Breaking News
recent

ನಿಮ್ಮ ಮನೆ ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ಪಣ ತೊಟ್ಟ ಅಪ್ಪು-ರಮ್ಯಾ

ನಮ್ಮ ಸ್ಯಾಂಡಲ್ ವುಡ್ ನ ಲಕ್ಕಿ ಸ್ಟಾರ್ ರಮ್ಯಾ ಅವರು ತೆರೆ ಮೇಲೆ ಕಾಣಿಸಿಕೊಂಡು ತುಂಬಾ ದಿನಗಳಾಯಿತು ಅನ್ನುವಾಗಲೇ, ಇದೀಗ ಜಾಹೀರಾತು ಕೇತ್ರದಲ್ಲಿ ತಮ್ಮನ್ನು ತಾವು ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ.
ನಿಮ್ಮ ಮನೆ ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ಪಣ ತೊಟ್ಟ ಅಪ್ಪು-ರಮ್ಯಾ

ಈ ಮೊದಲು ವಿಕೆಸಿ ಪ್ರೈಡ್ ನನ್ನ ಹೆಮ್ಮೆ ಅಂತ 'ವಿಕೆಸಿ' ಪ್ರೈಡ್ ಚಪ್ಪಲಿ ಜಾಹೀರಾತಿನಲ್ಲಿ ಕಾಣಿಸಿಕೊಂಡು ಯಾವಾಗಲೂ ತಮ್ಮ ಅಭಿಮಾನಿಗಳಿಗೆ ದರ್ಶನ ನೀಡುತ್ತಿದ್ದರು. ಇದೀಗ ಮತ್ತೊಮ್ಮೆ ತುಂಬಾ ದಿನಗಳ ನಂತರ ಜಾಹಿರಾತು ಲೋಕದಲ್ಲಿ ಮಿಂಚುತ್ತಿದ್ದಾರೆ.

ಒಂದು ಕಾಲದಲ್ಲಿ ಚಂದನವನದಲ್ಲಿ, ಬೆಸ್ಟ್ ಆನ್ ಸ್ಕ್ರಿನ್ ಕಪಲ್ ಅಂತಾನೇ ಖ್ಯಾತಿ ಗಳಿಸಿದ್ದ ಮೋಹಕ ತಾರೆ ರಮ್ಯಾ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಜುಗಲ್ ಬಂದಿಯಲ್ಲಿ ಈ ಹೊಚ್ಚ ಹೊಸ ಜಾಹೀರಾತು ಮೂಡಿಬರಲಿದೆ.

ಅಂದಹಾಗೆ ಎಲ್‍ಇಡಿ ಬಲ್ಬ್ ಜಾಗೃತಿ ಒಂದರ ರಾಯಭಾರಿಗಳಾಗಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಮಾಜಿ ಸಂಸದೆ ಕಮ್ ನಟಿ ರಮ್ಯಾ ಅವರು ನೇಮಕಗೊಂಡಿದ್ದಾರೆ.

ಕರ್ನಾಟಕ ಸರ್ಕಾರ ಆಯೋಜಿಸುತ್ತಿರುವ ಈ ವಿಶೇಷ ಜಾಹೀರಾತು ಇಂಧನ ಇಲಾಖೆಯ ಜಾಗೃತಿ ಹಾಗೂ ಎಲ್ ಇಡಿ ಬಲ್ಬ್ ಗಳ ಕುರಿತಾಗಿದೆ. ಇನ್ನು ಇದಲ್ಲದೆ, ಈ ಮೊದಲು ಕೂಡ ನಟ ಪುನೀತ್ ಅವರು ರಾಜ್ಯ ಸರ್ಕಾರಕ್ಕೆ ಸಂಬಂಧಪಟ್ಟ ಜಾಹೀರಾತಿನಲ್ಲಿ ಮಿಂಚಿದ್ದರು.

ಕರ್ನಾಟಕ ಇಂಧನ ಇಲಾಖೆಯಿಂದ ವಿಶೇಷ ಜಾಗೃತಿ ಅಭಿಯಾನಯಕ್ಕೆ ಸೋಮವಾರ ಅಧಿಕೃತ ಚಾಲನೆ ಸಿಗಲಿದ್ದು, ಇಂಧನ ಸಚಿವ ಡಿ.ಕೆ.ಶಿವಕುಮಾರ್ ಈ ಯೋಜನೆಯ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಸಂಪೂರ್ಣ ಮಾಹಿತಿ ನೀಡಲಿದ್ದಾರೆ.
ಅಸಲು ಏನಿದು ಯೋಜನೆ?

ಕರ್ನಾಟಕ ರಾಜ್ಯ ಸರ್ಕಾರ ಎಲ್‍ಇಡಿ ಬಳಕೆ ಹೆಚ್ಚಿಸಲು ಕ್ರಮಗಳನ್ನು ಕೈಗೊಂಡಿದ್ದು, ಮೊದಲ ಹಂತದಲ್ಲಿ ಗೃಹ ಬಳಕೆಗೆ ಆರು ಕೋಟಿ ಎಲ್‍ಇಡಿ ಬಲ್ಬನ್ನು ವಿತರಿಸುವ ಉದ್ದೇಶವನ್ನು ಇಟ್ಟುಕೊಂಡಿದೆ.

2ನೇ ಹಂತದಲ್ಲಿ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಬೀದಿ ದೀಪಗಳಿಗೆ ಎಲ್‍ಇಡಿ ಬಲ್ಬ್ ಅಳವಡಿಸುವ ಗುರಿ ಇಟ್ಟುಕೊಳ್ಳಲಾಗಿದೆ.
ಒಂದು ಎಲ್‍ಇಡಿ ಬಲ್ಬ್ ಗೆ ಸುಮಾರು 90ರಿಂದ 100 ರೂ. ಬೆಲೆ ನಿಗದಿಪಡಿಸುವ ಸಾಧ್ಯತೆಯಿದ್ದು, ಈ ಯೋಜನೆ ಪ್ರಕಾರ ಗೃಹ ಬಳಕೆಗಾಗಿ ಪ್ರತಿ ಮನೆಗೆ 9 ವ್ಯಾಟ್ ಸಾಮರ್ಥ್ಯದ ಗರಿಷ್ಠ 10 ಬಲ್ಬ್ ಗಳನ್ನು ವಿತರಿಸುವ ಗುರಿಯನ್ನು ರಾಜ್ಯ ಸರ್ಕಾರ ಇಟ್ಟುಕೊಂಡಿದೆ.

ಒಂದು ಬಲ್ಬ್ ಗೆ 10 ರೂ.ಗಳಂತೆ ಪ್ರತಿ ತಿಂಗಳು ವಿದ್ಯುತ್ ಬಿಲ್ ಮೂಲಕ ವಸೂಲು ಮಾಡುವುದಾಗಿ ಈ ಹಿಂದೆ ಸಚಿವ ಡಿಕೆ ಶಿವಕುಮಾರ್ ತಿಳಿಸಿದ್ದರು. ಅದರಂತೆ ಇದೀಗ ವಿದ್ಯುತ್ ಉಳಿತಾಯದ ಬಗ್ಗೆ ಜನರಿಗೆ ಹೆಚ್ಚಿನ ಮಾಹಿತಿ ಈ ಜಾಹೀರಾತು ಮೂಲಕ ತಿಳಿಯಲಿದೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.