Breaking News
recent

ಆಕರ್ಷಕ ಲುಕ್ ನಲ್ಲಿ ಮಿಂಚುತ್ತಿರುವ ಸ್ಯಾಂಡಲ್ ವುಡ್ ಕ್ವೀನ್.!

ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅವರು ಬಹಳ ದಿನಗಳ ನಂತರ ಮತ್ತೆ ತಮ್ಮ ಫೇಸ್ ಬುಕ್ ಕಡೆ ಮುಖ ಮಾಡಿದ್ದಾರೆ. ಈಗಾಗಲೇ ನಿಮಗೆ ತಿಳಿದಿರುವಂತೆ ನಟಿ ರಮ್ಯಾ ಅವರು ಪ್ರಾಣಿ ಪ್ರೀಯೆ ಕೂಡ ಹೌದು.
ಆಕರ್ಷಕ ಲುಕ್ ನಲ್ಲಿ ಮಿಂಚುತ್ತಿರುವ ಸ್ಯಾಂಡಲ್ ವುಡ್ ಕ್ವೀನ್.!

ಮಾತ್ರವಲ್ಲದೇ ರಾಕಿಂಗ್ ಸ್ಟಾರ್ ಯಶ್ ಅವರೊಂದಿಗೆ ಲಕ್ಕಿ ಚಿತ್ರದಲ್ಲಿ ನಟಿಸಿದ್ದ ರಮ್ಯಾ ಅವರು ನಾಯಿ ಪ್ರೇಮಿಯಾಗಿ ಮಿಂಚಿದ್ದರು.

ಇನ್ನು ನಟಿ ರಮ್ಯಾ ಮೇಡಂ ಅವರು ಮತ್ತೆ ಫೇಸ್ ಬುಕ್ಕಿನಲ್ಲಿ ಕಾಣಿಸಿಕೊಂಡಿದ್ದಕ್ಕೆ, ರಮ್ಯಾ ಅವರ ಅಭಿಮಾನಿಗಳು ಬಹಳ ಖುಷಿ ವ್ಯಕ್ತಪಡಿಸಿದ್ದಾರೆ. ಇನ್ನಷ್ಟು ತೆಳ್ಳಗೆ-ಬೆಳ್ಳಗಾಗಿರುವ ನಟಿ ರಮ್ಯಾ ಅವರು ತಮ್ಮ ಸುಂದರ ಫೊಟೋಗಳನ್ನು ಫೇಸ್ ಬುಕ್ಕಿಗೆ ಅಪ್ ಲೋಡ್ ಮಾಡಿದ್ದಾರೆ.

'ಎಲ್ಲರಿಗೂ ಧನ್ಯವಾದ ನಿಮ್ಮ ವಂಡರ್ ಫುಲ್ ಕಮೆಂಟ್ ಗಳಿಗೆ ಹಾಗೂ ನಿಮ್ಮೆಲ್ಲರ ಪ್ರೀತಿ ಅಭಿಮಾನಕ್ಕೆ ನಾನು ಚಿರಋಣಿ ಎಂದು ತಮ್ಮ ಫೇಸ್ ಬುಕ್ಕಿನಲ್ಲಿ ಸಂಭ್ರಮ ವ್ಯಕ್ತಪಡಿಸಿದ್ದಾರೆ.

ಇನ್ನು ರಮ್ಯಾ ಅವರು ತುಂಬಾ ದಿನಗಳ ನಂತರ ತಮ್ಮ ಗಾರ್ಜಿಯಸ್ ಲುಕ್ ನಲ್ಲಿ ಮಿಂಚಿರುವ, ಪೊಟೋಗಳನ್ನು ಫೇಸ್ ಬುಕ್ಕಿಗೆ ಅಪ್ ಲೋಡ್ ಮಾಡಿದ್ದು, ಅಭಿಮಾನಿಗಳು ಲೈಕ್ ಹಾಗೂ ಶೇರ್ ಗಳ ಸುರಿಮಳೆಯೇ ಸುರಿಸಿದ್ದಾರೆ. ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅವರ ಬ್ಯೂಟಿಫುಲ್ ಫೋಟೋ ಮತ್ತು ಕೆಳಗಿನ ಅಪ್ಡೇಟ್ ಓದಿ.....

1. ಕ್ವೀನ್ ರಮ್ಯಾ ಅವರು ಪ್ರೀತಿಯ ನಾಯಿಯೊಂದಿಗೆ
ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅವರು ತಮ್ಮ ಪ್ರೀತಿಯ ನಾಯಿ ಮೆಸ್ಸಿಯೊಂದಿಗೆ ಸಖತ್ ಫೊಟೋ ಕ್ಲಿಕ್ಕಿಸಿಕೊಂಡು ಫೇಸ್ ಬುಕ್ಕಿಗೆ ಅಪ್ ಲೋಡ್ ಮಾಡಿದ್ದಾರೆ. ವಿಶೇಷ ಏನಪ್ಪಾ ಅಂದ್ರೆ, ಈ ಫೊಟೋ ಫೇಸ್ ಬುಕ್ಕಿಗೆ ಪೋಸ್ಟ್ ಆದ 19 ಘಂಟೆಗಳಲ್ಲಿ 65,203 ಲೈಕ್ ಹಾಗೂ 746 ಶೇರ್ ಅಗಿದೆ. ಈ ಫೊಟೋ ನೋಡುತ್ತಿದ್ದರೆ ತಿಳಿಯುತ್ತದೆ, ರಮ್ಯಾ ಮೇಡಂ ಅವರಿಗೆ ನಾಯಿ ಅಂದರೆ ಎಷ್ಟು, ಇಷ್ಟ ಅಂತ.


