Breaking News
recent

ದಕ್ಷಿಣ ಭಾರತದ ಅತ್ಯಂತ ದುಬಾರಿ ನಟಿ ಈಕೆಯೇ.!

ಹಳೆ ಪ್ರೇಮ ಕಹಾನಿಗೆ ಫುಲ್ ಸ್ಟಾಪ್ ಇಟ್ಟು, ಮರಳಿ ಬಣ್ಣ ಹಚ್ಚುವುದಕ್ಕೆ ಶುರುಮಾಡಿದ ನಯನತಾರಾ ಈಗ ಕಾಲಿವುಡ್ ನ ಬಹುಬೇಡಿಕೆಯ ನಟಿ.
ದಕ್ಷಿಣ ಭಾರತದ ಅತ್ಯಂತ ದುಬಾರಿ ನಟಿ ಈಕೆಯೇ.!

'ರಾಜಾ ರಾಣಿ', 'ಆರಂಭಂ', 'ಅನಾಮಿಕ', 'ಮಾಸ್', 'ಥನಿ ಓರುವನ್' ಸೇರಿದಂತೆ ಸಾಲು ಸಾಲು ಹಿಟ್ ಸಿನಿಮಾಗಳನ್ನ ನೀಡುತ್ತಿರುವ ನಯನತಾರಾ ಹಿರಿಮೆಗೆ ಇದೀಗ ಮತ್ತೊಂದು ಗರಿ ಸಿಕ್ಕಿದೆ.

ವಿಕ್ರಂ ಅಭಿನಯಿಸಲಿರುವ ಹೊಸ ಸಿನಿಮಾಗೆ ನಾಯಕಿಯಾಗಿ ಸೆಲೆಕ್ಟ್ ಆಗಿರುವ ನಯನತಾರಾ ಪಡೆದಿರುವ ಸಂಭಾವನೆ ಎಷ್ಟು ಗೊತ್ತಾ? ಬರೋಬ್ಬರಿ 3 ಕೋಟಿ.!

ವರದಿಗಳ ಪ್ರಕಾರ, ತಮ್ಮ ಮುಂದಿನ ಚಿತ್ರಕ್ಕೆ 3 ಕೋಟಿ ರೂಪಾಯಿ ಸಂಭಾವನೆ ಪಡೆಯುವ ಮೂಲಕ ತ್ರಿಷಾ ಕೃಷ್ಣನ್ ಮತ್ತು ಅನುಶ್ಕಾ ಶೆಟ್ಟಿಯನ್ನ ಹಿಂದಕ್ಕೆ ತಳ್ಳಿ 'ದಕ್ಷಿಣ ಭಾರತದ ಅತ್ಯಂತ ದುಬಾರಿ ನಟಿ'ಯಾಗಿದ್ದಾರೆ ನಯನತಾರಾ.

ವಿಕ್ರಂ ಜೊತೆಗಿನ ಸಿನಿಮಾದೊಂದಿಗೆ ನಯನತಾರಾ ಕೈಯಲ್ಲಿನ್ನೂ ಮೂರ್ನಾಲ್ಕು ಚಿತ್ರಗಳಿವೆ. ಸದ್ಯಕ್ಕೆ ರೋಮ್ ನಲ್ಲಿ ಹಾಲಿಡೇ ಎಂಜಾಯ್ ಮಾಡುತ್ತಿರುವ ನಯನತಾರಾ ಭಾರತಕ್ಕೆ ವಾಪಸ್ ಆದ ತಕ್ಷಣ ಶೂಟಿಂಗ್ ಗೆ ಹಾಜರಾಗುತ್ತಾರೆ. (ಏಜೆನ್ಸೀಸ್)
Fresh Kannada

Fresh Kannada

No comments:

Post a Comment

Google+ Followers

Powered by Blogger.