Breaking News
recent

ನಟ ಅನಂತ್ ನಾಗ್ ಅಭಿಮಾನಿಗಳಲ್ಲಿ 'ಕ್ಷಮೆ' ಯಾಚಿಸಿದ್ದು, ಯಾಕೆ?

ಸ್ಯಾಂಡಲ್ ವುಡ್ ನ ಎವರ್ ಗ್ರೀನ್ ನಟ ಅನಂತ್ ನಾಗ್ ಅವರು ತಮ್ಮ ಅಭಿಮಾನಿಗಳಲ್ಲಿ ಕ್ಷಮೆ ಯಾಚಿಸಿದ್ದಾರೆ. ಯಾಕಂತೀರಾ?, ಯಾಕೆಂದರೆ, ನಿರ್ದೇಶಕ ಗಡ್ಡಾ ವಿಜಿ ಅವರು ಆಕ್ಷನ್-ಕಟ್ ಹೇಳಿದ್ದ 'ಪ್ಲಸ್' ಚಿತ್ರ ಕಳೆದ ತಿಂಗಳಿನಲ್ಲಿ ತೆರೆ ಕಂಡಿತ್ತು. ಈ ಚಿತ್ರದಲ್ಲಿ ನಟ ಅನಂತ್ ನಾಗ್ ಅವರು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಟ್ರೈಲರ್ ಮೂಲಕ ಭಾರಿ ನಿರೀಕ್ಷೆ ಹುಟ್ಟಿಸಿದ್ದ 'ಪ್ಲಸ್' ಎಂಬ ಸಿನಿಮಾ, ದೀಪಾವಳಿ ಪಟಾಕಿಯಂತೆ ಢಂ ಢಂ ಎಂದು ಸದ್ದು ಮಾಡದೆ, ಒದ್ದೆಯಾದ ಪಟಾಕಿಯಂತೆ ಟುಸ್ ಎಂದು ಅಲ್ಲಿಗೆ ಸೈಲೆಂಟಾಗಿತ್ತು.

ಅಂದಹಾಗೆ ವಿಭಿನ್ನ ಗೆಟಪ್ ನಲ್ಲಿ ಮಿಂಚಿದ್ದ ಎವರ್ ಗ್ರೀನ್ ನಟ ಅನಂತ್ ನಾಗ್ ಅವರು ತಾವು ಯಾಕೆ ತಮ್ಮ ಅಭಿಮಾನಿಗಳಲ್ಲಿ ಕ್ಷಮೆ ಕೇಳುತ್ತಿದ್ದೇನೆ ಎಂಬುದನ್ನು ತಮ್ಮ ಮಾತುಗಳಲ್ಲಿಯೇ ಸ್ಪಷ್ಟನೆ ನೀಡಿದ್ದಾರೆ.

'ನನಗೆ ನಿಜವಾಗಲೂ ಭಾರಿ ಪ್ರಚಾರ ಸಿಕ್ಕಿತ್ತು, 'ಪ್ಲಸ್' ಚಿತ್ರದಲ್ಲಿ ಹಾಗೂ ಇಡೀ ಚಿತ್ರತಂಡ ನನ್ನ ಫೋಟೋವನ್ನು ಸಿನಿಮಾದ ಪ್ರಚಾರಕ್ಕೆ ಬಳಸಿಕೊಂಡಿದ್ದರು. ಅಲ್ಲದೇ ಹೆಚ್ಚಿನ ಅಭಿಮಾನಿಗಳು ನನ್ನ ಹೊಸ ಸ್ಟೈಲಿಷ್ ಲುಕ್ ನೋಡಿ, ಭಾರಿ ಭರವಸೆಯನ್ನು ಇಟ್ಟುಕೊಂಡು ಸಿನಿಮಾ ನೋಡಲು ಥಿಯೇಟರ್ ಗೆ ನುಗ್ಗಿದ್ದರು.

