Breaking News
recent

ಹುಚ್ಚ ವೆಂಕಟ್ ವಿರುದ್ಧ ಕಿಚ್ಚನ ಅಭಿಮಾನಿಗಳ ಪ್ರತಿಭಟನೆ

ದಾವಣಗೆರೆ/ಬೆಂಗಳೂರು: ಬಿಗ್ ಬಾಸ್ ಹೌಸ್‍ನಿಂದ ಔಟಾಗಿ ಮನೆ ತಲುಪಿದ ಬಳಿಕ ನಟ ಕಿಚ್ಚ ಸುದೀಪ್ ಅವರನ್ನು ಏಕವಚನದಲ್ಲಿ ಅವಹೇಳನ ಮಾಡಿದ್ದಕ್ಕೆ ಕಿಚ್ಚ ಸುದೀಪ್ ಅಭಿಮಾನಿಗಳು ಸಿಟ್ಟಾಗಿದ್ದಾರೆ.
ಹುಚ್ಚ ವೆಂಕಟ್ ವಿರುದ್ಧ ಕಿಚ್ಚನ ಅಭಿಮಾನಿಗಳ ಪ್ರತಿಭಟನೆ

ದಾವಣಗೆರೆಯಲ್ಲಿ ಹುಚ್ಚ ವೆಂಕಟ್ ವಿರುದ್ಧ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸೇನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಜಯದೇವ ವೃತ್ತದಲ್ಲಿ ಹುಚ್ಚ ವೆಂಕಟ್ ಪ್ರತಿಕೃತಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು. ಹುಚ್ಚ ವೆಂಕಟ್ ಸುದೀಪ್ ಅವರನ್ನು ನಿಂದಿಸಿದ್ದಾರೆ. ಹೀಗಾಗಿ ಹುಚ್ಚ ವೆಂಕಟ್ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ಬೆಂಗಳೂರಲ್ಲಿ ಧರಣಿ: ನಟ ಸುದೀಪ್‍ಗೆ ಹುಚ್ಚ ವೆಂಕಟ್ ಅವಹೇಳನ ಮಾಡಿದ್ದನ್ನು ವಿರೋಧಿಸಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ ಪ್ರತಿಭಟನೆ ನಡೆಸಿದರು. ಸುದೀಪ್ ಅಭಿಮಾನಿಗಳು ಶಾಂತಿನಗರದಲ್ಲಿ ಹುಚ್ಚ ವೆಂಕಟ್‍ಗೆ ಧಿಕ್ಕಾರ ಕೂಗಿದರು. ಈ ವೇಳೆ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ನಿಯಂತ್ರಿಸಿದರು.
Fresh Kannada

Fresh Kannada

No comments:

Post a Comment

Google+ Followers

Powered by Blogger.