Breaking News
recent

ಗಿರೀಶ್ ಕಾರ್ನಾಡ್ ಗೆ ಜೀವ ಬೆದರಿಕೆ ಹಾಕಿದ ಹುಚ್ಚ ವೆಂಕಟ್

ಬೆಂಗಳೂರು, ನ.15: ರಿಯಾಲಿಟಿ ಶೋ ಬಿಗ್ ಬಾಸ್ ನಲ್ಲಿ ಗಾಯಕ ರವಿ ಮುರೂರ್ ಅವರಿಗೆ ಗೂಸಾ ಕೊಟ್ಟು ಬಲವಂತವಾಗಿ ಮನೆಯಿಂದ ಹೊರ ಬಿದ್ದಿರುವ ಹುಚ್ಚ ವೆಂಕಟ್ ಅವರು ತಮ್ಮ ಅಕ್ಕನ ಮನೆ ಸೇರಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ನೀಡಿದ ಮೊದಲ ಪ್ರತಿಕ್ರಿಯೆಯಲ್ಲೇ ಸಾಹಿತಿ ಗಿರೀಶ್ ಕಾರ್ನಾಡ್ ವಿರುದ್ಧ ಹರಿಹಾಯ್ದಿದ್ದಾರೆ.
ಗಿರೀಶ್ ಕಾರ್ನಾಡ್ ಗೆ ಜೀವ ಬೆದರಿಕೆ ಹಾಕಿದ ಹುಚ್ಚ ವೆಂಕಟ್

ಗಿರೀಶ್ ಕಾರ್ನಾಡ್ ಅವರು ಟಿಪ್ಪು ಬಗ್ಗೆ ಮಾತನಾಡಿದ್ದಾರೆ. ಅವರಿಗೆ ಟಿಪ್ಪು ಎಂದರೆ ಯಾರು ಗೊತ್ತಾ? ಇತಿಹಾಸ ಗೊತ್ತಾ ಕಾರ್ನಾಡ್, ಟಿಪ್ಪು ಹಿಂದೂಗಳ ವಿರೋಧಿಯಾಗಿದ್ದ. ಅವನ ಹೆಸರು ಇಂಟರ್ ನ್ಯಾಷನಲ್ ಏರ್ ಪೋರ್ಟ್ ಗೆ ಇಡಬೇಕಾ? ನನ್ ಎಕ್ಕಡ...
ಗೌಡರ ತಂಟೆಗ್ ಬಂದರೆ ಸಾಯಿಸ್ ಬಿಡ್ತೀನಿ. ಕಾರ್ನಾಡ್ ಹೋಗಿ ಸಾವಿರ ಜನ ಸಾಯಿಸ್ ಬಿಡಿ. ಏನು ಎಲ್ಲರನ್ನು ಜೈಲಿಗೆ ಹಾಕ್ತಾರಾ?


ಕರ್ನಾಟಕ ಯಾವತ್ತಿದ್ರೂ ಕನ್ನಡಿಗರಿಗೆ, ಬೇರೆ ಯಾರು ಬಂದರೂ ಅಷ್ಟೇ. ಇದು ನನ್ನ ಆರ್ಡರ್..ರಿಕ್ವೆಸ್ಟ್ ಅಲ್ಲ, ನಾನು ಈಗ ಹೊರಗಡೆ ಬಂದಿದ್ದೀನಿ ಹುಷಾರ್ ಎಂದು ವೆಂಕಟ್ ಗುಡುಗಿದ್ದಾರೆ.

ನವೆಂಬರ್ 10ರ ಮಂಗಳವಾರ ಬೆಂಗಳೂರಿನಲ್ಲಿ ಕರ್ನಾಟಕ ಸರ್ಕಾರದ ವತಿಯಿಂದ ಆಯೋಜಿಸಿದ್ದ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಗಿರೀಶ್ ಕಾರ್ನಾಡ್ ಅವರು, 'ಕೆಂಪೇಗೌಡರು ಬೆಂಗಳೂರನ್ನು ಕಟ್ಟಿರಬಹುದು. ಆದರೆ, ಸ್ವಾತಂತ್ರ್ಯ ಹೋರಾಟಗಾರರಾಗಿರಲಿಲ್ಲ. ಟಿಪ್ಪು ಸ್ವಾತಂತ್ರ್ಯ ಹೋರಾಟಗಾರ. ಆದ್ದರಿಂದ ವಿಮಾನ ನಿಲ್ದಾಣಕ್ಕೆ ಅವರ ಹೆಸರಿಡಬೇಕು' ಎಂದು ಹೇಳಿದ್ದರು.

ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರಿಡಲು ಒತ್ತಾಯ ಮಾಡಿದರೆ, ಎಂ.ಎಂ.ಕಲಬುರ್ಗಿ ಅವರಂತೆಯೇ ಸಾವು ಕಾಣ ಬೇಕಾಗುತ್ತದೆ ಎಂದು ಟ್ವೀಟ್ ಮೂಲಕ ಬೆದರಿಕೆ ಕಂಡು ಬಂದಿತ್ತು. ಇದಾದ ಬಳಿಕ ಇಂಗ್ಲೀಷ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಕಾರ್ನಾಡ್ ಅವರು 'ತಾವು ದುರುದ್ದೇಶದಿಂದ ಈ ಹೇಳಿಕೆ ನೀಡಿರಲಿಲ್ಲ. ನಾನು ನೀಡಿರುವ ಹೇಳಿಕೆಯಿಂದಾಗಿ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ' ಎಂದಿದ್ದರು.
Fresh Kannada

Fresh Kannada

No comments:

Post a Comment

Google+ Followers

Powered by Blogger.