ಆದಾಗ್ಯೂ 'ಪ್ಲಸ್' ಸಿನಿಮಾ ಜನರ ನಿರೀಕ್ಷೆಗೂ ಮೀರಿ ಸೋತಿದ್ದು, ಬೇಸರದ ಸಂಗತಿ. ಆದರೆ ನಾನು ಈಗಲೂ ಹೇಳುತ್ತೇನೆ, 'ಪ್ಲಸ್' ಸಿನಿಮಾ ಒಳ್ಳೆ ಕಥಾಹಂದರವನ್ನು ಹೊಂದಿತ್ತು. ಆದರೆ ಚಿತ್ರದ ಎಡಿಟಿಂಗ್ ಟೇಬಲ್ ನಲ್ಲಿ ಎಲ್ಲೋ ಮಿಸ್ ಹೊಡೆದಿದೆ ಎಂದು ನನಗನ್ನಿಸಿದೆ ಎಂದು ಅನಂತ್ ನಾಗ್ ನುಡಿಯುತ್ತಾರೆ.

'ನಾನು ಸಿನಿಮಾ ನೋಡಿದ ಮೇಲೆ ಚಿತ್ರವನ್ನು ಸ್ವಲ್ಪ ಕಡಿಮೆ ಮಾಡಲು ಕೆಲವು ಸಲಹೆಗಳನ್ನು ನೀಡಿದೆ. ಯಾಕೆಂದರೆ 'ಪ್ಲಸ್' ಸಿನಿಮಾ ಸ್ವಲ್ಪ ಉದ್ದ ಇತ್ತು. ಈಗಿನ ಕಾಲದಲ್ಲಿ ಅತ್ಯಂತ ಉದ್ದವಾದ ಸಿನಿಮಾ ನೋಡಲು ಜನ ಇಷ್ಟಪಡುವುದಿಲ್ಲ. ಯಾಕೆಂದರೆ ಈಗಿನ ಕಾಲದ ಪ್ರೇಕ್ಷಕರಿಗೆ ಅಷ್ಟೊಂದು ಟೈಮ್ ಇರೋದಿಲ್ಲ.

'ಆದರೆ ಚಿತ್ರ ನಿರ್ಮಾಪಕರು ನನ್ನ ಸಲಹೆಯನ್ನು ಕೇಳಲಿಲ್ಲ, ಅದಕ್ಕೆ ಸಿನಿಮಾ ತೋಪೆದ್ದು, ಹೋಯಿತು. ಚಿತ್ರದಲ್ಲಿ ನನ್ನ ಪಾತ್ರ ಉತ್ತಮವಾಗಿತ್ತು. ಒಟ್ಟಾರೆ ಹೇಳಬೇಕೆಂದರೆ ಸಿನಿಮಾ ಯಾವುದೇ ಸಾಮರ್ಥ್ಯ ಹೊಂದಿರಲಿಲ್ಲ. ಆದ್ದರಿಂದ ನಾನು ನನ್ನ ಅಭಿಮಾನಿಗಳಲ್ಲಿ ಕ್ಷಮೆ ಕೇಳುತ್ತಿದ್ದೇನೆ ಎಂದು ಹಿರಿಯ ನಟ ಅನಂತ್ ನಾಗ್ ಅವರು ಬಹಿರಂಗವಾಗಿ ಕ್ಷಮೆ ಯಾಚಿಸಿದ್ದಾರೆ.

ಭಟ್ರ ಶಿಷ್ಯಾ ನಿರ್ದೇಶಕ ಗಡ್ಡಾ ವಿಜಿ ಅವರು 'ಪ್ಲಸ್' ಚಿತ್ರದಲ್ಲಿ ನಟ ಚೇತನ್ ಚಂದ್ರ, ನಟಿ ಐಶಾನಿ ಶೆಟ್ಟಿ, ರಿತೇಶ್ ಸೇರಿದಂತೆ ರವಿಶಂಕರ್, ಸುಧಾರಾಣಿ ಮುಂತಾದವರು ಪ್ರಮುಖ ಪಾತ್ರದಲ್ಲಿ ಮಿಂಚಿದ್ದರು.
Fresh Kannada

Fresh Kannada

No comments:

Post a Comment

Google+ Followers

Powered by Blogger.