2. ಲಕ್ಕಿ ಸ್ಟಾರ್ ರಮ್ಯಾ
ಚಂದನವನದಲ್ಲಿ ಒಂದು ಕಾಲದಲ್ಲಿ ತಮ್ಮ ಅಂದ-ಚೆಂದದ ಮೂಲಕ ಸಂಚಲನ ಸೃಷ್ಟಿಸಿದ್ದ ನಟಿ ರಮ್ಯಾ ಅವರು ಈ ಫೊಟೋ ವನ್ನು ತಮ್ಮ ಪ್ರೊಫೈಲ್ ಚಿತ್ರವನ್ನಾಗಿ ಹಾಕಿಕೊಂಡಿದ್ದು, ಅಭಿಮಾನಿಗಳಿಂದ ಈ ಫೊಟೋ ಗೆ ಕಮೆಂಟ್, ಲೈಕ್, ಶೇರ್ ಗಳ ಸುರಿಮಳೆಯೇ ಸುರಿಯುತ್ತಿದೆ. ಈ ಫೊಟೋಗೆ 296 ಶೇರ್ ಹಾಗೂ 43,968 ಲೈಕ್ ಗಳು ಬಂದಿವೆ.


3. ವರನಟ ಡಾ.ರಾಜ್ ಕುಮಾರ್ ಅವರೊಂದಿಗೆ
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರೊಂದಿಗೆ 'ಅಭಿ', 'ಆಕಾಶ್' ಹಾಗೂ 'ಅರಸು' ಚಿತ್ರದಲ್ಲಿ ನಟಿಸಿರುವ ರಮ್ಯಾ ಶೂಟಿಂಗ್ ಸಂದರ್ಭದಲ್ಲಿ ನಟ ಸಾರ್ವಭೌಮ ವರನಟ ಡಾ.ರಾಜ್ ಕುಮಾರ್ ಅವರೊಂದಿಗೆ ಇದ್ದ ಒಡನಾಟವನ್ನು ಹಂಚಿಕೊಂಡಿದ್ದಾರೆ. 'ಅಪ್ಪಾಜಿ ಅವರು ಯಾವಾಗಲೂ ಏನಾದರೂ ಒಂದು ಜೋಕ್ ಮಾಡ್ತಾನೆ ಇರ್ತಾ ಇದ್ರು, ಜೊತೆಗೆ ಅದನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದರು. ಹಾಗೂ ಯಾವಾಗಲೂ ನಮ್ಮನ್ನು ಉತ್ಸಾಹದಿಂದ ಇರುವಂತೆ ಪ್ರೇರೇಪಿಸುತ್ತಿದ್ದರು, ಎಂದಿದ್ದಾರೆ.


4. 'ಅಭಿ' ಚಿತ್ರದ ಶೂಟಿಂಗ್ ಸಂದರ್ಭದಲ್ಲಿ
ವರನಟ ಡಾ.ರಾಜ್ ಅವರನ್ನು ನಟಿ ರಮ್ಯಾ ಅವರು ಅಪ್ಪಾಜಿ ಎಂದು ಪ್ರೀತಿಯಂದ ಕರೆಯುತ್ತಿದ್ದರು. ಅಂದಹಾಗೆ ಡಾ.ರಾಜ್ ಅವರ ಫೇವರೆಟ್ ಹೀರೋಯಿನ್ ರಮ್ಯಾ ಆಗಿದ್ರಂತೆ, ಇನ್ನೊಂದು ವಿಶೇಷ ಏನಪ್ಪಾ ಅಂದ್ರೆ ಅಪ್ಪಾಜಿ ಅವರ ಫೇವರೆಟ್ ಹಾಡು 'ನೀನೇ ನೀನೇ'. ಆಗಿತ್ತಂತೆ. ಐ ಮಿಸ್ ಯೂ ಅಪ್ಪಾಜಿ ಎಂದು ರಮ್ಯಾ ಅವರು 'ಅಭಿ' ಚಿತ್ರದ ಶೂಟಿಂಗ್ ಸ್ಪಾಟ್ ನಲ್ಲಿ ನಡೆದ ಘಟನೆಯನ್ನು ಹಂಚಿಕೊಂಡಿದ್ದಾರೆ.


5. ಯಶ್ ಜೊತೆ ನಾಯಿ ಪ್ರೇಮಿ ರಮ್ಯಾ
ರಾಧಿಕಾ ಕುಮಾರಸ್ವಾಮಿ ನಿರ್ಮಾಣದಲ್ಲಿ ಮೂಡಿಬಂದಿದ್ದ 'ಲಕ್ಕಿ' ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ಜೊತೆ ನಟಿ ರಮ್ಯಾ ಅವರು ಕಾಣಿಸಿಕೊಂಡಿದ್ದು, ಈ ಚಿತ್ರದಲ್ಲಿ ರಮ್ಯಾ ಅವರು ನಾಯಿ ಪ್ರೇಮಿಯಾಗಿದ್ದರು. ಇನ್ನು ರೀಲ್ ನಲ್ಲಿ ಮಾತ್ರವಲ್ಲದೇ ರಿಯಲ್ ಲೈಫ್ ನಲ್ಲೂ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅವರು ನಾಯಿ ಪ್ರೇಮಿ ಎಂದು ನಿಮಗೆ ಈಗಾಗಲೇ ತಿಳಿದಿದೆ ಅಲ್ವಾ.
Fresh Kannada

Fresh Kannada

No comments:

Post a Comment

Google+ Followers

Powered by Blogger.