Breaking News
recent

'ರನ್ ಆಂಟನಿ' ಮೂಲಕ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ ಡಾ.ರಾಜ್ ಮೊಮ್ಮಗ.!

ನಟ ಸಾರ್ವಭೌಮ, ವರನಟ ಡಾ.ರಾಜ್ ಕುಮಾರ್ ಅವರ ಮೊಮ್ಮಗ ವಿನಯ್ ರಾಜ್ ಕುಮಾರ್ ಅವರು ಇದೀಗ 'ರನ್ ಆಂಟನಿ' ಅಂತ ಗಾಂಧಿನಗರಕ್ಕೆ ಓಡೋಡಿ ಬರುತ್ತಿದ್ದಾರೆ.
'ರನ್ ಆಂಟನಿ' ಮೂಲಕ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ ಡಾ.ರಾಜ್ ಮೊಮ್ಮಗ.!

ಹೌದು ನಟ ಕಮ್ ನಿರ್ಮಾಪಕ ರಾಘವೇಂದ್ರ ರಾಜ್ ಕುಮಾರ್ ಅವರ ಮಗ ವಿನಯ್ ರಾಜ್ ಕುಮಾರ್ ಅವರು 'ರನ್ ಆಂಟನಿ' ಎಂಬ ಹೊಸ ಪ್ರಾಜೆಕ್ಟ್ ಮೂಲಕ ಮತ್ತೆ ಗಾಂಧಿನಗರಕ್ಕೆ ವಾಪಸಾಗಿದ್ದಾರೆ.

ತಮ್ಮ ಚೊಚ್ಚಲ ಚಿತ್ರ 'ಸಿದ್ದಾರ್ಥ' ತೋಪೆದ್ದು ಹೋದ ನಂತರ ಇದೀಗ ವಿನಯ್ ರಾಜ್ ಕುಮಾರ್ ಅವರು ಹೆಚ್ಚು ಚಿಂತನ ಮಂಥನ ನಡೆಸಿದ್ದು, ತಮ್ಮ ತಂದೆ ರಾಘವೇಂದ್ರ ರಾಜ್ ಕುಮಾರ್ ಅವರೊಂದಿಗೆ ಕುಳಿತು ಸುಮಾರು 30 ಸ್ಕ್ರಿಪ್ಟ್ ಗಳನ್ನು ಪರಿಶೀಲಿಸಿ ಕೊನೆಗೆ 'ರನ್ ಆಂಟನಿ' ಯನ್ನು ಅಂತಿಮಗೊಳಿಸಿದ್ದಾರೆ.

ಇನ್ನು ಸಿನಿಮಾಕ್ಕೆ ಚೊಚ್ಚಲ ನಿರ್ದೇಶಕ ರಘು ಶಾಸ್ತ್ರಿ ಆಕ್ಷನ್-ಕಟ್ ಹೇಳಲಿದ್ದು, ತಮ್ಮ ಸ್ವಂತ ನಿರ್ಮಾಣ ಸಂಸ್ಥೆಯಾದ ವಜ್ರೇಶ್ವರಿ ಕಂಬೈನ್ಸ್ ಚಿತ್ರ ನಿರ್ಮಾಣದ ಜವಾಬ್ದಾರಿ ಹೊತ್ತುಕೊಳ್ಳಲಿದೆ.

ಇದಕ್ಕೂ ಮೊದಲು ನಿರ್ದೇಶಕ ಪ್ರೇಮ್ ಅವರ ಸಿನಿಮಾದಲ್ಲಿ ವಿನಯ್ ರಾಜ್ ಕುಮಾರ್ ಅವರು ಕಾಣಿಸಿಕೊಳ್ಳುತ್ತಾರೆ ಎಂದು ಸುದ್ದಿಯಾಗಿದ್ದರೂ ಕೂಡ ಇದೀಗ ಆ ಯೋಜನೆ ರದ್ದಾಗಿದೆ ಎಂದು ತಿಳಿದು ಬಂದಿದೆ.

'ಚಿತ್ರೀಕರಣಕ್ಕೆ ಇನ್ನು ಅಧಿಕೃತ ದಿನಾಂಕ ನಿಗದಿ ಪಡಿಸಬೇಕಾಗಿದ್ದು, ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಅವರು ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಲಿದ್ದಾರೆ. ಅಲ್ಲದೇ ಯುವ ತಂತ್ರಜ್ಞರನ್ನು ಆಯ್ಕೆ ಮಾಡಲು ನಿರ್ದೇಶಕರಿಗೆ ಮುಕ್ತ ಅವಕಾಶ ನೀಡಿದ್ದೇವೆ. ಇನ್ನೆರಡು ದಿನಗಳಲ್ಲಿ ಅಂತಿಮವಾಗಲಿದೆ' ಎಂದು ನಾಯಕ ವಿನಯ್ ರಾಜ್ ಕುಮಾರ್ ತಿಳಿಸಿದ್ದಾರೆ.

ನವೆಂಬರ್ ಅಂತ್ಯಕ್ಕೆ ಅಥವಾ ಡಿಸೆಂಬರ್ ತಿಂಗಳಿನಲ್ಲಿ ಚಿತ್ರೀಕರಣ ಆರಂಭವಾಗಲಿದ್ದು, ಏಪ್ರಿಲ್ ತಿಂಗಳಿನಲ್ಲಿ ಸಿನಿಮಾ ತೆರೆ ಕಾಣಲಿದೆಯಂತೆ.

ನಟ ವಿನಯ್ ರಾಜ್ ಕುಮಾರ್ ಅವರೇ ಈ ಸ್ಕ್ರಿಪ್ಟ್ ಅಂತಿಮಗೊಳಿಸಿದ್ದು, ಎನ್ನುವ ರಾಘವೇಂದ್ರ ರಾಜ್ ಕುಮಾರ್ ಅವರು 'ಅವನಿಗೆ ಸ್ಕ್ರಿಪ್ಟ್ ಇಷ್ಟವಾಯಿತು ಆದ್ದರಿಂದ ನಿರ್ದೇಶಕರ ಜೊತೆ ಮಾತನಾಡಲು ತಿಳಿಸಿದ. ಸ್ಕ್ರಿಪ್ಟ್ ಅವನಿಗೆ ಬಹಳ ಹಿಡಿಸಿದೆ, ಹಾಗೆಯೇ ಶೀರ್ಷಿಕೆ ಕೂಡ' ಎಂದಿದ್ದಾರೆ.

ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಅವರೊಂದಿಗೆ ಕೆಲಸ ಮಾಡಿರುವ ರಘು ಶಾಸ್ತ್ರಿ ಅವರು 'ಚೊಚ್ಚಲ ಸಿನಿಮಾವನ್ನು ಕನ್ನಡದಲ್ಲಿ ಮಾಡುತ್ತಿರುವುದಕ್ಕೆ ಸಂತಸ ತಂದಿದೆ' ಎಂದಿದ್ದಾರೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.