Breaking News
recent

'ಸುಮ್ಮನೆ ಕುಣಿದು ಹಣ ಮಾಡುವ ಇರಾದೆ ನನ್ನದಲ್ಲ' ಎಂದ ನಟ ಯಾರು?

ಕನ್ನಡ ಚಿತ್ರೋದ್ಯಮದಲ್ಲಿ ಅತ್ಯಂತ ಕ್ಲಿಷ್ಟಕರ ಪಾತ್ರಗಳ ಜೊತೆಗೆ ವಿಭಿನ್ನ ಪಾತ್ರಗಳ ಮೂಲಕ ಹೊಸತನಕ್ಕೆ ತೆರೆದುಕೊಳ್ಳುವ ನಟರು ಬೆರಳೆಣಿಕೆಯಷ್ಟು ಮಂದಿ ನಮ್ಮಲ್ಲಿದ್ದಾರೆ. ಅಂತದ್ರಲ್ಲಿ ಇದೀಗ ಅದೇ ಸಾಲಿಗೆ ಸೇರುವ ಹಾಗೂ ಆ ಸಾಲಿನಲ್ಲಿ ಮುಂಚೂಣಿಯಲ್ಲಿರುವ ನಟನೆಂದರೆ ಅದು ಬಹುಮುಖ ಪ್ರತಿಭೆಯುಳ್ಳ ನಟ ಕಿಶೋರ್ ಅವರು.
'ಸುಮ್ಮನೆ ಕುಣಿದು ಹಣ ಮಾಡುವ ಇರಾದೆ ನನ್ನದಲ್ಲ' ಎಂದ ನಟ ಯಾರು?


Octopus (2015) Kannada Movie Mp3 Songs Download

ಕನ್ನಡದಲ್ಲೂ ಮಾತ್ರವಲ್ಲದೆ ತಮಿಳು, ತೆಲುಗು ಭಾಷೆಗಳಲ್ಲೂ ತಮ್ಮ ಅಭಿನಯವನ್ನು ತೋರಿರುವ ನಟ ಕಿಶೋರ್ ಅವರಿಗೆ ಈ ವಾರ ಸಂಭ್ರಮದ ದಿನ. ಯಾಕಂತೀರಾ?, ಯಾಕೆಂದರೆ 'ವಾಸ್ಕೋಡಿಗಾಮ' ಚಿತ್ರದ ನಂತರ ಕಿಶೋರ್ ಅವರ ಬಹುನಿರೀಕ್ಷಿತ ಚಿತ್ರ 'ಅಕ್ಟೋಪಸ್' ಇದೇ ವಾರ (ನವೆಂಬರ್ 19ರಂದು) ಭರ್ಜರಿಯಾಗಿ ತೆರೆ ಕಾಣುತ್ತಿದೆ.

ಮೊನ್ನೆ ಮೊನ್ನೆ ತೆರೆ ಕಂಡು ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಗಿಟ್ಟಿಸಿಕೊಂಡ 'ವಾಸ್ಕೋಡಿಗಾಮ' ಚಿತ್ರದಲ್ಲಿ ನಟ ಕಿಶೋರ್ ಅವರು ಕಾಲೇಜು ಅಧ್ಯಾಪಕನಾಗಿ ಕಾಣಿಸಿಕೊಂಡಿದ್ದರು. ಇದೀಗ ನಟಿ ಯಜ್ಞಾ ಶೆಟ್ಟಿ ಹಾಗೂ ಕಿಶೋರ್ ಲೀಡ್ ರೋಲ್ ನಲ್ಲಿ ಮಿಂಚುತ್ತಿರುವ 'ಅಕ್ಟೋಪಸ್' ನಲ್ಲಿ ವೈದ್ಯರಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಪಿ ಅಣ್ಣಯ್ಯ ಆಕ್ಷನ್-ಕಟ್ ಹೇಳಿದ್ದಾರೆ.

