Breaking News
recent

ಶಿವಲಿಂಗ ಚಿತ್ರಕ್ಕೆ ಸಮಸ್ಯೆಯಾಗಿದೆ ಕಿಲ್ಲಿಂಗ್ ವೀರಪ್ಪನ್

ಎಲ್ಲವೂ ಎಂದುಕೊಂಡಂತೆ ಆಗಿದ್ದರೆ ಶಿವರಾಜ್‍ಕುಮಾರ್ ನಟನೆಯ `ಕಿಲ್ಲಿಂಗ್ ವೀರಪ್ಪನ್’ ಚಿತ್ರ ಇಷ್ಟೊತ್ತಿಗಾಗಲೇ  ಥಿಯೇಟರ್‍ನಲ್ಲಿರಬೇಕಾಗಿತ್ತು. ಆದರೆ ದೀಪಾವಳಿ ಮುಗಿದರೂ ಕಿಲ್ಲಿಂಗ್ ವೀರಪ್ಪನ್ ತೆರೆಗೆ ಬಾರದಿರುವುದು, ಶಿವಣ್ಣನ ಮತ್ತೊಂದು ಸಿನಿಮಾ ಶಿವಲಿಂಗ ಚಿತ್ರಕ್ಕೆ ಸಮಸ್ಯೆ ತಂದೊಡಿದೆ.
ಶಿವಲಿಂಗ ಚಿತ್ರಕ್ಕೆ ಸಮಸ್ಯೆಯಾಗಿದೆ ಕಿಲ್ಲಿಂಗ್ ವೀರಪ್ಪನ್

ಶಿವರಾಜ್‍ಕುಮಾರ್ ನಟನೆಯ ಶಿವಲಿಂಗ ಚಿತ್ರಕ್ಕೆ ಕಿಲ್ಲಿಂಗ್ ವೀರಪ್ಪನ್ ಚಿತ್ರ ಸಮಸ್ಯೆಯಾಗಿದ್ದು, ಚಿತ್ರ ಬಿಡುಗಡೆ ಮೇಲೆ ಇದು ಪರಿಣಾಮ ಬೀರಿದೆಯಂತೆ. ಶಿವಲಿಂಗ ಚಿತ್ರ ತೆರೆಗೆ ಬರಲು ರೆಡಿಯಾಗಿದ್ದು, ಕಿಲ್ಲಿಂಗ್ ವೀರಪ್ಪನ್ ಬಂದ ಕೆಲವು ವಾರಗಳ ನಂತರ ತೆರೆಗೆ ಬರಲು ಮುಹೂರ್ತ ಫಿಕ್ಸ್ ಮಾಡಿಕೊಂಡಿತ್ತು. ಆದರೆ ಈಗ ಕಿಲ್ಲಿಂಗ್ ವೀರಪ್ಪನ್ ಚಿತ್ರ ತಡವಾಗಿ ಬರುತ್ತಾ ಇರುವುದರಿಂದ ಶಿವಲಿಂಗ ಚಿತ್ರವನ್ನು ಯಾವಾಗ ತೆರೆಗೆ ತರಬೇಕು ಎಂಬ ಗೊಂದಲದಲ್ಲಿ ಚಿತ್ರತಂಡ ಇದೆ.
ಸದ್ಯದ ಮಟ್ಟಿಗೆ ಕಿಲ್ಲಿಂಗ್ ವೀರಪ್ಪನ್ ಚಿತ್ರದ ಬಿಡುಗಡೆಯ ದಿನಾಂಕ ಘೋಷಣೆಯಾಗಿಲ್ಲ. ಒಂದು ವೇಳೆ ಚಿತ್ರ ಇನ್ನಷ್ಟು ತಡವಾಗಿ ಬರುವುದಾದರೆ ಆ ಗ್ಯಾಪ್‍ನಲ್ಲಿ ನಾವೇ ಬಂದು ಬಿಡೋಣ ಎಂಬ ಇನ್ನೊಂದು ಆಯ್ಕೆ ಶಿವಲಿಂಗ ಚಿತ್ರತಂಡದ್ದು. ಒಟ್ಟಾರೆ ಶಿವರಾಜ್‍ಕುಮಾರ್ ನಟನೆಯ ಎರಡೆರಡು ಚಿತ್ರಗಳು ಸದ್ಯ ತೆರೆಗೆ ಬರಲು ಸಿದ್ಧವಾಗಿವೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.