೆ ಸಖತ್ ಸುದ್ದಿ ಮಾಡುತ್ತಿದೆ. ಚಿತ್ರದ ಟ್ರೈಲರ್ ಇಲ್ಲಿದೆ ನೋಡಿ..

ಇಬ್ಬರು ಹುಡುಗಿಯರ ನಡುವೆ ನಡೆಯುವ ಸಲಿಂಗ ಪ್ರೇಮ ಹಾಗೂ ಅದರೊಂದಿಗೆ ಸಖತ್ ಥ್ರಿಲ್ಲರ್-ಮಿಸ್ಟರಿ ಕಥೆಯಾಧರಿತ 'ಅಫೇರ್' ಟಾಲಿವುಡ್ ಸಿನಿ ಕ್ಷೇತ್ರದಲ್ಲಿ ಭಾರಿ ಸುದ್ದಿ ಮಾಡುತ್ತಿದೆ.

ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರೊಂದಿಗೆ ಕೆಲಸ ಮಾಡಿರುವ ತುಮ್ಮಲಪಲ್ಲಿ ರಾಮ ಸತ್ಯನಾರಾಯಣ ಅವರು 'ಆಫೇರ್' ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಆದರೆ ಚಿತ್ರತಂಡಕ್ಕೆ ಎದುರಾಗಿರುವ ಹೊಸ ಸಮಸ್ಯೆ ಏನಪ್ಪಾ ಅಂದ್ರೆ, ಚಿತ್ರಕ್ಕೆ ಪ್ರಮಾಣಪತ್ರ ನೀಡಲು ಹಾಗೂ ಸಿನಿಮಾ ಬಿಡುಗಡೆ ಮಾಡಲು ಆಂಧ್ರದ ಸೆನ್ಸಾರ್ ಬೋರ್ಡ್ ಜಪ್ಪಯ್ಯ ಅಂದ್ರು, ಒಪ್ಪಿಕೊಳ್ಳುತ್ತಿಲ್ಲ.

ಇದರಿಂದ ಬೇಸರಗೊಂಡಿರುವ ಚಿತ್ರತಂಡ, ಇಡೀ ಸಿನಿಮಾವನ್ನು ಯೂಟ್ಯೂಬ್ ನಲ್ಲಿ ರಿಲೀಸ್ ಮಾಡಲು ನಿರ್ಧರಿಸಿದೆ. ಇದಕ್ಕೆ ಸೆನ್ಸಾರ್ ಮಂಡಳಿ ಯಾವ ರೀತಿ ಪ್ರತಿಕ್ರಿಯೆ ನೀಡುತ್ತದೆ ಎಂದು ಕಾದು ನೋಡಬೇಕಿದೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.