'ಒಬ್ಬ ನಟನಾಗಿ ಚಿತ್ರ ಬಿಡುಗಡೆ ದಿನಾಂಕ ನನ್ನ ನಿರ್ಧಾರವಲ್ಲ. ಇಡೀ 'ಅಕ್ಟೋಪಸ್' ಚಿತ್ರತಂಡ, ಇದು ಬಿಡುಗಡೆಗೆ ಸರಿಯಾದ ಸಮಯ ಎಂದು ತಿಳಿದಿದ್ದರೆ ಅದಕ್ಕೆ ನನ್ನ ಒಮ್ಮತವೂ ಇರುತ್ತದೆ. ತೆರೆಯ ಮೇಲೆ ನನ್ನನ್ನು ನೋಡಿ ನೋಡಿ ಬೇಜಾರಾದ ಪ್ರೇಕ್ಷಕನಿಗೆ ಅತಿಯೆನ್ನಿಸಬಾರದು ಎಂಬುದಷ್ಟೆ ನನ್ನ ಕಾಳಜಿ' ಎನ್ನುತ್ತಾರೆ ಬಹಭಾಷಾ ನಟ ಕಿಶೋರ್

ವಿಭಿನ್ನ ಪಾತ್ರಗಳತ್ತ ಒಲವು ತೋರುವ ನಟ ಕಿಶೋರ್ ಅವರು 'ವಾಸ್ಕೋಡಿಗಾಮ'ದಲ್ಲಿ ಪ್ರಾದ್ಯಾಪಕ 'ತೂಂಗವನಮ್' ನಲ್ಲಿ ಖಳನಾಯಕನಾಗಿ ಮಿಂಚಿದರೆ, ಇದೀಗ ಅಕ್ಟೋಪಸ್ ನಲ್ಲಿ ವೈದ್ಯನಾಗಿ ಕಾಣಿಸಿಕೊಳ್ಳಲಿದ್ದಾರೆ.

'ನಾನು ಪಾತ್ರಗಳ ಜೊತೆ ಜೂಜಾಡುತ್ತಿದ್ದೇನೆ ಎಂಬುದು ಸರಿಯೋ ಅಲ್ಲವೋ ಗೊತ್ತಿಲ್ಲ, ಆದರೆ ಒಪ್ಪಿಗೆಯಾದದನ್ನು ಮಾಡಲು ಎಲ್ಲಾ ನಟನೂ ಪ್ರಯತ್ನಿಸಬೇಕು. ಸುಮ್ಮನೆ ಕುಣಿದು ಹಣ ಮಾಡುವ ಇರಾದೆ ನನ್ನದಲ್ಲ. ಸಿನಿಮಾ ಎಂಬುದು ಕಲೆ. ನಾನು ನನ್ನ ಸಿನಿಮಾಗಳ ಜೊತೆಗೆ ಎಷ್ಟು ಪ್ರಾಮಾಣಿಕವಾಗಿದ್ದೇನೆಯೋ ತಿಳಿದಿಲ್ಲ. ನನ್ನ ನಟನೆ ತುಸು ಬದಲಾವಣೆ ತರುವುದಾದರೆ ಒಳ್ಳೆಯದೇ' ಎನ್ನುತ್ತಾರೆ ನಟ ಕಿಶೋರ್.

ವೈದ್ಯಕೀಯ ರಂಗದಲ್ಲಿರುವ ಮಾಫಿಯಾ ಕುರಿತ ಕಥೆಯಾಧರಿತ ಥ್ರಿಲ್ಲರ್ ಸಿನಿಮಾ 'ಅಕ್ಟೋಪಸ್'. ಅಲ್ಲದೇ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರೊಂದಿಗೆ 'ಕಬಾಲಿ' ಚಿತ್ರದಲ್ಲೂ ಮಿಂಚುತ್ತಿದ್ದಾರೆ. ಜೊತೆಗೆ ನಿರ್ದೇಶಕ ಜಿಯಾವುಲ್ಲ ಖಾನ್ ಅವರ ಸಿನಿಮಾದಲ್ಲೂ ನಟಿಸಲಿದ್ದಾರೆ.

ಒಟ್ನಲ್ಲಿ ಸ್ಯಾಂಡಲ್ ವುಡ್ ಸೇರಿದಂತೆ ಕಾಲಿವುಡ್, ಟಾಲಿವುಡ್ ಕ್ಷೇತ್ರದಲ್ಲೂ ಸಖತ್ ಬ್ಯುಸಿಯಾಗಿರುವ ನಟ ಕಿಶೋರ್ ಅವರು ವಿಭಿನ್ನ 'ಅಕ್ಟೋಪಸ್' ಚಿತ್ರದ ಮೂಲಕ ನವೆಂಬರ್ 19 ರಂದು ತೆರೆ ಮೇಲೆ ತಮ್ಮ ದರ್ಶನ ನೀಡಲಿದ್ದಾರೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.